ಟಿ20 ವಿಚಾರದಲ್ಲಿ 2020 ನಮಗೆ ತುಂಬಾ ಉತ್ತಮ ವರ್ಷ: ವಿರಾಟ್ ಕೊಹ್ಲಿ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟಿ20 ಪಂದ್ಯದ ಟಾಸ್ ಸಂದರ್ಭದಲ್ಲಿ ಮಾತನಾಡುತ್ತಾ ಟಿ20 ಕ್ರಿಕೆಟ್‌ನಲ್ಲಿ 2020 ಭಾರತಕ್ಕೆ ಅತ್ಯುತ್ತಮ ವರ್ಷ ಎಂದಿದ್ದಾರೆ. ಈ ವರ್ಷ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿರುವ ಟೀಮ್ ಇಂಡಿಯಾ ಗೆಲುವಿನ ಮೇಲೆ ಗೆಲುವು ಸಾಧಿಸಿ ಮುನ್ನುಗ್ಗಿದೆ.
ಟಾಸ್ ಗೆಲುವಿನ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ "ಈ ವರ್ಷ ನಮ್ಮ ಪಾಲಿಗೆ ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ವರ್ಷವಾಗಿದೆ. ಎದುರಾಳಿ ತಂಡಗಳಿಂದ ನಾವು ಮೇಲುಗೈ ಸಾಧಿಸುತ್ತಲೇ ಬಂದಿದ್ದೇವೆ. ತಂಡವಾಗಿ ನಾವು ಈ ಫಲಿತಾಂಶವನ್ನು ಮುಂದುವರಿಸಿಕೊಂಡು ಹೋಗುಲು ಬಯಸುತ್ತೇವೆ. ವೈಯಕ್ತಿದ ಆಟದಲ್ಲೂ ಮುನ್ನಡೆಯನ್ನು ಸಾಧಿಸುತ್ತಾ ಮುಂಬರುವ ವಿಶ್ವಕಪ್‌ನಲ್ಲಿ ಗೆಲುವು ಸಾಧಿಸುವತ್ತ ಚಿತ್ತ ನೆಟ್ಟಿದ್ದೇವೆ" ಎಂದು ಕೊಹ್ಲಿ ಹೇಳಿದರು.
ಏಕದಿನ ಕ್ರಿಕೆಟ್‌ನಲ್ಲಿ ಭಾರತ 2-1 ಅಂತರದ ಸರಣಿ ಸೋಲು ಕಂಡ ಬಳಿಕ ಟಿ20 ಕ್ರಿಕೆಟ್‌ನಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಗೆಲುವು ಕಂಡು ಮೂರನೇ ಪಂದ್ಯದ ಗೆಲುವಿನತ್ತ ದೃಷ್ಟಿಹರಿಸಿದೆ. ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದರೆ ಆಸ್ಟ್ರೇಲಿಯಾ ವೈಟ್‌ವಾಶ್ ಅವಮಾನಕ್ಕೆ ಒಳಗಾಗಲಿದೆ.
2020ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟಿ20 ಪಂದ್ಯಕ್ಕೂ ಮುನ್ನ 10 ಪಂದ್ಯಗಳನ್ನು ಆಡಿದೆ. ಇದರಲ್ಲಿ 9 ಗೆಲುವು ಸಾಧಿಸಿದ್ದು ಒಂದೇ ಒಂದು ಸೋಲು ಕಂಡಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಸಂತಿಮ ಪಂದ್ಯದ ಫಲಿತಾಂಶವೂ ಭಾರತದ ಪರವಾಗಿದ್ದರೆ ಈ ವರ್ಷ ಭಾರತ ಚುಟುಕು ಕ್ರಿಕೆಟ್‌ನಲ್ಲಿ ಅಜೇಯವಾಗಿ ಉಳಿದ ಸಾಧನೆ ಮಾಡಿದಂತಾಗುತ್ತದೆ.
ಮೊದಲಿಗೆ ಭಾರತ ಶ್ರೀಲಂಕಾ ತಂಡವನ್ನು ತವರಿನಲ್ಲಿ 2-0 ಅಂತರದಿಂದ ಮಣಿಸಿತ್ತು. ಅದಾದ ಬಳಿಕ ನ್ಯೂಜಿಲೆಂಡ್ ನೆಲದಲ್ಲಿ 5 ಪಂದ್ಯಗಳ ಟಿ20 ಸರಣಿಯನ್ನು ಆಡಿದ ಭಾರತ ಐದು ಪಂದ್ಯಗಳಲ್ಲೂ ಗೆಲುವು ಸಾಧಿಸಿತ್ತು. ಈಗ ಆಸ್ಟ್ರೇಲಿಯಾ ವಿರುದ್ಧ 3-0 ಅಂತರದ ಗೆಲುವು ಸಾಧಿಸುವತ್ತ ಚಿತ್ತ ನೆಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications