ಶಾರ್ದೂಲ್ ಮಿಂಚು, ಆಸ್ಟ್ರೇಲಿಯಾ ಎದುರು ಭಾರತಕ್ಕೆ ರೋಚಕ ಜಯ

ಕ್ಯಾನ್ಬೆರಾ: ಕ್ಯಾನ್ಬೆರಾದ ಮನುಕಾ ಓವಲ್ ಸ್ಟೇಡಿಯಂನಲ್ಲಿ ಬುಧವಾರ (ಡಿಸೆಂಬರ್ 2) ನಡೆದ ಭಾರತ vs ಆಸ್ಟ್ರೇಲಿಯಾ ನಡುವಿನ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ 13 ರನ್ ಗೆಲುವನ್ನಾಚರಿಸಿದೆ. ವೇಗಿಗಳಾದ ಶಾರ್ದೂಲ್ ಠಾಕೂರ್, ಜಸ್‌ಪ್ರೀತ್ ಬೂಮ್ರಾ ಮತ್ತು ಟಿ ನಟರಾಜನ್ ಬೌಲಿಂಗ್ ನೆರವಿನಿಂದ ಭಾರತ ವೈಟ್ ವಾಷ್ ಮುಖಭಂಗ ತಪ್ಪಿಸಿಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತದಿಂದ ಶಿಖರ್ ಧವನ್ 16, ಶುಬ್‌ಮನ್ ಗಿಲ್ 33, ವಿರಾಟ್ ಕೊಹ್ಲಿ 63, ಶ್ರೇಯಸ್ ಐಯ್ಯರ್ 19, ಹಾರ್ದಿಕ್ ಪಾಂಡ್ಯ 92, ರವೀಂದ್ರ ಜಡೇಜಾ 66 ರನ್ ಸೇರಿಸಿದರು. ಭಾರತ, 50 ಓವರ್‌ಗೆ 5 ವಿಕೆಟ್ ಕಳೆದು 302 ರನ್ ಬಾರಿಸಿತ್ತು.
ಭಾರತ vs ಆಸ್ಟ್ರೇಲಿಯಾ, 3ನೇ ಏಕದಿನ ಪಂದ್ಯ, ಸ್ಕೋರ್‌ಕಾರ್ಡ್
ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, ನಾಯಕ ಆ್ಯರನ್ ಫಿಂಚ್ 75, ಮೊಯಿಸಸ್ ಹೆನ್ರಿಕ್ಸ್ 22, ಕೆಮರಾನ್ ಗ್ರೀನ್ 21, ಅಲೆಕ್ಸ್ ಕ್ಯಾರಿ 38, ಗ್ಲೆನ್ ಮ್ಯಾಕ್ಸ್‌ವೆಲ್ 59, ಆ್ಯಷ್ಟನ್ ಅಗರ್ 28 ರನ್‌ನೊಂದಿಗೆ 49.3ನೇ ಓವರ್‌ಗೆ 10 ವಿಕೆಟ್ ಕಳೆದು 289 ರನ್ ಬಾರಿಸಿತು. ಈ ಪಂದ್ಯದಲ್ಲಿ ಆಸೀಸ್ ಸೋತಿದೆಯಾದರೂ ಏಕದಿನ ಸರಣಿ 2-1ರಿಂದ ಆಸ್ಟ್ರೇಲಿಯಾ ವಶವಾಗಿದೆ.
ಭಾರತದ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಸೀನ್ ಅಬಾಟ್ 1, ಜೋಶ್ ಹ್ಯಾಝಲ್ವುಡ್ 1, ಆ್ಯಷ್ಟನ್ ಅಗರ್ 2, ಆ್ಯಡಂ ಝಂಪಾ 1 ವಿಕೆಟ್ ಪಡೆದರೆ, ಆಸೀಸ್ ಇನ್ನಿಂಗ್ಸ್‌ನಲ್ಲಿ ಭಾರತದ ಜಸ್‌ಪ್ರೀತ್ ಬೂಮ್ರಾ 2, ಟಿ ನಟರಾಜನ್ 2, ಶಾರ್ದೂಲ್ ಠಾಕೂರ್ 3, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications