ಫಿಟ್‌ನೆಸ್ ಟೆಸ್ಟ್‌ನಲ್ಲಿ 'ಹಿಟ್‌ಮ್ಯಾನ್' ಪಾಸ್, ಶೀಘ್ರ ಆಸ್ಟ್ರೇಲಿಯಾಕ್ಕೆ

ಬೆಂಗಳೂರು: ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಶೀಘ್ರ ಆಸ್ಟ್ರೇಲಿಯಾಕ್ಕೆ ಹಾರಲಿದ್ದಾರೆ. ಗಾಯಕ್ಕೀಡಾಗಿದ್ದ ರೋಹಿತ್ ಈಗ ಸಂಪೂರ್ಣ ಚೇತರಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಬಹು ನಿರೀಕ್ಷಿತ ಟೆಸ್ಟ್ ಸರಣಿಯಲ್ಲಿ ರೋಹಿತ್ ಬ್ಯಾಟ್ ಬೀಸಲಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ (ಹ್ಯಾಮ್‌ಸ್ಟ್ರಿಂಗ್) ಗಾಯಕ್ಕೀಡಾಗಿದ್ದರು. ಹೀಗಾಗಿ ಶರ್ಮಾ ಐಪಿಎಲ್ ಮುಕ್ತಾಯದ ಬಳಿಕ ಆಸ್ಟ್ರೇಲಿಯಾ ಪ್ರವಾಸ ಸರಣಿಗಾಗಿ ತೆರಳದೆ ಚೇತರಿಕೆಗಾಗಿ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಗೆ ಬಂದಿದ್ದರು.
ಡಿಸೆಂಬರ್ 11ರಂದು ರೋಹಿತ್‌ಗೆ ಎನ್‌ಸಿಎಯಲ್ಲಿ ಫಿಟ್‌ನೆಸ್ ಪರೀಕ್ಷೆ ನಡೆದಿದೆ. ಇಲ್ಲಿ ಎಲ್ಲಾ ಪರೀಕ್ಷೆಗಳನ್ನು ಪಾಸ್ ಮಾಡಿರುವ 'ಹಿಟ್‌ಮ್ಯಾನ್' ಶರ್ಮಾಗೆ ಆಸ್ಟ್ರೇಲಿಯಾಕ್ಕೆ ತೆರಳಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಇಂಡಿಯಾ ಟು ಡೇ ವರದಿಯ ಪ್ರಕಾರ ಡಿಸೆಂಬರ್ 14ರ ಸೋಮವಾರ ರೋಹಿತ್ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸ ಸರಣಿಗಳಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2-1ರ ಹಿನ್ನಡೆ ಅನುಭವಿಸಿತ್ತು. ಟಿ20ಐನಲ್ಲಿ 2-1ರ ಜಯ ಗಳಿಸಿತ್ತು. ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಲ್ಲಿ ಆಡಿದ ಬಳಿಕ ವಿರಾಟ್ ಕೊಹ್ಲಿ ರಜೆ ಪಡೆದುಕೊಳ್ಳಲಿದ್ದಾರೆ. ಆದರೆ ರೋಹಿತ್ ಟೆಸ್ಟ್‌ನ ಕೊನೇ ಎರಡು ಪಂದ್ಯಗಳಲ್ಲಿ ಆಡಲಿರುವುದರಿಂದ ತಂಡಕ್ಕೆ ಕೊಂಚ ಬಲ ಬಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications