Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪರ್ತ್ ಟೆಸ್ಟ್: ಆಸೀಸ್ ವಿರುದ್ಧ ಟೀಮ್ ಇಂಡಿಯಾಕ್ಕೆ ಕೊಹ್ಲಿ, ರಹಾನೆ ಆಸರೆ

Australia vs India, 2nd Test, Day 2 -Live Cricket Score

ಪರ್ತ್, ಡಿಸೆಂಬರ್ 15: ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್‌ಗೆ ಹೋಲಿಸಿದರೆ ಆತಿಥೇಯ ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧ ಪರ್ತ್‌ನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ರನ್ ಕಲೆ ಹಾಕುವಲ್ಲಿ ಯಶಸ್ವಿಯಾಗಿದೆ. ಶನಿವಾರ (ಡಿ.15) ಆಸೀಸ್ 326 ರನ್ ನೊಂದಿಗೆ ಮೊದಲ ಇನ್ನಿಂಗ್ಸ್‌ ಮುಗಿಸಿತ್ತು. ಇನ್ನಿಂಗ್ಸ್‌ಗೆ ಇಳಿದ ಭಾರತ ಆರಂಭಿಕ ಆಘಾತವನ್ನು ಅನುಭವಿಸಬೇಕಾಯ್ತು. ಕೆಎಲ್ ರಾಹುಲ್ (1), ಮುರಳಿ ವಿಜಯ್ (0), ಚೇತೇಶ್ವರ ಪೂಜಾರ (24) ನಿರ್ಗಮಿಸಿದರು. ಆದರೆ ನಾಯಕ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಅರ್ಧ ಶತಕದ ಮೂಲಕ ಭಾರತಕ್ಕೆ ಆಸರೆಯಾಗಿದ್ದಾರೆ.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
43624

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಆಸೀಸ್‌ಗೆ ಆರಂಭಿಕ ಆಟಗಾರರಾದ ಮಾರ್ಕಸ್ ಹ್ಯಾರಿಸ್ 70, ಆ್ಯರನ್ ಫಿಂಚ್ 50 ರನ್ ಸೇರಿಸಿ ತಂಡಕ್ಕೆ ಬಲ ತುಂಬಿದರು. ಶಾನ್ ಮಾರ್ಷ್ 45, ಟ್ರಾವಿಸ್ ಹೆಡ್ 58 ರನ್ ಕಲೆ ಹಾಕಿದ್ದು ತಂಡದ ಮೊತ್ತ ಹೆಚ್ಚುವಲ್ಲಿ ನೆರವಾಯಿತು.

ಮೊದಲ ಇನ್ನಿಂಗ್ಸ್‌ಗೆ ಇಳಿದ ಭಾರತ ಆರಂಭದಲ್ಲೇ ಭೀತಿಗೆ ಒಳಗಾಯಿತು. 38.2 ಓವರ್‌ ಹೊತ್ತಿಗೆ ಚೇತೇಶ್ವರ ಪೂಜಾರ ಅವರ ವಿಕೆಟ್ ಕೂಡ ಕಳೆದುಕೊಂಡಾಗ ಭಾರತ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿತು. ಆದರೆ ತಂಡದ ಬೆಂಗಾವಲಾಗಿ ನಿಂತ ಕೊಹ್ಲಿ, 82, ರಹಾನೆ 51 ರನ್ ಪೇರಿಸಿ ರನ್ ಕುಸಿತ ತಡೆದರು. ಇಬ್ಬರೂ ಈಗ ಕ್ರೀಸ್‌ನಲ್ಲಿದ್ದಾರೆ. ಶನಿವಾರ (ಡಿ.15) ದಿನದಾಂತ್ಯಕ್ಕೆ ಭಾರತ 69 ಓವರ್‌ನಲ್ಲಿ 3 ವಿಕೆಟ್ ಕಳೆದು 172 ರನ್ ಪೇರಿಸಿತ್ತು.

ಭಾರತ ತಂಡ : ಲೋಕೇಶ್ ರಾಹುಲ್, ಮುರಳಿ ವಿಜಯ್, ವಿರಾಟ್ ಕೊಹ್ಲಿ (ಸಿ), ಚೇತೇಶ್ವರ ಪೂಜಾರಾ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಬ್ ಪಂತ್ (ವಿಕೆ), ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ.

ಆಸೀಸ್ ತಂಡ : ಆ್ಯರನ್ ಫಿಂಚ್, ಮಾರ್ಕಸ್ ಹ್ಯಾರಿಸ್, ಉಸ್ಮಾನ್ ಖವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್ಕಾಂಬ್, ಟ್ರಾವಿಸ್ ಹೆಡ್, ಟಿಮ್ ಪೈನೆ (ಸಿ & ವಿ.ಕೆ), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಝೆಲ್ವುಡ್.

Story first published: Tuesday, December 18, 2018, 11:52 [IST]
Other articles published on Dec 18, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+