For Quick Alerts
ALLOW NOTIFICATIONS  
For Daily Alerts
 

3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ಗಮನ ಸೆಳೆದ ಬೂಮ್ರಾ

Australia vs India: Jasprit Bumrah batting at no.3 in second innings

ಅಡಿಲೇಡ್: ಭಾರತದ ವೇಗಿ ಜಸ್‌ಪ್ರೀತ್‌ ಬೂಮ್ರಾ ಬೌಲಿಂಗ್‌ಲಿಂದ ಆಲ್‌ ರೌಂಡರ್‌ ಎನಿಸಿಕೊಳ್ಳುವುದರಲ್ಲಿದ್ದಾರಾ? ಬೂಮ್ರಾ ಇತ್ತೀಚಿನ ಬ್ಯಾಟಿಂಗ್‌ ನೋಡಿದರೆ ಇಂಥದ್ದೊಂದು ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಬೂಮ್ರಾ ಗಮನಾರ್ಹ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬೂಮ್ರಾ 3ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದು ಗಮನ ಸೆಳೆದಿದ್ದಾರೆ.

1
48440

ಅಡಿಲೇಡ್‌ನಲ್ಲಿ ನಡೆಯುತ್ತಿರುವ ಮೊದಲನೇ (ಪಿಂಕ್‌ಬಾಲ್) ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 53 ರನ್ ಮುನ್ನಡೆ ಸಾಧಿಸಿದೆ. ಸದ್ಯ ಭಾರತ ದ್ವಿತೀಯ ಇನ್ನಿಂಗ್ಸ್‌ ಆಡುತ್ತಿದೆ. ಭಾರತದ ದ್ವಿತೀಯ ಇನ್ನಿಂಗ್ಸ್‌ನ ಆರಂಭದಲ್ಲಿ ಜಸ್‌ಪ್ರೀತ್‌ ಬೂಮ್ರಾ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ಚಿತ್ತ ತನ್ನತ್ತ ಹರಿಸಿಕೊಂಡರು.

3ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬೂಮ್ರಾ

3ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬೂಮ್ರಾ

ಶುಕ್ರವಾರ ಮೊದಲನೇ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಬೂಮ್ರಾ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದರು. ಆರಂಭಿಕ ಇನ್ನಿಂಗ್ಸ್‌ನಲ್ಲಿ 7 ಎಸೆತಗಳಲ್ಲಿ 4 ರನ್ ಬಾರಿಸಿದ್ದ ಬೂಮ್ರಾ ಅಜೇಯರಾಗಿ ಉಳಿದಿದ್ದರು. ಹೀಗಾಗಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬೂಮ್ರಾಗೆ ಒನ್‌ಡೌನ್‌ನಲ್ಲಿ ಬ್ಯಾಟಿಂಗ್‌ಗೆ ಅವಕಾಶ ನೀಡಲಾಗಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ 0ಗೆ ವಿಕೆಟ್ ಒಪ್ಪಿಸಿದ ಬಳಿಕ ಚೇತೇಶ್ವರ ಪೂಜಾರ ಬದಲು ಬೂಮ್ರಾ ಬಂದಿದ್ದರು.

ನೈಟ್‌ ವಾಚ್‌ಮನ್‌ ಆದ ಜಸ್‌ಪ್ರೀತ್‌

ನೈಟ್‌ ವಾಚ್‌ಮನ್‌ ಆದ ಜಸ್‌ಪ್ರೀತ್‌

ಬೌಲರ್ ಬೂಮ್ರಾ 3ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದಿದ್ದು ವಿಶೇಷವೇನಲ್ಲ. ದಿನದ ಆಟ ಕೊನೇ ಹಂತದಲ್ಲಿರುವಾಗ ಮೇಲಿನ ಕ್ರಮಾಂಕದ ಬ್ಯಾಟ್ಸ್‌ಮನ್ ಔಟಾದರೆ ಆ ದಿನ ಮತ್ತೊಬ್ಬ ಪ್ರಮುಖ ಬ್ಯಾಟ್ಸ್ ಮನ್ ಔಟ್ ಆಗೋಕೆ ಅವಕಾಶ ಕೊಡಬಾರದು ಎಂದು ಬ್ಯಾಟಿಂಗ್‌ ತಂಡ ಹೀಗೆ ಡೌನ್ ಆರ್ಡರ್ ಬ್ಯಾಟ್ಸ್‌ಮನನ್ನು ಕಳುಹಿಸುತ್ತದೆ. ಮರುದಿನ ಹೊಸದಾಗಿ ಆಟ ಶುರುಮಾಡಬಹುದು ಅಂತ ನೈಟ್ ವಾಚ್ ಮನ್ ಕಳಿಸಲಾಗುತ್ತದೆ. ಶುಕ್ರವಾರದ ಆಟದ ವೇಳೆ ಬೂಮ್ರಾ 3ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದಿದ್ದು ನೈಟ್‌ ವಾಚ್‌ಮನ್‌ ಆಗಿ.

ಅಭ್ಯಾಸದಲ್ಲಿ ಭರ್ಜರಿ ಬ್ಯಾಟಿಂಗ್‌

ಅಭ್ಯಾಸದಲ್ಲಿ ಭರ್ಜರಿ ಬ್ಯಾಟಿಂಗ್‌

ಮೊದಲನೇ ಟೆಸ್ಟ್‌ಗೂ ಮುನ್ನ ಬೂಮ್ರಾ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿ ಗಮನ ಸೆಳೆದಿದ್ದರು. ದ್ವಿತೀಯ ಅಭ್ಯಾಸ ಪಂದ್ಯದಲ್ಲಿ ಬೂಮ್ರಾ 57 ಎಸೆತಗಳಲ್ಲಿ ಅಜೇಯ 55 ರನ್ ಬಾರಿಸಿದ್ದರು. ವಿಶೇಷವೆಂದರೆ ಆ ಇನ್ನಿಂಗ್ಸ್‌ನಲ್ಲಿ ಬೂಮ್ರಾ ಅವರದ್ದೇ ಅತ್ಯಧಿಕ ರನ್ ಆಗಿತ್ತು. ಅಂತೂ ಟೆಸ್ಟ್‌ನಲ್ಲಂತೂ ಬೂಮ್ರಾ ದಿಟ್ಟ ಬ್ಯಾಟಿಂಗ್‌ ಪ್ರದರ್ಶಿಸಲು ಶುರು ಮಾಡಿದ್ದಾರೆ.2020ರ ಇಸವಿ ಜಸ್‌ಪ್ರೀತ್‌ ಬೂಮ್ರಾ ಪಾಲಿಗೆ ಅವಿಸ್ಮರಣೀಯವೆನಿಸಿದೆ. ಯಾಕೆಂದರೆ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಬೂಮ್ರಾ 3ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದಿದ್ದು ಅವರ ಪಾಲಿಗೆ ತುಂಬಾ ವಿಶೇಷವೆನಿಸಿದೆ.

Story first published: Saturday, December 19, 2020, 1:09 [IST]
Other articles published on Dec 19, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+