For Quick Alerts
ALLOW NOTIFICATIONS  
For Daily Alerts
 

ಅಡಿಲೇಡ್ ಟೆಸ್ಟ್, Live Score: ಆಸೀಸ್ ಎದುರು ಜಯದ ಸನಿಹದಲ್ಲಿ ಭಾರತ

 Australia vs India, Ist Test, Day 4: Ashwin, Shami keep India in front

ಅಡಿಲೇಡ್, ಡಿಸೆಂಬರ್ 9: ಅಡಿಲೇಡ್ ಟೆಸ್ಟ್ ಗೆಲ್ಲಲು ಆಸ್ಟ್ರೇಲಿಯಾಕ್ಕೆ 323 ರನ್ ಗುರಿ ನೀಡಿದ ಭಾರತ, ಪಂದ್ಯದ ಮೇಲೆ ಹಿಡಿತ ಸಾಧಿಸಿದೆ. ನಾಲ್ಕನೇ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡವು 104/4 ಸ್ಕೋರ್ ಮಾಡಿದೆ. ಇದಕ್ಕೂ ಮುನ್ನ ಭಾರತ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 307ಕ್ಕೆ ಆಲೌಟ್ ಆಗಿತ್ತು.

ಆಸ್ಟ್ರೇಲಿಯಾ ಪರ ಮಾರ್ಕಸ್ ಹ್ಯಾರೀಸ್ 26, ಅರೋನ್ ಫಿಂಚ್ 11 ರನ್ ಗಳಿಸಿ ಔಟಾದರೆ, ಪೀಟರ್ ಹ್ಯಾಂಡ್ಸ್ ಕಂಬ್ 11 ಹಾಗೂ ಉಸ್ಮಾನ್ ಖವಾಜ8 ರನ್ ಗಳಿಸಿದರು. ದಿನದ ಅಂತ್ಯಕ್ಕೆ ಶಾನ್ ಮಾರ್ಷ್ 31 ಹಾಗೂ ಟ್ರಾವಿಸ್ ಹೆಡ್ 11 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ. ಆರ್ ಅಶ್ವಿನ್ ಹಾಗೂ ಮೊಹಮ್ಮದ್ ಶಮಿ ತಲಾ 2 ವಿಕೆಟ್ ಗಳಿಸಿದರು.

ಪಂದ್ಯದ Live Score Card ಕೆಳಗಿದೆ

1
43623

ಭಾರತದ ಎರಡನೇ ಇನ್ನಿಂಗ್ಸ್ ನಲ್ಲಿ ಕೆಎಲ್ ರಾಹುಲ್ 44, ಚೇತೇಶ್ವರ್ ಪೂಜಾರಾ 71, ವಿರಾಟ್ ಕೊಹ್ಲಿ 34, ಅಜಿಂಕ್ಯ ರಹಾನೆ 70, ರಿಷಬ್ ಪಂತ್ 28ರನ್ ಗಳಿಸಿ ರನ್ ಗತಿ ಹೆಚ್ಚಿಸಿದರು. ಆಸ್ಟ್ರೇಲಿಯಾ ಪರ ಸ್ಪಿನ್ನರ್ ನಾಥನ್ ಲಿಯಾನ್ 122ಕ್ಕೆ 6 ಹಾಗೂ ಮಿಚೆಲ್ ಸ್ಟಾಕ್ 3 ವಿಕೆಟ್ ಪಡೆದರು.

ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಗರಿಷ್ಠ ರನ್ ಕಲೆ ಹಾಕುವ ಯೋಜನೆ ಹಾಕಿತ್ತು. ಕೆಎಲ್ ರಾಹುಲ್ 44, ಚೇತೇಶ್ವರ್ ಪೂಜಾರ 40, ವಿರಾಟ್ ಕೊಹ್ಲಿ 34 ರನ್ ಬೆಂಬಲದೊಂದಿಗೆ ಭಾರತ ಶನಿವಾರ (ಡಿ.8) ದಿನದಾಂತ್ಯಕ್ಕೆ 61 ಓವರ್‌ಗೆ 3 ವಿಕೆಟ್ ಕಳೆದು 151 ರನ್ ಪೇರಿಸಿತ್ತು.

ಆಸೀಸ್, 98.4 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 235 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಮುಗಿಸುವಂತೆ ಭಾರತದ ಬೌಲರ್ ನೋಡಿಕೊಂಡಿದ್ದರು. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 250 ರನ್ ಕಲೆ ಹಾಕಿದ್ದರಿಂದ ಆಸೀಸ್ 15 ರನ್ ಹಿನ್ನಡೆ ಅನುಭವಿಸಿತ್ತು. ದ್ವಿತೀಯ ಇನ್ನಿಂಗ್ಸ್ ವೇಳೆ ಎಚ್ಚರಿಕೆಯ ಆಟವಾಡಿದ ಭಾರತಕ್ಕೆ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅಭಯ ನೀಡಿದ್ದರು. ಶನಿವಾರ (ಡಿ.8) ದಿನದಾಟದ ಅಂತ್ಯಕ್ಕೆ ಇಬ್ಬರೂ ಕ್ರೀಸ್‌ನಲ್ಲಿದ್ದರು.

Australia vs India, 1st Test, Day 4- Live Cricket Score

ಭಾರತ ತಂಡ: ಮುರಳಿ ವಿಜಯ್, ಲೋಕೇಶ್ ರಾಹುಲ್, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ರಿಷಬ್ ಪಂತ್ (ವಿಕೆ), ರವಿಚಂದ್ರನ್ ಅಶ್ವಿನ್, ಜಸ್‌ಪ್ರೀತ್ ಬೂಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ.

ಆಸ್ಟ್ರೇಲಿಯಾ ತಂಡ: ಮಾರ್ಕಸ್ ಹ್ಯಾರಿಸ್, ಆ್ಯರನ್ ಫಿಂಚ್, ಉಸ್ಮಾನ್ ಖವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್ಕಾಂಬ್, ಟ್ರಾವಿಸ್ ಹೆಡ್, ಟಿಮ್ ಪೈನೆ (ಸಿ & ವಿ.ಕೆ), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜ್ವುಡ್, ನಾಥನ್ ಲಿಯಾನ್.

Story first published: Monday, December 10, 2018, 4:48 [IST]
Other articles published on Dec 10, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+