Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೇಡ್-ಸ್ವೆಪ್ಸನ್ ಮಿಂಚು, ಭಾರತ ವಿರುದ್ಧ ಆಸ್ಟ್ರೇಲಿಯಾಕ್ಕೆ ರೋಚಕ ಜಯ

Australia vs India: Australia win the third T20I by 12 runs

ಸಿಡ್ನಿ: ಆರಂಭಿಕ ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್, ಬೌಲರ್ ಮಿಚೆಲ್ ಸ್ವೆಪ್ಸನ್ ಮತ್ತು ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಚತುರ ಆಟದ ನೆರವಿನಿಂದ ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧದ ಮೂರನೇ ಟಿ20ಐ ಪಂದ್ಯದಲ್ಲಿ 12 ರನ್ ಜಯ ಗಳಿಸಿದೆ. ಇದರೊಂದಿಗೆ ವೈಟ್ ವಾಷ್ ಮುಖಭಂಗದಿಂದ ಕಾಂಗರೂ ಪಡೆ ಪಾರಾಗಿದೆ.

ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ತಂಡ, ಮ್ಯಾಥ್ಯೂ ವೇಡ್ 80 (53 ಎಸೆತ), ಸ್ಟೀವ್ ಸ್ಮಿತ್ 24, ಗ್ಲೆನ್ ಮ್ಯಾಕ್ಸ್‌ವೆಲ್ 54 (36), ಡಿ ಆರ್ಸಿ ಶಾರ್ಟ್ 7 ರನ್‌ನೊಂದಿಗೆ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದು 186 ರನ್ ಗಳಿಸಿತು.

1
48439

ಗುರಿ ಬೆನ್ನಟ್ಟಿದ ಭಾರತ ತಂಡ, ಶಿಖರ್ ಧವನ್ 28, ನಾಯಕ ವಿರಾಟ್ ಕೊಹ್ಲಿ 85 (61), ಸಂಜು ಸ್ಯಾಮ್ಸನ್ 10, ಹಾರ್ದಿಕ್ ಪಾಂಡ್ಯ 20, ಶಾರ್ದೂಲ್ ಠಾಕೂರ್ 17 ರನ್‌ನೊಂದಿಗೆ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದು 174 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಇದರೊಂದಿಗೆ ಟಿ20ಐ ಸರಣಿ 2-1ರಿಂದ ಭಾರತದ ಪಾಲಾಗಿದೆ.

ಆಸ್ಟ್ರೇಲಿಯಾ ಇನ್ನಿಂಗ್ಸ್‌ನಲ್ಲಿ ಭಾರತದ ವಾಷಿಂಗ್ಟನ್ ಸುಂದರ್ 2, ಟಿ ನಟರಾಜನ್ 1, ಶಾರ್ದೂಲ್ ಠಾಕೂರ್ 1 ವಿಕೆಟ್ ಪಡೆದರೆ, ಭಾರತದ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ವೆಪ್ಸನ್ 3, ಗ್ಲೆನ್ ಮ್ಯಾಕ್ಸ್‌ವೆಲ್, ಸೀನ್ ಅಬಾಟ್, ಆ್ಯಂಟ್ರ್ಯೂ ಟೈ ಮತ್ತು ಆ್ಯಡಂ ಝಾಂಪ 1 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ ಸರಣಿ ಶ್ರೇಷ್ಠರೆನಿಸಿದರು.

Story first published: Tuesday, December 8, 2020, 17:51 [IST]
Other articles published on Dec 8, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+