ಬಾಕ್ಸಿಂಗ್ ಡೇ ಟೆಸ್ಟ್ ಮೊದಲ ದಿನದಾಂತ್ಯಕ್ಕೆ ಭಾರತ 215/2

ಮೆಲ್ಬೋರ್ನ್, ಡಿಸೆಂಬರ್ 26: ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯ ಮೂರನೇ ಪಂದ್ಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನ(ಎಂಸಿಜಿ)ದಲ್ಲಿ ಕ್ರಿಸ್ಮಸ್ ಮರುದಿನ(ಬಾಕ್ಸಿಂಗ್ ಡೇ) ಆರಂಭವಾಗಿದ್ದು, ಮೊದಲ ದಿನದ ಗೌರವವನ್ನು ಭಾರತ ಪಡೆದುಕೊಂಡಿದೆ.
ಮೊದಲ ದಿನದ ಅಂತ್ಯಕ್ಕೆ ಭಾರತ 215/2 ಸ್ಕೋರ್ ಮಾಡಿದೆ. ಚೇತೇಶ್ವರ್ ಪೂಜಾರಾ 68 ಹಾಗೂ ನಾಯಕ ವಿರಾಟ್ ಕೊಹ್ಲಿ 47 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ.
ಚಹಾವಿರಾಮದ ವೇಳೆಗೆ ಭಾರತದ ಸ್ಕೋರ್ 123/2. ಅರ್ಧಶತಕ ಬಾರಿಸಿದ್ದ ಅಗರವಾಲ್ 76ರನ್ ಗಳಿಸಿ ಔಟಾಗಿದ್ದಾರೆ. ಕಮಿನ್ಸ್ ಅವರು ತಮ್ಮ ಎರಡನೆ ವಿಕೆಟ್ ಗಳಿಸಿದರು.
ಭೋಜನವಿರಾಮದ ನಂತರ ಬ್ಯಾಟಿಂಗ್ ಆರಂಭಿಸಿದ ಮಯಾಂಕ್ ಅಗರವಾಲ್ ಅವರು ನಾಥನ್ ಲಯಾನ್ ಬೌಲಿಗ್ ನಲ್ಲಿ ಎರಡು ಬೌಂಡರಿ ಬಾರಿಸಿ, ತಮ್ಮ ಚೊಚ್ಚಲ ಅರ್ಧಶತಕ ಪೂರೈಸಿದರು.
ಮೊದಲ ದಿನದ ಭೋಜನ ವಿರಾಮದ ವೇಳೆಗೆ ಭಾರತದ ಸ್ಕೋರ್ 57/1. ಹನುಮ ವಿಹಾರಿ 8 ರನ್ ಗಳಿಸಿ ಔಟಾದರೆ, ಮಯಾಂಕ್ ಅಗರವಾಲ್ 34 ಹಾಗೂ ಚೇತೇಶ್ವರ್ ಪೂಜಾರಾ 10ರನ್ ಗಳಿಸಿ ಆಡುತ್ತಿದ್ದಾರೆ.
ಟಾಸ್ ವರದಿ : ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಈ ಸರಣಿಯಲ್ಲಿ ಮೊದಲ ಬಾರಿಗೆ ಹೊಸ ಆರಂಭಿಕ ಜೋಡಿಯಾದ ಮಯಾಂಕ್ ಅಗರವಾಲ್ ಹಾಗೂ ಹನುಮ ವಿಹಾರಿ ಅವರು ಕಣಕ್ಕಿಳಿದಿದ್ದು, ಉತ್ತಮ ಆರಂಭ ಒದಗಿಸಿದ್ದಾರೆ.
ಇದಕ್ಕೂ ಮುನ್ನ ಭಾರತದ 295ನೇ ಟೆಸ್ಟ್ ಕ್ರಿಕೆಟರ್ ಆಗಿ, ಕರ್ನಾಟಕದ ಮಯಾಂಕ್ ಅಗರವಾಲ್ ಅವರು ಪದಾರ್ಪಣೆ ಮಾಡಿದರು.
Story first published: Wednesday, December 26, 2018, 12:36 [IST]
Other articles published on Dec 26, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications