Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ವಿರುದ್ಧ ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ ವಿಶಿಷ್ಠ ದಾಖಲೆ!

Australia vs India: Indians to face 100+ balls in Australia in Test

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ, ಆತಿಥೇಯರ ವಿರುದ್ಧ ಟೆಸ್ಟ್ ಸರಣಿ ಆಡುತ್ತಿದೆ. ಇತ್ತಂಡಗಳ ಮಧ್ಯೆ ಆರಂಭಿಕ ಟೆಸ್ಟ್ ಪಂದ್ಯ ನಡೆಯುತ್ತಿದೆ. ಅಡಿಲೇಡ್‌ನ ಓವಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ (ಪಿಂಕ್‌ ಬಾಲ್ ಟೆಸ್ಟ್)ನಲ್ಲಿ ನಾಯಕ ವಿರಾಟ್ ಕೊಹ್ಲಿ ಅರ್ಧ ಶತಕ ಬಾರಿಸಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಭಾರತ ಪರ ವಿರಾಟ್ ಕೊಹ್ಲಿ 180 ಎಸೆತಗಳಲ್ಲಿ 74 ರನ್‌ ಬಾರಿಸಿದ್ದರು. ಆ ಬಳಿಕ 77ನೇ ಓವರ್‌ನಲ್ಲಿ ನೇಥನ್ ಲಿಯಾನ್ ಎಸೆತದ ವೇಳೆ ರನ್ ಔಟ್ ಆಗಿ ನಿರ್ಗಮಿಸಿದ್ದರು. ಕೊಹ್ಲಿ ಔಟಾಗುವಷ್ಟರಲ್ಲಿ ಅವರ ಹೆಸರಿನಲ್ಲಿ ವಿಶಿಷ್ಠ ದಾಖಲೆ ನಿರ್ಮಾಣವಾಗಿತ್ತು.

ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಹೆಚ್ಚು ಬಾರಿ 100ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿ ಭಾರತೀಯ ಬ್ಯಾಟ್ಸ್‌ಮನ್‌ಗಳ ದಾಖಲೆ ಪಟ್ಟಿಯಲ್ಲಿ ಕೊಹ್ಲಿಯೀಗ 3ನೇ ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾದಲ್ಲಿ 9 ಬಾರಿ ಟೆಸ್ಟ್‌ನಲ್ಲಿ 100+ ಎಸೆತ ಎದುರಿಸಿರುವ ಕೊಹ್ಲಿ ಮಾಜಿ ಬ್ಯಾಟ್ಸ್‌ಮನ್‌ ವಿವಿಎಸ್‌ ಲಕ್ಷ್ಮಣ್ ಜೊತೆ ಸ್ಥಾನ ಹಂಚಿಕೊಂಡಿದ್ದಾರೆ.

ವಿವಿಎಸ್ ಲಕ್ಷ್ಮಣ್ ಕೂಡ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯಗಳಲ್ಲಿ 9 ಬಾರಿ 100+ ಎಸೆತ ಎದುರಿಸಿದ ದಾಖಲೆ ಹೊಂದಿದ್ದಾರೆ. ಈಗ ಕೊಹ್ಲಿ ಕೂಡ ಇದೇ ಸಾಧನೆ ತೋರಿದ್ದಾರೆ. ಈ ದಾಖಲೆ ಸಾಲಿನಲ್ಲಿ ಕನ್ನಡಿಗ, ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಮೊದಲ ಸ್ಥಾನದಲ್ಲಿದ್ದರೆ, ದಂತಕತೆ ಸಚಿನ್ ತೆಂಡೂಲ್ಕರ್ ದ್ವಿತೀಯ ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ನಲ್ಲಿ ಹೆಚ್ಚು ಬಾರಿ 100+ ಎಸೆತ ಎದುರಿಸಿದ ಭಾರತೀಯರು
1. ರಾಹುಲ್ ದ್ರಾವಿಡ್, 12 ಸಾರಿ
2. ಸಚಿನ್ ತೆಂಡೂಲ್ಕರ್, 11 ಸಾರಿ
3. ವಿವಿಎಸ್ ಲಕ್ಷ್ಮಣ್, 9 ಸಾರಿ
4. ವಿರಾಟ್ ಕೊಹ್ಲಿ, 9 ಸಾರಿ
5. ಸುನಿಲ್ ಗವಾಸ್ಕರ್, 8 ಸಾರಿ
6. ಚೇತೇಶ್ವರ್ ಪೂಜಾರ, 7 ಸಾರಿ

Story first published: Thursday, December 17, 2020, 22:58 [IST]
Other articles published on Dec 17, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+