Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಆಸೀಸ್: ಡಿಸೆಂಬರ್ 11ಕ್ಕೆ ರೋಹಿತ್‌ ಶರ್ಮಾಗೆ ಫಿಟ್ನೆಸ್ ಪರೀಕ್ಷೆ

Australia vs India: All eyes on Rohit Sharmas fitness test on Friday

ನವದೆಹಲಿ: ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಭಾರತ-ಆಸ್ಟ್ರೇಲಿಯಾ ಸರಣಿಯಲ್ಲಿ ಆಡಿಲ್ಲ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಕೊನೇ ಎರಡು ಪಂದ್ಯಗಳಲ್ಲಿ ಶರ್ಮಾ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆದರೆ ಶರ್ಮಾ ಪಾಲ್ಗೊಳ್ಳುವಿಕೆ ಅವರ ಫಿಟ್ನೆಸ್ ಪರೀಕ್ಷೆಯ ಫಲಿತಾಂಶವನ್ನು ಅವಲಂಭಿಸಿದೆ.

2020ರ ಇಂಡಿಯನ್ ಪ್ರೀಮಿಯರ್ ಲೀಗ್‌ ವೇಳೆ ರೋಹಿತ್ ಶರ್ಮಾ ಹ್ಯಾಮ್‌ಸ್ಟ್ರಿಂಗ್‌ಗೆ (ಸ್ನಾಯು ಸೆಳೆತ) ಒಳಗಾಗಿದ್ದರು. ಹೀಗಾಗಿ ಟೀಮ್ ಇಂಡಿಯಾ ಜೊತೆ ಅವರು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸದೆ ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಚೇತರಿಸಿಕೊಳ್ಳುತ್ತಿದ್ದರು.

ಭಾರತ-ಆಸ್ಟ್ರೇಲಿಯಾ ಸರಣಿ ಆರಂಭಗೊಳ್ಳುವಾಗ ರೋಹಿತ್ ಇನ್ನೂ ಫಿಟ್‌ನೆಸ್‌ಗೆ ಮರಳಿರಲಿಲ್ಲ. ಹೀಗಾಗಿ ಭಾರತದ ಏಕದಿನ, ಟಿ20ಐ ತಂಡಗಳಿಂದ ಶರ್ಮಾ ಹೊರಗಿದ್ದರು. ಟೆಸ್ಟ್ ಸರಣಿಯ ಮೊದಲ ಎರಡು ಟೆಸ್ಟ್‌ಗಳಲ್ಲೂ ಶರ್ಮಾಗೆ ಆಡಲಾಗುತ್ತಿಲ್ಲ. ಆದರೆ ಕೊನೇ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಲು ಅವಕಾಶವಿದೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸಂಬಂಧಿಸಿ ರೋಹಿತ್‌ಗೆ ಶುಕ್ರವಾರ (ಡಿಸೆಂಬರ್ 11) ಫಿಟ್‌ನೆಸ್ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯಲ್ಲಿ ಪಾಸ್ ಆದರೆ ಮಾತ್ರ ಶರ್ಮಾ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದ್ದಾರೆ. ಆದರೆ ಆಸ್ಟ್ರೇಲಿಯಾ ತಲುಪಿದ ಬಳಿಕ ಶರ್ಮಾ 14 ದಿನಗಳ ಕ್ವಾರಂಟೈನ್ ಪಾಲಿಸಬೇಕಿರುತ್ತದೆ. ಟೆಸ್ಟ್ ಸರಣಿ ಡಿಸೆಂಬರ್ 17ರಿಂದ ಆರಂಭಗೊಳ್ಳಲಿದೆ.

Story first published: Friday, December 11, 2020, 9:52 [IST]
Other articles published on Dec 11, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+