For Quick Alerts
ALLOW NOTIFICATIONS  
For Daily Alerts
 

1ನೇ ಟೆಸ್ಟ್: ಪೂಜಾರ ಅಭಯ, ಆಸೀಸ್ ವಿರುದ್ಧ ಭಾರತ ಇನ್ನಿಂಗ್ಸ್ ಮುನ್ನಡೆ

IND VS AUS TEST CRICKET : ಆಸಿಸ್ ಹಿಮ್ಮೆಟ್ಟಿಸಿದ್ದು ಇವರೆ..! | Oneindia Kannada
Australia vs India, 1st Test, Day 3 - Live Cricket Score

ಅಡಿಲೇಡ್, ಡಿಸೆಂಬರ್ 8: ಅಡಿಲೇಡ್ ನಲ್ಲಿ ನಡೆಯುತ್ತಿರುವ ಭಾರತ vs ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ಗೆ ಇಳಿದಿರುವ ಆಸ್ಟ್ರೇಲಿಯವನ್ನು ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಗಿದೆ. ಶನಿವಾರ (ಡಿಸೆಂಬರ್ 8) ಆಸೀಸ್, 98.4 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 235 ರನ್ ಗಳಿಸುವ ಮೂಲಕ ಇನ್ನಿಂಗ್ಸ್ ಮುಗಿಸುವಂತೆ ನೋಡಿಕೊಂಡ ಭಾರತ ದ್ವಿತೀಯ ಇನ್ನಿಂಗ್ಸ್‌ಗೆ ಇಳಿದಿದೆ.

ಸ್ಕೋರ್ ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
43623

ಕೆಎಲ್ ರಾಹುಲ್ 44, ಚೇತೇಶ್ವರ್ ಪೂಜಾರ 40, ವಿರಾಟ್ ಕೊಹ್ಲಿ 34 ರನ್ ಬೆಂಬಲದೊಂದಿಗೆ ಭಾರತ ಶನಿವಾರ ದಿನದಾಂತ್ಯಕ್ಕೆ 61 ಓವರ್‌ಗೆ 3 ವಿಕೆಟ್ ಕಳೆದು 151 ರನ್ ಪೇರಿಸಿದೆ. ಪೂಜಾರ ಮತ್ತು ಅಜಿಂಕ್ಯ ರಹಾನೆ ಕ್ರೀಸ್‌ನಲ್ಲಿದ್ದಾರೆ. ಶುಕ್ರವಾರ (ಡಿಸೆಂಬರ್ 7) ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್ ದಿನದಾಂತ್ಯಕ್ಕೆ 88 ಓವರ್‌ಗಳಲ್ಲಿ 7 ವಿಕೆಟ್ ಕಳೆದು 191 ರನ್ ಗಳಿಸಿತ್ತು.

ಆಸ್ಟ್ರೇಲಿಯಾ ಇನ್ನಿಂಗ್ಸ್‌ ವೇಳೆ ಹೆಡ್ 61 ರನ್ ಗಳಿಸಿ ತಂಡದ ಮೊತ್ತ ಹೆಚ್ಚುವಂತೆ ನೋಡಿಕೊಂಡರು. ಶುಕ್ರವಾರ ದಿನದಾಟದ ಕೊನೆಗೆ ಹೆಡ್ ಮತ್ತು ಮಿಚೆಲ್ ಸ್ಟಾರ್ಕ್ ಕ್ರೀಸ್ ನಲ್ಲಿದ್ದರು. ಈ ವೇಳೆ ಭಾರತ ಪರ ಆರ್ ಅಶ್ವಿನ್ 3, ಇಶಾಂತ್ ಶರ್ಮಾ ಮತ್ತು ಜಸ್‌ಪ್ರೀತ್ ಬೂಮ್ರಾ ತಲಾ 2 ವಿಕೆಟ್ ಕೆಡವಿ ಆಸೀಸ್ ರನ್ ಕದಿಯುವಿಕೆಗೆ ತಡೆಯೊಡ್ಡಿದ್ದರು.

ಗುರುವಾರ (ಡಿಸೆಂಬರ್ 6) ಟಾಸ್ ಗೆದ್ದು ಮೊದಲ ದಿನದಾಟಕ್ಕಿಳಿದಿದ್ದ ಭಾರತ ದಿನದಾಂತ್ಯಕ್ಕೆ 87.5 ಓವರ್‌ಗಳಲ್ಲಿ 9 ವಿಕೆಟ್ ಕಳೆದು 250 ರನ್ ಪೇರಿಸಿತ್ತು. ಅದೂ ಅನುಭವಿ ಆಟಗಾರ ಚೇತೇಶ್ವರ ಪೂಜಾರ ಅವರು ಶತಕ (123 ರನ್) ಬಾರಿಸಿ ಭಾರತದ ರನ್ ಕುಸಿತವನ್ನು ತಡೆದಿದ್ದರು.

ಭಾರತ ತಂಡ: ಮುರಳಿ ವಿಜಯ್, ಲೋಕೇಶ್ ರಾಹುಲ್, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ರಿಷಬ್ ಪಂತ್ (ವಿಕೆ), ರವಿಚಂದ್ರನ್ ಅಶ್ವಿನ್, ಜಸ್‌ಪ್ರೀತ್ ಬೂಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ.

ಆಸ್ಟ್ರೇಲಿಯಾ ತಂಡ: ಮಾರ್ಕಸ್ ಹ್ಯಾರಿಸ್, ಆ್ಯರನ್ ಫಿಂಚ್, ಉಸ್ಮಾನ್ ಖವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್ಕಾಂಬ್, ಟ್ರಾವಿಸ್ ಹೆಡ್, ಟಿಮ್ ಪೈನೆ (ಸಿ & ವಿ.ಕೆ), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜ್ವುಡ್, ನಾಥನ್ ಲಿಯಾನ್.

Story first published: Saturday, December 8, 2018, 15:12 [IST]
Other articles published on Dec 8, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+