For Quick Alerts
ALLOW NOTIFICATIONS  
For Daily Alerts
 

ಪರ್ತ್ ಟೆಸ್ಟ್: ಭಾರತ ವಿರುದ್ಧ ಆಸೀಸ್ ಎಚ್ಚರಿಕೆಯ ಆಟ, 175 ರನ್ ಮುನ್ನಡೆ

Australia vs India, 2nd Test, Day 3, Perth, Live Score

ಪರ್ತ್, ಡಿಸೆಂಬರ್ 16: ಆರಂಭಿಕ ಆಘಾತ ಅನುಭವಿಸಿದರೂ ಭಾರತಕ್ಕೆ ನಾಯಕ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ರನ್ ಬೆಂಬಲ ದೊರೆತಿದೆ. ಭಾನುವಾರ (ಡಿಸೆಂಬರ್ 16) 3ನೇ ದಿನದಾಟದ ವೇಳೆ ಕೊಹ್ಲಿ ಪಡೆ 105.5 ಓವರ್‌ಗೆ 283 ರನ್ ಕಲೆ ಹಾಕಿ ಇನ್ನಿಂಗ್ಸ್ ಮುಗಿಸಿತ್ತು.

ದ್ವಿತೀಯ ಇನ್ನಿಂಗ್ಸ್‌ಗೆ ಇಳಿದಿರುವ ಆಸ್ಟ್ರೇಲಿಯಾ ದಿನದಾಂತ್ಯಕ್ಕೆ 48 ಓವರ್ ಮುಕ್ತಾಯಕ್ಕೆ 4 ವಿಕೆಟ್ ನಷ್ಟದೊಂದಿಗೆ 132 ರನ್ ಪೇರಿಸಿ 175 ರನ್ ಮುನ್ನಡೆಯಲ್ಲಿದೆ. ಉಸ್ಮಾನ್ ಖವಾಜಾ 41, ಟಿಮ್ ಪೈನೆ 8 ರನ್‌ನೊಂದಿಗೆ ಕ್ರೀಸ್‌ನಲ್ಲಿದ್ದಾರೆ.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
43624

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಆಸೀಸ್‌ಗೆ ಆರಂಭಿಕ ಆಟಗಾರರಾದ ಮಾರ್ಕಸ್ ಹ್ಯಾರಿಸ್ 70, ಆ್ಯರನ್ ಫಿಂಚ್ 50 ರನ್ ಸೇರಿಸಿ ತಂಡಕ್ಕೆ ಬಲ ತುಂಬಿದ್ದರು. ಹೀಗಾಗಿ ಆಸ್ಟ್ರೇಲಿಯಾ 108.3 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 326 ರನ್ ಕಲೆ ಹಾಕಿ ಮೊದಲ ಇನ್ನಿಂಗ್ಸ್ ಮುಗಿಸಿತ್ತು.

ಮೊದಲ ಇನ್ನಿಂಗ್ಸ್‌ಗೆ ಇಳಿದ ಭಾರತದಿಂದ ಕೆಎಲ್ ರಾಹುಲ್ (1), ಮುರಳಿ ವಿಜಯ್ (0), ಚೇತೇಶ್ವರ ಪೂಜಾರ (24) ನಿರ್ಗಮಿಸಿದ್ದರಿಂದ ಭಾರತ ಭೀತಿಗೆ ಒಳಗಾಗಿತ್ತು. ಆದರೆ ಕೊಹ್ಲಿ ಮತ್ತು ರಹಾನೆ ಭಾರತವನ್ನು ರನ್ ಕುಸಿತದಿಂದ ಪಾರು ಮಾಡಿದ್ದರು. ಕೊಹ್ಲಿ 123, ರಹಾನೆ 51 ರನ್ ಪೇರಿಸುವುದರೊಂದಿಗೆ ವಿಕೆಟ್ ಕಾವಲು ಕಾದಿದ್ದರು.

ಭಾರತ ತಂಡ : ಲೋಕೇಶ್ ರಾಹುಲ್, ಮುರಳಿ ವಿಜಯ್, ವಿರಾಟ್ ಕೊಹ್ಲಿ (ಸಿ), ಚೇತೇಶ್ವರ ಪೂಜಾರಾ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಬ್ ಪಂತ್ (ವಿಕೆ), ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ.

ಆಸೀಸ್ ತಂಡ : ಆ್ಯರನ್ ಫಿಂಚ್, ಮಾರ್ಕಸ್ ಹ್ಯಾರಿಸ್, ಉಸ್ಮಾನ್ ಖವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್ಕಾಂಬ್, ಟ್ರಾವಿಸ್ ಹೆಡ್, ಟಿಮ್ ಪೈನೆ (ಸಿ & ವಿ.ಕೆ), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಝೆಲ್ವುಡ್.

Story first published: Tuesday, December 18, 2018, 11:51 [IST]
Other articles published on Dec 18, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+