ಅಡಿಲೇಡ್: ಆಸೀಸ್ ವಿರುದ್ಧ ಭಾರತಕ್ಕೆ ಜಯ, ಏಕದಿನ ಸರಣಿ ಸಮಬಲ

ಅಡಿಲೇಡ್, ಜನವರಿ 15: ಅಡಿಲೇಡ್ ಓವಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು (ಜನವರಿ 15) ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್ ಗೆಲುವನ್ನಾಚರಿಸಿದೆ. ಕೊಹ್ಲಿಯ ಆಕರ್ಷಕ ಶತಕ, ಎಂಎಸ್ ಧೋನಿಯ ಅರ್ಧ ಶತಕದ ನೆರವಿನಿಂದ ಟೀಮ್ ಇಂಡಿಯಾ ಗೆಲುವನ್ನಾಚರಿಸಿತಲ್ಲದೆ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.
ಶಾನ್ ಮಾರ್ಷ್ 131 ರನ್, ಗ್ಲೆನ್ ಮ್ಯಾಕ್ಸ್‌ವೆಲ್ 48 ರನ್ ಅಬ್ಬರದ ಬ್ಯಾಟಿಂಗ್ ನೆರವಿನೊಂದಿಗೆ ಟಾಸ್ ಗೆದ್ದು ಬ್ಯಾಟಿಂಗ್‌ಗಿಳಿದ ಆ್ಯರನ್ ಫಿಂಚ್ ಬಳಗ, ಭಾರತಕ್ಕೆ ಗೆಲ್ಲಲು 299 ರನ್ ಗುರಿ ನೀಡಿತ್ತು. ಆದರೆ ಟೀಮ್ ಇಂಡಿಯಾ 49.2 ಓವರ್‌ಗಳಲ್ಲಿ 4 ವಿಕೆಟ್ ಕಳೆದು ಗೆಲುವಿನ ಗೆರೆ ದಾಟಿತು.
ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಮೊದಲು ಬ್ಯಾಟಿಂಗ್‌ಗೆ ಇಳಿದ ಆಸೀಸ್‌ಗೆ, ಮಾರ್ಷ್ ಮತ್ತು ಮ್ಯಾಕ್ಸ್‌ವೆಲ್ ರನ್ ನೆರವಿನೊಂದಿಗೆ ಅಲೆಕ್ಸ್ ಕ್ಯಾರಿ (18), ಆ್ಯರನ್ ಫಿಂಚ್ (6), ಉಸ್ಮಾನ್ ಖವಾಜಾ (21), ಪೀಟರ್ ಹ್ಯಾಂಡ್ಸ್‌ಕಾಂಬ್ (20), ಮಾರ್ಕಸ್ ಸ್ಟೋಯಿನಿಸ್ (29) ರನ್ ಬೆಂಬಲ ಸಿಕ್ಕಿತು. ಹೀಗಾಗಿ ಆಸೀಸ್ 50 ಓವರ್‌ಗೆ 9 ವಿಕೆಟ್ ಕಳೆದು 298 ರನ್ ಗಳಿಸಿತ್ತು.
ಚೇಸಿಂಗ್‌ಗೆ ಇಳಿದ ಭಾರತಕ್ಕೆ ಕೊಹ್ಲಿ 104 (39ನೇ ಏಕದಿನ ಶತಕ), ಧೋನಿ 55, ರೋಹಿತ್ ಶರ್ಮಾ 43, ಶಿಖರ್ ಧವನ್ 32, ಅಂಬಾಟಿ ರಾಯುಡು 24, ದಿನೇಶ್ ಕಾರ್ತಿಕ್ 25 ರನ್ ಪೇರಿಸಿ ತಂಡದ ಗೆಲುವಿಗೆ ಸಹಕರಿಸಿದರು. ಆಸೀಸ್ ಇನ್ನಿಂಗ್ಸ್ ವೇಳೆ ಭಾರತದ ಭುವನೇಶ್ವರ್ ಕುಮಾರ್ 4 ಮತ್ತು ಮೊಹಮ್ಮದ್ 3 ವಿಕೆಟ್ ಉರುಳಿಸಿ ಮಿಂಚಿದರು.
ಎದುರಾಳಿ ಆಸ್ಟ್ರೇಲಿಯಾ ಪರ ಜೇಸನ್ ಬೆಹೆರೆನ್ಡಾಫ್, ಜಾಯ್ ರಿಚರ್ಡ್ಸನ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್ವೆಲ್ ತಲಾ 1 ವಿಕೆಟ್ ಪಡೆದು ಗಮನ ಸೆಳೆದರು. ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠರೆನಿಸಿದರು.
ಮೂರು ಪಂದ್ಯಗಳ ಈ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ 34 ರನ್ ಜಯ ಸಾಧಿಸಿ ಸರಣಿ ಮುನ್ನಡೆಯಲ್ಲಿತ್ತು. ಆದರೆ ಭಾರತ ದ್ವಿತೀಯ ಪಂದ್ಯದ ಗೆಲುವಿನೊಂದಿಗೆ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ನಿರ್ಣಾಯಕ ಪಂದ್ಯ ಮೆಲ್ಬರ್ನ್ ನಲ್ಲಿ ಜನವರಿ 18ರಂದು ನಡೆಯಲಿದೆ.
ಆಸ್ಟ್ರೇಲಿಯಾ ತಂಡ: ಆ್ಯ ಫಿಂಚ್ (ಸಿ), ಅಲೆಕ್ಸ್ ಕ್ಯಾರಿ (ವಿಕೆ), ಉಸ್ಮಾನ್ ಖಜಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್‌ಕಾಂಬ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ನಾಥನ್ ಲಿಯಾನ್, ಪೀಟರ್ ಸಿಡ್ಲ್, ಜೀಯೆ ರಿಚರ್ಡ್ಸನ್, ಜಾಸನ್ ಬೆಹೆರೆನ್ಡಾಫ್.
ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ಸಿ), ಅಂಬಾಟಿ ರಾಯುಡು, ಎಂಎಸ್ ಧೋನಿ (ವಿಕೆ), ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಭುವನೇಶ್ವರ ಕುಮಾರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications