ಭಾರತ vs ಆಸ್ಟ್ರೇಲಿಯಾ: ಟೀಮ್ ಇಂಡಿಯಾ ಹೆಸರಲ್ಲಿ ವಿಶೇಷ ದಾಖಲೆ

ಸಿಡ್ನಿ: ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಅಜಿಂಕ್ಯ ರಹಾನೆ ಬಳಗ ಅಪರೂಪದ ದಾಖಲೆಗೆ ಕಾರಣವಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ 4ನೇ ಇನ್ನಿಂಗ್ಸ್‌ನಲ್ಲಿ ಭಾರತೀಯ ಆರಕ್ಕೂ ಹೆಚ್ಚು ಬ್ಯಾಟ್ಸ್‌ಮನ್‌ಗಳು 50+ ಎಸೆತಗಳನ್ನು ಎದುರಿಸಿದ್ದು ಟೆಸ್ಟ್ ಇತಿಹಾಸದಲ್ಲೇ ಇದೇ ಮೊದಲು. ಭಾರತೀಯರ ಈ ದಿಟ್ಟ ಬ್ಯಾಟಿಂಗ್‌ನಿಂದಲೇ ಟೀಮ್ ಇಂಡಿಯಾ ಪಂದ್ಯವನ್ನು ಡ್ರಾ ಮಾಡಿಕೊಂಡಿತಲ್ಲದೆ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 1-1ರಲ್ಲೇ ಹಿಡಿದಿಟ್ಟುಕೊಂಡಿದೆ.
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಡ್ರಾದೊಂದಿಗೆ ಅಂತ್ಯ ಕಂಡಿದ್ದು ನಿಜ. ಅಸಲಿಗೆ ಪಂದ್ಯದಲ್ಲಿ ಭಾರತ ಸೋಲಿನ ಭೀತಿಯಲ್ಲಿತ್ತು. ಆದರೆ ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ರಿಷಭ್ ಪಂತ್ ಅರ್ಧ ಶತಕ ಬಾರಿಸಿದ್ದರಿಂದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ಬೇಗನೆ ಇನ್ನಿಂಗ್ಸ್ ಮುಗಿಸಲಿಲ್ಲ.
ಆರಂಭಿ ಇನ್ನಿಂಗ್ಸ್‌ನಲ್ಲಿ 94 ರನ್ ಹಿನ್ನಡೆ ಅನುಭವಿಸಿದ್ದ ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಬೇಗನೆ ಸರ್ವ ಪತನ ಕಾಣುವ ಭೀತಿ ಎದುರಿಸಿತ್ತು. ಆದರೆ ಶರ್ಮಾ 52, ಪೂಜಾರ 77, ರಿಷಭ್ ಪಂತ್ 97 ರನ್, ಹನುಮ ವಿಹಾರಿ ಅಜೇಯ 23, ರವಿಚಂದ್ರನ್ ಅಶ್ವಿನ್ ಅಜೇಯ 39 ರನ್ ಬಾರಿಸಿದ್ದರಿಂದ ಭಾರತ ಐದನೇ ದಿನದಾಟ ಮುಗಿಯುವ ವೇಳೆಗೆ 131 ನೇ ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 334 ರನ್ ಗಳಿಸಿತ್ತು.
ಮೂರನೇ ಟೆಸ್ಟ್ ನಲ್ಲಿ 50+ ಎಸೆತ ಎದುರಿಸಿದ ಭಾರತದ ಆರು ಬ್ಯಾಟ್ಸ್‌ಮನ್‌ಗಳು
* ರೋಹಿತ್ ಶರ್ಮಾ, 98 ಎಸೆತ
* ಶುಬ್ಮನ್ ಗಿಲ್, 64 ಎಸೆತ
* ಚೇತೇಶ್ವರ ಪೂಜಾರ, 205 ಎಸೆತ
* ರಿಷಭ್ ಪಂತ್, 118 ಎಸೆತ
* ಹನುಮ ವಿಹಾರಿ, 161 ಎಸೆತ
* ರವಿಚಂದ್ರನ್ ಅಶ್ವಿನ್, 139 ಎಸೆತ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications