ಭಾರತ vs ಆಸೀಸ್ 2ನೇ ಟಿ20: ಮಳೆ ಅಡ್ಡಿ, ಫಲಿತಾಂಶವಿಲ್ಲದೆ ಪಂದ್ಯ ಅಂತ್ಯ

ಮೆಲ್ಬೋರ್ನ್, ನವೆಂಬರ್ 23: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ರೋಚಕ ಸೋಲು ಕಂಡ ಭಾರತ ಇಂದು ಎರಡನೇ ಪಂದ್ಯದಲ್ಲಿ ಗೆಲುವಿನ ಹಾದಿ ಹಿಡಿಯಲು ಯತ್ನಿಸಲಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನ(ಎಂಸಿಜಿ)ದಲ್ಲಿ ಆಸ್ಟ್ರೇಲಿಯಾ ಇನ್ನಿಂಗ್ಸ್ ವೇಳೆ ಮಳೆ ಕಾಡಿದ್ದರಿಂದ ಇನ್ನಿಂಗ್ಸ್‌ನ್ನು 19 ಓವರ್ ಗೆ ಮೊಟಕುಗೊಳಿಸಲಾಗಿತ್ತು.
ಅನಂತರ ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ ಭಾರತಕ್ಕೆ 11 ಓವರ್ ನಲ್ಲಿ 90 ರನ್ ಗುರಿ ನೀಡಲಾಗಿತ್ತು. ಆದರೆ ಮಳೆ ಕಡಿಮೆಯಾಗದ್ದರಿಂದ ಪಂದ್ಯವನ್ನು 'ಫಲಿತಾಂವಿಲ್ಲ' ಎಂದು ಘೋಷಿಸುವ ಮೂಲಕ ಅಂತ್ಯಗೊಳಿಸಲಾಯಿತು.
ನವೆಂಬರ್ 21 ಬ್ರಿಸ್ಬೇನಿನ ಗಬ್ಬಾ ಮೈದಾನದಲ್ಲಿ ಮೊದಲ ಪಂದ್ಯ ದಲ್ಲಿ ವಿರಾಟ್ ಕೊಹ್ಲಿ ಪಡೆಗೆ 4 ರನ್ ಗಳಿಂದ ಸೋಲುಣಿಸಿದ ಅರೋನ್ ಫಿಂಚ್ ಪಡೆ ಮೇಲ್ನೊಟಕ್ಕೆ ಆತ್ಮವಿಶ್ವಾಸದ್ದಿಂದ ಕಣಕ್ಕಿಳಿದಿದೆ.
ಆಸ್ಟ್ರೇಲಿಯಾ ಇನ್ನಿಂಗ್ಸ್ :
* 19 ಓವರ್ ಗಳಲ್ಲಿ 132/7 ಸ್ಕೋರ್, ಮೆಕ್ ಡರ್ಮಟ್ 32ರನ್ (30 ಎಸೆತ), ಆಂಡ್ರ್ಯೂ ಟೈ 12ರನ್ ಗಳಿಸಿ ಕ್ರೀಸ್ ನಲ್ಲಿದ್ದಾಗ ಮಳೆಯಿಂದ ಪಂದ್ಯ ಸ್ಥಗಿತ.
* 15 ಓವರ್ ಗಳ ನಂತರ 92/6 ಸ್ಕೋರ್ ಮಾಡಿರುವ ಆಸ್ಟ್ರೇಲಿಯಾಕ್ಕೆ ಮೆಕ್ ಡರ್ಮಟ್ ಆಸರೆ
* ವಿಕೆಟ್ ಕೀಪರ್ ಕ್ಯಾರೆ ವಿಕೆಟ್ ಪಡೆದ ಚೈನಾಮನ್ ಕುಲದೀಪ್ ಯಾದವ್
* 19 ರನ್ ಗಳಿಸಿ ಗ್ಲೆನ್ ಮ್ಯಾಕ್ಸ್ ವೆಲ್ ಔಟ್, ಕೃನಾಲ್ ಪಾಂಡ್ಯಗೆ ಕ್ಲೀನ್ ಬೋಲ್ಡ್
* 6.3 ಓವರ್ ಗಳಲ್ಲಿ 41/4, ಮಾರ್ಕ್ ಸ್ಟೋಯಿನಿಸ್ 4ರನ್ ಗಳಿಸಿ ಔಟ್.
* ಕ್ರಿಸ್ ಲಿನ್, ಶಾರ್ಟ್ ವಿಕೆಟ್ ಗಳಿಸಿದ ಎಡಗೈ ವೇಗಿ ಖಲೀಲ್ ಅಹ್ಮದ್
* * ಪಂದ್ಯದ ಮೊದಲ ಓವರ್ ನ ಎರಡನೇ ಎಸೆತದಲ್ಲೇ ಕ್ಯಾಚಿತ್ತು ನಿರ್ಗಮಿಸಿದ ಆಸ್ಟ್ರೇಲಿಯಾ ನಾಯಕ ಅರೋನ್ ಫಿಂಚ್.
ಮೂರು ಟಿ20ಐ ಪಂದ್ಯಗಳ ಸರಣಿಯ ಮೊದಲ ಪಂದ್ಯ ಇದಾಗಿದೆ. ಮಾಜಿ ನಾಯಕ ಎಂಎಸ್ ಧೋನಿ ಇಲ್ಲದೆ, ರಿಷಪ್ ಪಂತ್ ಅವರು ಪ್ರಮುಖ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯುತ್ತಿದ್ದಾರೆ. ದಿನೇಶ್ ಕಾರ್ತಿಕ್ ಬದಲಿ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ ಮನ್ ಆಗಿ ತಂಡದಲ್ಲಿದ್ದಾರೆ.
ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದಿಂದ ಗುಣಮುಖರಾಗದ ಕಾರಣ ತಂಡಕ್ಕೆ ಆಯ್ಕೆಯಾಗಿಲ್ಲ. ಬದಲಿಗೆ, ಅವರ ಸೋದರ ಮೊದಲ ಪಂದ್ಯದಲ್ಲಿ ದುಬಾರಿ ಎನಿಸಿದ ಕೃನಾಲ್ ಪಾಂಡ್ಯ ಅವರಿಗೆ ಮತ್ತೊಮ್ಮೆ ಆಡುವ ಅವಕಾಶ ಸಿಕ್ಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications