ಅಡಿಲೇಡ್ ಟೆಸ್ಟ್ ಮೊದಲ ದಿನದಂದು ಭಾರತಕ್ಕೆ ಪೂಜಾರಾ ಶತಕದಾಸರೆ


ಅಡಿಲೇಡ್, ಡಿಸೆಂಬರ್ 6: ಇಲ್ಲಿನ ಓವಲ್ ಮೈದಾನದಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ದಿನದ ಅಂತ್ಯಕ್ಕೆ 250/9 ಸ್ಕೋರ್ ಮಾಡಿದೆ
ಚೇತೇಶ್ವರ್ ಪೂಜಾರಾ 123, ಶಮಿ 6 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ. ರಿಷಪ್ ಪಂತ್ ಹಾಗೂ ಅಶ್ವಿನ್ ತಲಾ 25 ಹಾಗೂ ರೋಹಿತ್ ಶರ್ಮ 37ರನ್ ಗಳಿಸಿದರು. ಚಹಾ ವಿರಾಮದ ವೇಳೆಗೆ 143 ರನ್‌ಗೆ 6 ವಿಕೆಟ್ ಕಳೆದುಕೊಂಡಿತ್ತು.
ಮೊದಲ 13 ಓವರ್ ಗಳಲ್ಲಿ ಮಿಂಚಿದ ಆಸ್ಟ್ರೇಲಿಯಾದ ವೇಗಿಗಳು, ಭಾರತದ ಮೊದಲ ಮೂರು ವಿಕೆಟ್ ಗಳನ್ನು ಕಿತ್ತಿದ್ದಾರೆ. 20.2 ಓವರ್ ವೇಳೆಗೆ ಅಜಿಂಕ್ಯಾ ರಹಾನೆ ಕೂಡ 4ನೇ ವಿಕೆಟ್ ಒಪ್ಪಿಸಿದ್ದರು.
ಚೆನ್ನಾಗಿ ಆಡುತ್ತಿದ್ದ ರೋಹಿತ್ ಶರ್ಮಾ 37 ರನ್ ಗಳಿಸಿ ಭೋಜನಾ ವಿರಾಮದ ಬಳಿಕ ವಿಕೆಟ್ ಒಪ್ಪಿಸಿದರು. ರಿಷಬ್ ಪಂತ್ ಭರವಸೆ ಮೂಡಿಸಿದರೂ ತಾಳ್ಮೆ ಕಳೆದುಕೊಂಡು ವಿಕೆಟ್ ಕೈಚೆಲ್ಲಿದರು. ಚೇತೇಶ್ವರ ಪೂಜಾರ ಏಕಾಂಗಿಯಾಗಿ ಒಂದೆಡೆ ಹೋರಾಟ ನಡೆಸಿದರು
ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಕೆಎಲ್ ರಾಹುಲ್ ಹಾಗೂ ಮುರಳಿ ವಿಜಯ್ ಅವರು ಆರಂಭಿಕರಾಗಿ ಕಣಕ್ಕಿಳಿದರು. 2ರನ್ ಗಳಿಸಿದ್ದ ರಾಹುಲ್ ಅವರು ತಂಡದ ಮೊತ್ತ 3ರನ್ ಆಗಿದ್ದಾಗ ಜೋಶ್ ಹೇಜಲ್ವುಡ್ ಗೆ ವಿಕೆಟ್ ಒಪ್ಪಿಸಿದರು. 11ರನ್ ಗಳಿಸಿದ್ದ ಮುರಳಿ ವಿಜಯ್ ಅವರು ಮಿಚೆಲ್ ಸ್ಟಾರ್ಕ್ ಗೆ ಬಲಿಯಾದರು. ನಾಯಕ ವಿರಾಟ್ ಕೊಹ್ಲಿ ಕೂಡಾ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. 3ರನ್ ಗಳಿಸಿ ಕೊಹ್ಲಿ ಔಟಾದಾಗ ತಂಡದ ಮೊತ್ತ 20ರನ್ ದಾಟಿರಲಿಲ್ಲ.
ಆಸ್ಟ್ರೇಲಿಯಾದ ಅಡಿಲೇಡ್ ನಲ್ಲಿ ಇಂದು (ಡಿಸೆಂಬರ್ 6) ಆಸ್ಟ್ರೇಲಿಯಾ ಮತ್ತು ಪ್ರವಾಸಿ ಭಾರತ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಮೈದಾನಕ್ಕಿಳಿದಿದೆ. ಟಿ20 ಸರಣಿಯನ್ನು 1-1ರಿಂದ ಸರಿದೂಗಿಸಿಕೊಂಡಿರುವ ಭಾರತ ಈ ಪಂದ್ಯವನ್ನು ಗೆದ್ದು ಮುನ್ನಡೆ ಸಾಧಿಸುವ ವಿಶ್ವಾಸದಲ್ಲಿದೆ.
ಭಾರತ ತಂಡ: ಮುರಳಿ ವಿಜಯ್, ಲೋಕೇಶ್ ರಾಹುಲ್, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ರಿಷಬ್ ಪಂತ್ (ವಿಕೆ), ರವಿಚಂದ್ರನ್ ಅಶ್ವಿನ್, ಜಸ್‌ಪ್ರೀತ್ ಬೂಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ.
ಆಸ್ಟ್ರೇಲಿಯಾ ತಂಡ: ಮಾರ್ಕಸ್ ಹ್ಯಾರಿಸ್, ಆ್ಯರನ್ ಫಿಂಚ್, ಉಸ್ಮಾನ್ ಖವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್ಕಾಂಬ್, ಟ್ರಾವಿಸ್ ಹೆಡ್, ಟಿಮ್ ಪೈನೆ (ಸಿ & ವಿ.ಕೆ), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜ್ವುಡ್, ನಾಥನ್ ಲಿಯಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications