ಭಾರತ vs ಆಸ್ಟ್ರೇಲಿಯಾ, ಟೆಸ್ಟ್: ಹ್ಯಾರಿಸ್ ಅರ್ಧಶತಕ, ಆಸೀಸ್ 236 ರನ್

ಸಿಡ್ನಿ, ಜನವರಿ 5: ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಭಾರತ vs ಆಸ್ಟ್ರೇಲಿಯಾ ತಂಡಗಳ 4ನೇ ಟೆಸ್ಟ್‌ನಲ್ಲಿ ಶನಿವಾರದ 3ನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 83.3 ಓವರ್ ಮುಕ್ತಾಯಕ್ಕೆ 6 ವಿಕೆಟ್ ಕಳೆದು 236 ರನ್ ಪೇರಿಸಿದೆ. ಆರಂಭಿಕ ಆಟಗಾರ ಮಾರ್ಕಸ್ ಹ್ಯಾರಿಸ್ ಅವರ ಅರ್ಧಶತಕ (79 ರನ್) ತಂಡಕ್ಕೆ ಬಲ ತುಂಬಿತು. ಪೀಟರ್ ಹ್ಯಾಂಡ್ಸ್‌ಕಾಂಬ್ (28*) ಮತ್ತು ಪ್ಯಾಟ್ ಕಮಿನ್ಸ್ (25*) ಕ್ರೀಸ್‌ನಲ್ಲಿದ್ದಾರೆ.
ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಆಸೀಸ್ ಇನ್ನಿಂಗ್ಸ್‌ನಲ್ಲಿ ಭಾರತದ ಕುಲದೀಪ್ ಯಾದವ್ 3, ಆಲ್ ರೌಂಡರ್ ರವೀಂದ್ರ ಜಡೇಜಾ 2 ಮತ್ತು ಮೊಹಮ್ಮದ್ ಶಮಿ 1 ವಿಕೆಟ್ ಪಡೆದರು. ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದಿದ್ದ ವಿರಾಟ್ ಕೊಹ್ಲಿ ಬಳಗ ಮೊದಲ ಇನ್ನಿಂಗ್ಸ್‌ನಲ್ಲಿ 167.2 ಓವರ್ ಮುಕ್ತಾಯಕ್ಕೆ 7 ವಿಕೆಟ್ ಕಳೆದು 622 ರನ್ ಕಲೆ ಹಾಕುವುದರೊಂದಿಗೆ ಡಿಕ್ಲೇರ್ ಘೋಷಿಸಿತ್ತು.
ಶನಿವಾರದ ಆಟದ ವೇಳೆ ಮಳೆಯೂ ಕೊಂಚ ಅಡ್ಡಿಪಡಿಸಿತು. ಮಳೆಯ ಕಾರಣ ದಿನದಾಟವನ್ನು 83.3 ಓವರ್‌ಗೆ ಕೊನೆಗೊಳಿಸಲಾಯಿತು. ಭಾನುವಾರದ 4ನೇ ದಿನದಾಟದ ವೇಳೆ, ನಿಲುಗಡೆಯಾದ ಆಟವನ್ನು ಸರಿದೂಗಿಸುವ ಸಲುವಾಗಿ 8.3 ಹೆಚ್ಚುವರಿ ಓವರ್ ಎಸೆಯಲು ಅವಕಾಶ ಮಾಡಿ ಕೊಡಲಾಗಿದೆ.
ಇಂಡಿಯನ್ ವಾಲ್-2 ಖ್ಯಾತಿಯ ಚೇತೇಶ್ವರ ಪೂಜಾರ ಅವರ 193 ರನ್, ಯುವ ಆಟಗಾರ ರಿಷಬ್ ಪಂತ್ 159 ರನ್, ರವೀಂದ್ರ ಜಡೇಜಾ 81, ಮಯಾಂಕ್ ಅಗರ್ವಾಲ್ 77 ರನ್ ಸೇರಿಸಿದ್ದರಿಂದ ಟೀಮ್ ಇಂಡಿಯಾ ಬೃಹತ್ ರನ್ ಕಲೆ ಹಾಕುವುದು ಸಾಧ್ಯವಾಗಿತ್ತು.
ಭಾರತ ತಂಡ: ಲೋಕೇಶ್ ರಾಹುಲ್, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರಾ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಬ್ ಪಂತ್ (ವಿಕೆ), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ.
ಆಸೀಸ್ ತಂಡ: ಮಾರ್ಕಸ್ ಹ್ಯಾರಿಸ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಸ್ಚ್ಯಾಗ್ನೆ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್ಕಾಂಬ್, ಟ್ರಾವಿಸ್ ಹೆಡ್, ಟಿಮ್ ಪೇನ್ (ಸಿ & ವಿಕೆ), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಝೆಲ್ವುಡ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications