Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಆಸೀಸ್: 1ನೇ ಟೆಸ್ಟ್‌ನಲ್ಲಿ ಭಾರತಕ್ಕೆ ಗೆಲ್ಲುವ ಅವಕಾಶ ಹೆಚ್ಚು

Australia vs India: In 1st test, winning chances more in India

ಅಡಿಲೇಡ್: ಅಡಿಲೇಡ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಪಿಂಕ್‌ಬಾಲ್ ಟೆಸ್ಟ್‌ನಲ್ಲಿ ಪ್ರವಾಸಿ ಭಾರತಕ್ಕೆ ಗೆಲ್ಲುವ ಅವಕಾಶ ಹೆಚ್ಚಿದೆ. ಮೊದಲ ಪಂದ್ಯದಲ್ಲಿ ಈಗಾಗಲೇ 53 ರನ್ ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಉತ್ತಮ ರನ್ ಕಲೆ ಹಾಕಿದರೆ ನಾಲ್ಕು ಪಂದ್ಯಗಳ ಈ ಟೆಸ್ಟ್‌ನಲ್ಲಿ ಸರಣಿ ಮುನ್ನಡೆಗೆ ಅವಕಾಶವಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ನಾಯಕ ವಿರಾಟ್ ಕೊಹ್ಲಿಯ 74 ಗಮನಾರ್ಹ ರನ್‌ನೊಂದಿಗೆ 244 ರನ್ ಗಳಿಸಿತ್ತು. ಆಸ್ಟ್ರೇಲಿಯಾ ತಂಡ ನಾಯಕ ಟಿಮ್ ಪೈನ್ ಅವರ 73 ರನ್‌ ಕೊಡುಗೆಯೊಂದಿಗೆ 191 ರನ್ ಬಾರಿಸಿ ಹಿನ್ನಡೆ ಅನುಭವಿಸಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ರನ್‌ ಸುಧಾರಣೆ ಕಾಣುವ ಸಾಧ್ಯತೆಯಿದೆ.

ಆರಂಭಿಕ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದಿಂದ ಪ್ರಮುಖ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ 1, ಮ್ಯಾಥ್ಯೂ ವೇಡ್ 8, ಜೋ ಬರ್ನ್ಸ್ 8, ಟ್ರಾವಿಸ್ ಹೆಡ್ 7 ರನ್‌ಗೆ ವಿಕೆಟ್ ಒಪ್ಪಿಸಿದ್ದು ದುಬಾರಿಯಾಗಿ ಪರಿಣಮಿಸಿತ್ತು. ಮತ್ತೊಂದೆಡೆ ಸ್ಪಿನ್ನರ್ ಅಶ್ವಿನ್ ಅವರನ್ನು ಕಡೆಗಣಿಸಿದ ಆಸೀಸ್ ಬ್ಯಾಟ್ಸ್‌ಮನ್‌ಗಳು ಆಕ್ರಮಣಕಾರಿ ಆಟಕ್ಕೆ ಮುಂದಾಗಿ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿದ್ದರು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ಈಗಾಗಲೇ ಪೃಥ್ವಿ ಶಾ ವಿಕೆಟ್ (4 ರನ್) ಕಳೆದುಕೊಂಡಾಗಿದೆ. ಇನ್ನು ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಹಾ ಇಂಥ ಬ್ಯಾಟ್ಸ್‌ಮನ್‌ಗಳು ಎಚ್ಚರಿಕೆ ಆಟ ನೀಡಿದರೆ ಭಾರತ ಉತ್ತಮ ರನ್‌ ಕಲೆ ಹಾಕಲು ಅವಕಾಶವಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ 300+ ರನ್ ಗಳಿಸಿದರೂ ಗೆಲ್ಲುವ ಅವಕಾಶ ಹೆಚ್ಚಿದೆ.

Story first published: Friday, December 18, 2020, 23:05 [IST]
Other articles published on Dec 18, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+