Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಿಡ್ನಿ ಟೆಸ್ಟ್: ಪೂಜಾರ-ಪಂತ್-ಜಡೇಜಾ ಅಬ್ಬರ, 622ಕ್ಕೆ ಭಾರತ ಡಿಕ್ಲೇರ್

Australia vs India, 4th Test, Day 2 - Live Cricket Score

ಸಿಡ್ನಿ, ಜನವರಿ 4: ಭಾರತ vs ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್‌ನ ಶುಕ್ರವಾರದ (ಜನವರಿ 4) 2ನೇ ದಿನದಾಟದಲ್ಲಿ ಭಾರತ ಗರಿಷ್ಠ ಮೊತ್ತದ ರನ್ ಗಳಿಸಿದೆ. ಇಂಡಿಯನ್ ವಾಲ್‌-2 ಖ್ಯಾತಿಯ ಚೇತೇಶ್ವರ ಪೂಜಾರ ಅದ್ದೂರಿ ಆಟವಾಡಿದ್ದಾರೆ. ಪೂಜಾರ ಬರೋಬ್ಬರಿ 193 ರನ್‌ಗಳನ್ನು ತಂಡದ ಖಾತೆಗೆ ಸೇರಿಸಿದ್ದಾರೆ.

ಯುವ ಆಟಗಾರ ರಿಷಬ್ ಪಂತ್ ಕೂಡ ಭರ್ಜರಿ ಬ್ಯಾಟಿಂಗ್ ನಡೆಸಿದ್ದು 159 ರನ್ ಬಾರಿಸಿದರು. ಸೊಗಸಾದ ಆಟ ಆಡಿದ ರವೀಂದ್ರ ಜಡೇಜಾ 81 ರನ್ ಕೂಡಿಸಿದರು. 167.2 ಓವರ್‌ ಮುಕ್ತಾಯಕ್ಕೆ 7 ವಿಕೆಟ್ ಕಳೆದು 622 ರನ್ ಕಲೆ ಹಾಕಿದ ಭಾರತ ಡಿಕ್ಲೇರ್ ಘೋಷಿಸಿದೆ.

ಆಸೀಸ್ ಮೊದಲ ಇನ್ನಿಂಗ್ಸ್‌ ಆಡುತ್ತಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 10 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 24 ರನ್ ಗಳಿಸಿದೆ.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
43626

ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಮತ್ತು ಚೇತೇಶ್ವರ ಪೂಜಾರ ಅವರ ಆಕರ್ಷಕ ಆಟದ ನೆರವಿನಿಂದ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಗುರುವಾರ (ಜನವರಿ 3) ಆರಂಭಗೊಂಡ 4ನೇ ಮತ್ತು ಅಂತಿಮ ಟೆಸ್ಟ್ ನ ಮೊದಲ ದಿನದಾಟದಲ್ಲಿ ಭಾರತ ಉತ್ತಮ ಮೊತ್ತ ಕಲೆ ಹಾಕಿದೆ. ಮೊದಲ ದಿನದಾಂತ್ಯಕ್ಕೆ ಟೀಮ್ ಇಂಡಿಯಾ 90 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 303 ರನ್ ಕಲೆ ಹಾಕಿತ್ತು.

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ ಕೆಎಲ್ ರಾಹುಲ್ ಅವರ ವಿಕೆಟನ್ನು ಬೇಗನೆ ಕಳೆದುಕೊಂಡಿತು. 9 ರನ್ನಿಗೆ ಔಟಾದ ಕೆಎಲ್ ರಾಹುಲ್ ಮತ್ತೆ ವೈಫಲ್ಯ ಪ್ರದರ್ಶಿಸಿದ್ದರು. ಆದರೆ ಮಯಾಂಕ್ ಅಗರ್ವಾಲ್ ಅರ್ಧ ಶತಕ (77 ರನ್) ಮತ್ತು ಚೇತೇಶ್ವರ ಪೂಜಾರ ಅವರ ಶತಕ ತಂಡಕ್ಕೆ ರನ್ ಕೊಡುಗೆ ನೀಡಿತ್ತು. ಉಳಿದಂತೆ ನಾಯಕ ವಿರಾಟ್ ಕೊಹ್ಲಿ 23, ಅಜಿಂಕ್ಯ ರಹಾನೆ 38 ರನ್ ಅಷ್ಟೇ ತಂಡಕ್ಕೆ ಲಭಿಸಿತು.

ಭಾರತ ತಂಡ: ಲೋಕೇಶ್ ರಾಹುಲ್, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರಾ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಬ್ ಪಂತ್ (ವಿಕೆ), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಜಸ್‌ಪ್ರೀತ್‌ ಬೂಮ್ರಾ.

ಆಸೀಸ್ ತಂಡ: ಮಾರ್ಕಸ್ ಹ್ಯಾರಿಸ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಸ್ಚ್ಯಾಗ್ನೆ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್ಕಾಂಬ್, ಟ್ರಾವಿಸ್ ಹೆಡ್, ಟಿಮ್ ಪೇನ್ (ಸಿ & ವಿಕೆ), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಝೆಲ್ವುಡ್.

Story first published: Friday, January 4, 2019, 12:37 [IST]
Other articles published on Jan 4, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+