ಕೊರೊನಾ ವೈರಸ್ ಆತಂಕ: ಸಿಡ್ನಿ ಟೆಸ್ಟ್‌ಗೆ ಮೆಲ್ಬರ್ನ್ ಕ್ರೀಡಾಂಗಣ ಬ್ಯಾಕ್ಅಪ್

ಆಸ್ಟ್ರೇಲಿಯಾದ ಕೆಲ ರಾಜ್ಯಗಳಲ್ಲಿ ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಬಗ್ಗೆ ಗೊಂದಲ ಮುಂದುವರಿದಿದೆ. ನ್ಯೂಸೌಥ್‌ವೇಲ್ಸ್‌ನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಸಿಡ್ನಿಯಲ್ಲಿ ನಡೆಸಬೇಕಾಗಿರುವ ಮೂರನೇ ಟೆಸ್ಟ್ ಪಂದ್ಯ ನಡೆಯುವ ಬಗ್ಗೆ ಗೊಂದಲಗಳು ಮುಂದುವರಿದಿದೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಮಾತ್ರ ಈವರೆಗೂ ಸಿಡ್ನಿಯಲ್ಲಿ ಮೂರನೇ ಟೆಸ್ಟ್ ಪಂದ್ಯವನ್ನು ಆಯೋಜಿಸಲು ಬದ್ಧ ಎಂದಿದೆ.
ಆದರೆ ಗುರುವಾರ ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಸಿಡ್ನಿ ಟೆಸ್ಟ್‌ಗೆ ಮೀಸಲು ಕ್ರೀಡಾಂಗಣವನ್ನು ಘೋಷಣೆ ಮಾಡಿದೆ. ಎರಡನೇ ಟೆಸ್ಟ್ ಪಂದ್ಯ ನಡೆಯುವ ಮೆಲ್ಬರ್ನ್ ಅಂಗಳವೇ ಮೂರನೇ ಪಂದ್ಯಕ್ಕೆ ಮೀಸಲು ಕ್ರೀಡಾಂಗಣ ಎಂಬುದನ್ನು ಸಿಎ ಸ್ಪಷ್ಟಪಡಿಸಿದೆ.
ಅಂತಿಮ ಹಂತದಲ್ಲಿ ಪಂದ್ಯವನ್ನು ಸ್ಥಳಾಂತರಿಸಲೇಬೇಕಾದ ಸಂದರ್ಭ ಬಂದರೆ ಆಗ ಮೂರನೇ ಪಂದ್ಯ ಮೆಲ್ಬರ್ನ್‌ನಲ್ಲಿಯೇ ನಡೆಯಲಿದೆ. ಮೂರನೇ ಪಂದ್ಯ ಜನವರಿ 7 ರಿಂದ ಆರಂಭವಾಗಲಿದ್ದು ಪಂದ್ಯದ ಆಯೋಜನೆಗೆ ಅಡ್ಡಿಯಾಗದಂತೆ ಆಸ್ಟ್ರೇಲಿಯಾ ಕ್ರಮ ಕೈಗೊಂಡಿದೆ.
ಆಸ್ಟ್ರೇಲಿಯಾದ್ಯಂತ ಕೊರೊನಾವೈರಸ್ ಪ್ರಕರಣಗಳು ಸಾಕಷ್ಟು ನಿಯಂತ್ರಣಕ್ಕೆ ಬಂದಿತ್ತು. ಹೀಗಾಗಿ ಜನಜೀವನ ಸಾಮಾನ್ಯ ಸ್ಥಿತಿಗೆ ಬಂದಿತ್ತು. ಆದರೆ ಈಗ ಮತ್ತೆ ಎರಡನೇ ಅಲೆ ಆಸ್ಟ್ರೇಲಿಯಾದಲ್ಲಿ ಕಾಣಿಸಿಕೊಂಡಿದ್ದು ಕೆಲ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗುತ್ತಿದೆ. ಹೀಗಾಗಿ ಅಂತರರಾಜ್ಯ ಪ್ರಯಾಣದಲ್ಲೂ ಸಾಕಷ್ಟು ನಿರ್ಬಂಧಗಳಿವೆ.
ಆಸ್ಟ್ರೆಲಿಯಾ ವಿರುದ್ಧದ ಎರಡನೇ ಟೆಸ್ಟ್ ಬಾಕ್ಸಿಂಗ್ ಡೇಯಂದು ಆರಂಭವಾಗಲಿದೆ. ಈ ಪಂದ್ಯಕ್ಕೆ ಮೆಲ್ಬೋರ್ನ್ ಕ್ರೀಡಾಂಗಣ ಆತಿಥ್ಯವನ್ನು ವಹಿಸಿಕೊಳ್ಳುತ್ತಿದ್ದು ಆಸ್ಟ್ರೇಲಿಯಾ ಹಾಗೂ ಭಾರತ ತಂಡದ ಆಟಗಾರರು ಈಗಾಗಲೇ ಮೆಲ್ಬೋರ್ನ್ ತಲುಪಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications