ಸಿಡ್ನಿ ಟೆಸ್ಟ್: ಆಸೀಸ್ ವಿರುದ್ಧ ಭಾರತಕ್ಕೆ ಪೂಜಾರ, ಮಯಾಂಕ್ ರನ್ ಬಲ

ಸಿಡ್ನಿ, ಜನವರಿ 3: ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಮುನ್ನಡೆಯಲ್ಲಿರುವ ಭಾರತ, ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಗುರುವಾರ (ಜನವರಿ 3) ಆರಂಭಗೊಂಡ 4ನೇ ಮತ್ತು ಅಂತಿಮ ಟೆಸ್ಟ್ ನ ಮೊದಲ ದಿನದಾಟದಲ್ಲಿ ಉತ್ತಮ ಮೊತ್ತ ಕಲೆ ಹಾಕಿದೆ. ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಮತ್ತು ಚೇತೇಶ್ವರ ಪೂಜಾರ ಅವರ ಆಕರ್ಷಕ ಆಟ ತಂಡವನ್ನು ಮೇಲೆತ್ತಿತು.
ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ ಲೋಕೇಶ್ ರಾಹುಲ್ ಅವರ ವಿಕೆಟ್ ಬೇಗನೆ ಕಳೆದುಕೊಂಡಿತು. 9 ರನ್ನಿಗೆ ಔಟಾದ ಕೆಎಲ್ ರಾಹುಲ್ ಮತ್ತೆ ವೈಫಲ್ಯ ಪ್ರದರ್ಶಿಸಿದ್ದರು. ಮಯಾಂಕ್ ಅಗರ್ವಾಲ್ (77) ಅರ್ಧ ಶತಕ ಮತ್ತು ಚೇತೇಶ್ವರ ಪೂಜಾರ ಅವರ ಶತಕದ (130*) ನೆರವಿನಿಂದ ಭಾರತ ಗುರುವಾರ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 4 ವಿಕೆಟ್ ಕಳೆದು 303 ರನ್ ಕಲೆ ಹಾಕಿದೆ.
ನಾಯಕ ವಿರಾಟ್ ಕೊಹ್ಲಿ 23, ಅಜಿಂಕ್ಯ ರಹಾನೆ 38 ರನ್ ಸೇರಿಸಲಷ್ಟೇ ಶಕ್ತರಾದರು. ಆಸೀಸ್ ಪರ ಜೋಶ್ ಹ್ಯಾಝೆಲ್ವುಡ್ 2, ಮಿಚೆಲ್ ಸ್ಟಾರ್ಕ್ ಮತ್ತು ನಾಥಲ್ ಲಿಯಾನ್ ತಲಾ 1 ವಿಕೆಟ್ ಪಡೆದಿದ್ದಾರೆ. ಪೂಜಾರ ಮತ್ತು ಹನುಮ ವಿಹಾರಿ (39*) ಕ್ರೀಸ್‌ನಲ್ಲಿದ್ದಾರೆ.
ಆಸೀಸ್ ನೆಲದಲ್ಲಿ ಭಾರತ ಟೆಸ್ಟ್ ಸರಣಿ ಗೆದ್ದು ಸುಮಾರು 76 ವರ್ಷಗಳು ಕಳೆದಿವೆ. ಹೀಗಾಗಿ ಈ ಬಾರಿ ಸರಣಿ ಗೆದ್ದು ಹೊಸ ಮೈಲಿಗಲ್ಲು ಸ್ಥಾಪಿಸುವ ಯೋಜನೆ ಭಾರತದ್ದು. ಆದರೆ ಗಾಯದ ಸಮಸ್ಯೆಯ ಸಣ್ಣ ಭೀತಿಯಲ್ಲಿ ಟೀಮ್ ಇಂಡಿಯಾ ಇದೆ. ಆರ್ ಅಶ್ವಿನ್ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿಲ್ಲ. ಅವರು ಆಡುವ ತಂಡದಿಂದ ಹೊರಗುಳಿದಿದ್ದಾರೆ.
ಭಾರತ ತಂಡ: ಲೋಕೇಶ್ ರಾಹುಲ್, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರಾ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಬ್ ಪಂತ್ (ವಿಕೆ), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ.
ಆಸೀಸ್ ತಂಡ: ಮಾರ್ಕಸ್ ಹ್ಯಾರಿಸ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಸ್ಚ್ಯಾಗ್ನೆ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್ಕಾಂಬ್, ಟ್ರಾವಿಸ್ ಹೆಡ್, ಟಿಮ್ ಪೇನ್ (ಸಿ & ವಿಕೆ), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಝೆಲ್ವುಡ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications