ಸಿಕ್ಸ್ ಚಚ್ಚಿ ಅರ್ಧ ಶತಕ ಪೂರೈಸಿದ ಜಸ್‌ಪ್ರೀತ್ ಬೂಮ್ರಾ: ವಿಡಿಯೋ

ಸಿಡ್ನಿ: ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಗಾರ್ಡ್ ಆಫ್ ಆನರ್‌ಗೆ ಪಾತ್ರರಾಗಿದ್ದಾರೆ. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತದ ಪರ ಅತೀ ಹೆಚ್ಚು ರನ್ ಗಳಿಸಿದ್ದಕ್ಕಾಗಿ ಬೂಮ್ರಾ ಟೀಮ್ ಇಂಡಿಯಾದ ಮತ್ತು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಈ ಪಂದ್ಯದಲ್ಲಿ ಬೂಮ್ರಾ ಸಿಕ್ಸ್ ಚಚ್ಚಿ ಅರ್ಧ ಶತಕ ಪೂರೈಸಿದ್ದರು.
ಶುಕ್ರವಾರ ನಡೆದ ಎರಡನೇ ಅಭ್ಯಾಸ ಪಂದ್ಯದಲ್ಲಿ ಭಾರತದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಯಾರೂ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆದರೆ 10ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಬೌಲರ್ ಜಸ್‌ಪ್ರೀತ್ ಬೂಮ್ರಾ 57 ಎಸೆತಗಳಲ್ಲಿ ಅಜೇಯ 55 ರನ್ ಬಾರಿಸಿದ್ದರು. ಈ ವಿಶೇಷ ಸಾಧನೆಗೆ ಬೂಮ್ರಾ ಅವರು ತಂಡದ ಗಾರ್ಡ್ ಆಫ್ ಆನರ್‌ಗೆ ಪಾತ್ರರಾಗಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ತಂಡದಿಂದ ಪೃಥ್ವಿ ಶಾ 40, ಶುಬ್ಮನ್ ಗಿಲ್ 43, ಹನುಮ ವಿಹಾರಿ 15, ಜಸ್‌ಪ್ರೀತ್ ಬೂಮ್ರಾ 55, ಮೊಹಮ್ಮದ್ ಸಿರಾಜ್ 22 ರನ್ ಕೊಡುಗೆಯಿತ್ತರು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 48.3 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದು 194 ರನ್ ಗಳಿಸಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೂಮ್ರಾ ಬಾರಿಸಿದ ಅತ್ಯಧಿಕ ವೈಯಕ್ತಿಕ ರನ್ ಆಗಿ 55 ರನ್ ಗುರುತಸಿಕೊಂಡಿದೆ. ಅಷ್ಟೇ ಅಲ್ಲ ಪಂದ್ಯವೊಂದರಲ್ಲಿ ಬೌಲರ್ ಒಬ್ಬ ಅತೀ ಹೆಚ್ಚು ರನ್ ಗಳಿಸಿದ್ದು ವಿಶೇಷ ದಾಖಲೆಯಾಗಿ ಉಳಿದಿದೆ. ಬೂಮ್ರಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಾರಿಸಿರುವ ಅತ್ಯಧಿಕರ ರನ್ ಎಂದರೆ 10.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications