Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

3ನೇ ಟಿ20: ಆಸ್ಟ್ರೇಲಿಯಾ ವಿರುದ್ಧ ಜಯ, ಸರಣಿ ಹಿಡಿದಿಟ್ಟುಕೊಂಡ ಭಾರತ!

Australia vs India, 3rd T20I - Live Cricket Score

ಸಿಡ್ನಿ, ನವೆಂಬರ್ 25: ಸಿಡ್ನಿ ಸ್ಟೇಡಿಯಂನಲ್ಲಿ ಭಾನುವಾರ (ನವೆಂಬರ್ 25) ನಡೆದ ಆಸ್ಟ್ರೇಲಿಯಾ vs ಭಾರತ ಮೂರನೇ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ 6 ವಿಕೆಟ್ ಜಯ ಸಾಧಿಸಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಆಕರ್ಷಕ ಬ್ಯಾಟಿಂಗ್‌ ನೆರವಿನಿಂದ ಭಾರತ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.

ಸ್ಕೋರ್ ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
43622

ರೋಹಿತ್ ಶರ್ಮಾ 23, ಶಿಖರ್ ಧವನ್ 41, ವಿರಾಟ್ ಕೊಹ್ಲಿ ಅಜೇಯ 61, ಕೆಎಲ್ ರಾಹುಲ್ 14, ದಿನೇಶ್ ಕಾರ್ತಿಕ್ ಅಜೇಯ 22 ರನ್ ಬೆಂಬಲದೊಂದಿಗೆ ಭಾರತ 19.4 ಓವರ್ ಮುಕ್ತಾಯಕ್ಕೆ 4 ವಿಕೆಟ್ ಕಳೆದು 168 ರನ್ ಪೇರಿಸುವುದರೊಂದಿಗೆ ಗೆಲುವನ್ನಾಚರಿಸಿತು. ಪಂದ್ಯ ಶ್ರೇಷ್ಠ ಪ್ರಶಸ್ತಿ ಕೃನಾಲ್ ಪಾಂಡ್ಯಾಗೆ ಒಲಿದರೆ, ಸರಣಿ ಶ್ರೇಷ್ಠ ಪ್ರಶಸ್ತಿ ಶಿಖರ್ ಧವನ್ ಪಡೆದುಕೊಂಡರು.

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾಕ್ಕೆ ಆರಂಭಿಕ ಆಟಗಾರರಾದ ಡಿ ಆರ್ಕಿ ಶಾರ್ಟ್ 33, ನಾಯಕ ಆ್ಯರನ್ ಫಿಂಚ್ 28 ರನ್ ಬೆಂಬಲ ನೀಡಿದರು. ಅನಂತರ ಅಲೆಕ್ಸ್ ಕ್ಯಾರಿ 27, ಮಾರ್ಕ್ಯುಸ್ ಸ್ಟೋಯ್ನಿಸ್ 25 ರನ್ ಸೇರಿಸಿದ್ದರಿಂದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದು 164 ರನ್ ಪೇರಿಸಿ, ಭಾರತಕ್ಕೆ ಗೆಲ್ಲಲು 165 ರನ್ ಗುರಿ ನೀಡಿತ್ತು.

ಮೂರು ಪಂದ್ಯಗಳ ಈ ಟಿ20 ಸರಣಿಯಲ್ಲಿ ಮೊದಲ ಪಂದ್ಯವನ್ನು (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) ಆಸ್ಟ್ರೇಲಿಯಾ ಗೆದ್ದಿತ್ತು. ದ್ವಿತೀಯ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿದ್ದರಿಂದ ಅದನ್ನು ಫಲಿಯಾಂಶವಿಲ್ಲದ ಪಂದ್ಯವೆಂದು ಘೋಷಿಸಲಾಗಿತ್ತು.

ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ಲೋಕೇಶ್ ರಾಹುಲ್, ವಿರಾಟ್ ಕೊಹ್ಲಿ (ಸಿ), ರಿಷಬ್ ಪಂತ್ (ಡಬ್ಲ್ಯೂ), ದಿನೇಶ್ ಕಾರ್ತಿಕ್, ಕೃನಾಲ್ ಪಾಂಡ್ಯ, ಭುವನೇಶ್ವರ ಕುಮಾರ್, ಕುಲದೀಪ್ ಯಾದವ್, ಕೆ ಖಲೀಲ್ ಅಹ್ಮದ್, ಜಸ್‌ಪ್ರೀತ್‌ ಬುಮ್ರಾ.

ಆಸ್ಟ್ರೇಲಿಯಾ ತಂಡ: ಡಿ ಅರ್ಚಿ ಶಾರ್ಟ್, ಆ್ಯರನ್ ಫಿಂಚ್ (ಸಿ), ಕ್ರಿಸ್ ಲಿನ್, ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೋಯಿನ್ಸ್, ಬೆನ್ ಮ್ಯಾಕ್ಡರ್ಮಾಟ್, ಅಲೆಕ್ಸ್ ಕ್ಯಾರಿ (ಡಬ್ಲ್ಯೂ), ನಾಥನ್ ಕೌಲ್ಟರ್-ನೈಲ್, ಮಿಚೆಲ್ ಸ್ಟಾರ್ಕ್, ಆಂಡ್ರ್ಯೂ ಟೈಯ್, ಆಡಮ್ ಝಂಪಾ.

Story first published: Sunday, November 25, 2018, 17:37 [IST]
Other articles published on Nov 25, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+