ಬರ್ತ್‌ಡೇ ಖುಷಿಯಲ್ಲಿರುವ ದ್ರಾವಿಡ್‌ಗೆ ಟೀಮ್ ಇಂಡಿಯಾದಿಂದ ಸ್ಪೆಷಲ್ ಗಿಫ್ಟ್

ನವದೆಹಲಿ: ಹುಟ್ಟು ಹಬ್ಬದ ಖುಷಿಯಲ್ಲಿರುವ 'ಗ್ರೇಟ್ ವಾಲ್' ಖ್ಯಾತಿಯ ಭಾರತದ ಮಾಜಿ ಕ್ರಿಕೆಟರ್, ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗೆ ಟೀಮ್ ಇಂಡಿಯಾ ವಿಶೇಷ ಉಡುಗೊರೆ ನೀಡಿದೆ. ಭಾರತ vs ಆಸ್ಟ್ರೇಲಿಯಾ 3ನೇ ಟೆಸ್ಟ್ ಪಂದ್ಯದಲ್ಲಿ ಸೋಲಿನಂಚಿಗೆ ಹೋಗಿದ್ದ ಫಲಿತಾಂಶವನ್ನು ಭಾರತ 'ಡ್ರಾ'ದೆಡೆಗೆ ತಿರುಗಿಸಿಕೊಂಡಿದೆ.
ಜನವರಿ 11ಕ್ಕೆ ರಾಹುಲ್ ದ್ರಾವಿಡ್ 48ನೇ ವರ್ಷಕ್ಕೆ ಕಾಲಿರಿಸುತ್ತಿದ್ದಾರೆ. ಇದೇ ದಿನ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಮುಕ್ತಾಯಗೊಂಡ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ದ್ರಾದೊಂದಿಗೆ ಕೊನೆಗೊಂಡಿದೆ. ಅಸಲಿಗೆ ಈ ಪಂದ್ಯದಲ್ಲಿ ಭಾರತ ತಂಡ ಸೋಲುವುದರಲ್ಲಿತ್ತು. ಆದರೆ ಅದೃಷ್ಟವಶಾತ್, ದ್ರಾವಿಡ್ ಹುಟ್ಟುಹಬ್ಬದ ಈ ದಿನ ಟೀಮ್ ಇಂಡಿಯಾ ಸೋಲಿನ ಮುಖಭಂಗ ಅನುಭವಿಸಲಿಲ್ಲ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಟಿಮ್ ಪೈನ್ ಪಡೆ, ಮೊದಲ ಇನ್ನಿಂಗ್ಸ್‌ನಲ್ಲಿ 105.4 ಓವರ್‌ಗೆ 338 ರನ್ ಪೇರಿಸಿತ್ತು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 100.4 ಓವರ್‌ಗೆ 244 ರನ್ ಪೇರಿಸಿ 94 ರನ್ ಹಿನ್ನಡೆ ಅನುಭವಿಸಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸೀಸ್ 87 ಓವರ್‌ಗೆ 6 ವಿಕೆಟ್ ಕಳೆದು 312 ರನ್ ಗಳಿಸಿ ಡಿಕ್ಲೇರ್ ಘೋಷಿಸಿದರೆ, ಭಾರತ 131 ಓವರ್‌ಗೆ ಭಾರತ 5 ವಿಕೆಟ್ ಕಳೆದು 334 ರನ್ ಬಾರಿಸಿ ಪಂದ್ಯ ಡ್ರಾ ಮಾಡಿಕೊಂಡಿದೆ.
1973ರ ಜನವರಿ 11ರಂದು ಜನಿಸಿರುವ ದ್ರಾವಿಡ್ ಅವರ ಹುಟ್ಟು ಹಬ್ಬದ ದಿನವೇ ಸೋಲುವ ಪಂದ್ಯವನ್ನು ಡ್ರಾ ಮಾಡಿಕೊಂಡಿರುವ ಭಾರತದ ಸಾಧನೆಗೆ ಮೆಚ್ಚಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಟ್ವೀಟ್ ಮಾಡಿದೆ. ಟೆಸ್ಟ್ ಸಾರ್ವಕಾಲಿಕ ಬೆಸ್ಟ್ ಬ್ಯಾಟ್ಸ್‌ಮನ್ ಎನಿಸಿರುವ ದ್ರಾವಿಡ್‌ಗೆ ಹುಟ್ಟು ಹಬ್ಬದ ಶುಭಾಶಯ ಕೋರಿ ಬಂದಿರುವ ಅನೇಕ ಟ್ವೀಟ್‌ಗಳಲ್ಲಿ ಐಸಿಸಿ ಮಾಡಿರುವ ಈ ಟ್ವೀಟ್ ತುಂಬಾ ವಿಶೇಷವೆನಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications