ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಪಂತ್ ಶತಕ, ಧೋನಿ ದಾಖಲೆ ಧೂಳೀಪಟ!

ಧೋನಿ ದಾಖಲೆ ಧೂಳೀಪಟ! | Oneindia Kannada
Australia vs India: Rishabh Pant brings up his second Test century

ಸಿಡ್ನಿ, ಜನವರಿ 4: ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಭಾರತ vs ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್ ನಲ್ಲಿ ಭಾರತದ ಯುವ ಆಟಗಾರ ರಿಷಬ್ ಪಂತ್ ಶತಕ ಬಾರಿಸಿದ್ದಾರೆ. ಇದರೊಂದಿಗೆ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್‌ ಧೋನಿ ಅವರ ದಾಖಲೆಯೊಂದನ್ನೂ ಸರಿಗಟ್ಟಿದ್ದಾರೆ.

ಸಿಡ್ನಿ ಟೆಸ್ಟ್: ಪೂಜಾರ-ಪಂತ್-ಜಡೇಜಾ ಅಬ್ಬರ, 622ಕ್ಕೆ ಭಾರತ ಡಿಕ್ಲೇರ್ಸಿಡ್ನಿ ಟೆಸ್ಟ್: ಪೂಜಾರ-ಪಂತ್-ಜಡೇಜಾ ಅಬ್ಬರ, 622ಕ್ಕೆ ಭಾರತ ಡಿಕ್ಲೇರ್

ಶುಕ್ರವಾರ (ಜನವರಿ 4) ಇತ್ತಂಡಗಳ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಪಂತ್, ಆಕರ್ಷಕ 159 ರನ್ ಬಾರಿಸಿದರು. ಪಂತ್ ಈ ಸಾಧನೆ, ಭಾರತದ ವಿಕೆಟ್ ಕೀಪರ ಆಗಿದ್ದು, ವಿದೇಶಿ ನೆಲದಲ್ಲಿ ನಡೆದ ಟೆಸ್ಟ್ ನಲ್ಲಿ ಅತ್ಯಧಿಕ ರನ್ ಗಳಿಸಿದ ಧೋನಿಯ 12 ವರ್ಷಗಳ ಹಿಂದಿನ ದಾಖಲೆಯನ್ನು ಮೀರಿಸಿದೆ.

2006ರಲ್ಲಿ ಪಾಕಿಸ್ತಾನದ ಫೈಸಲಾಬಾದ್‌ನಲ್ಲಿ ನಡೆದಿದ್ದ ಆತಿಥೇಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೂಲ್ ಕ್ಯಾಪ್ಟನ್ ಖ್ಯಾತಿಯ ಧೋನಿ 148 ರನ್ ಬಾರಿಸಿದ್ದರು. ಪಂತ್ ಅವರು ಧೋನಿ ಸಾಧನೆ ಮೀರಿಸಿದ್ದಷ್ಟೇ ಅಲ್ಲ, ಟೆಸ್ಟ್ ಕ್ರಿಕೆಟ್ ನಲ್ಲಿ ವೇಗದ ರನ್‌ಗೂ ಗಮನ ಸೆಳೆದರು. ಜನವರಿ 4ರ ಪಂದ್ಯದಲ್ಲಿ 159 ರನ್ ಗಳಿಸಲು ಪಂತ್ ಬಳಸಿದ್ದು 189 ಎಸೆತಗಳನ್ನು ಮಾತ್ರ!

ನಿಂಗಿನ್ನೂ ಬೋರ್‌ ಅನ್ಸಿಲ್ವಾ?: ಸುಸ್ತಾದ ಲಿಯಾನ್, ಪೂಜಾರಗೆ ಪ್ರಶ್ನೆ!ನಿಂಗಿನ್ನೂ ಬೋರ್‌ ಅನ್ಸಿಲ್ವಾ?: ಸುಸ್ತಾದ ಲಿಯಾನ್, ಪೂಜಾರಗೆ ಪ್ರಶ್ನೆ!

ಚೇತೇಶ್ವರ ಪೂಜಾರ 193, ಮಯಾಂಕ್ ಅಗರ್ವಾಲ್ 77, ಹನುಮ ವಿಹಾರಿ 42, ರವೀಂದ್ರ ಜಡೇಜಾ 81 ರನ್ ಕೊಡುಗೆಯೊಂದಿಗೆ ಭಾರತ 167.2 ಓವರ್‌ ಮುಕ್ತಾಯಕ್ಕೆ 7 ವಿಕೆಟ್ ಕಳೆದು 622 ರನ್ ಗಳಿಸಿ, ಡಿಕ್ಲೇರ್ ಘೋಷಿಸಿದೆ. ಶುಕ್ರವಾರ ದಿನದಾಟದ ಅಂತ್ಯಕ್ಕೆ ಆಸೀಸ್ ಮೊದಲ ಇನ್ನಿಂಗ್ಸ್‌ಗೆ ಇಳಿದಿತ್ತು.

Story first published: Friday, January 4, 2019, 13:13 [IST]
Other articles published on Jan 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X