
ಸಿಡ್ನಿ: ಭಾರತ ವಿರುದ್ಧದ ಮೊದಲನೇ ಟೆಸ್ಟ್‌ಗೂ ಮುನ್ನ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ನಿರಾಳವಾಗಿದೆ. ಯಾಕೆಂದರೆ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಬುಧವಾರ (ಡಿಸೆಂಬರ್ 12) ನೆಟ್ ಅಭ್ಯಾಸ ನಡೆಸಿದ್ದಾರೆ. ಹೀಗಾಗಿ ಭಾರತ-ಆಸ್ಟ್ರೇಲಿಯಾ ನಡುವಿನ ಐತಿಹಾಸಿಕ ಚೊಚ್ಚಲ ಡೇ-ನೈಟ್ ಟೆಸ್ಟ್‌ನಲ್ಲಿ ಸ್ಮಿತ್ ಆಡುತ್ತಾರೋ ಇಲ್ಲವೋ ಎಂಬ ಅನುಮಾನ ದೂರವಾದಂತಾಗಿದೆ.
ಅಭ್ಯಾಸದ ವೇಳೆ ಸ್ಮಿತ್ ಗಾಯ ಮಾಡಿಕೊಂಡಿಕೊಂಡು ಮೈದಾನದಿಂದ ಹೊರ ನಡೆಸಿದ್ದರು. ಅಭ್ಯಾಸದ ವೇಳೆ ಸ್ಮಿತ್‌ಗೆ ಬೆನ್ನು ನೋವು ಕಾಡಿತ್ತು. ಮಂಗಳವಾರದ ಅಭ್ಯಾಸದಲ್ಲಿ ಸ್ಮಿತ್ ಪಾಲ್ಗೊಂಡಿರಲಿಲ್ಲ. ಹೀಗಾಗಿ ಆರಂಭಿಕ ಪಂದ್ಯದಲ್ಲಿ ಸ್ಮಿತ್ ಆಡುತ್ತಾರೋ ಇಲ್ಲವೋ ಎಂಬ ಅನುಮಾನ ಎದುರಾಗಿತ್ತು.
ಆದರೆ ಸ್ಮಿತ್‌ಗಾಗಿರುವ ಗಾಯ ದೊಡ್ಡದೇನಲ್ಲ. ಒಂದು ದಿನದ ವಿಶ್ರಾಂತಿಯ ಬಳಿಕ ಸ್ಮಿತ್ ಸರಿ ಹೋಗಿದ್ದಾರೆ. ಸ್ಮಿತ್ ಈಗ ಲವಲವಿಕೆಯಲ್ಲಿರುವಂತೆ ಕಾಣುತ್ತಿದ್ದಾರೆ ಎಂದು ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಟಿಮ್ ಪೈನ್ ಹೇಳಿದ್ದಾರೆ. ಆರಂಭಿಕ ಟೆಸ್ಟ್‌ನಲ್ಲಿ ಮತ್ತೊಬ್ಬ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಆಡೋದು ಖತರಿಗೊಂಡಿಲ್ಲ.
ಸುದ್ದಿಗಾರರ ಜೊತೆಗೆ ಮಾತನಾಡಿದ ಟಿಮ್ ಪೈನ್, 'ಮೊದಲ ಪಂದ್ಯದಲ್ಲಿ ಸ್ಮಿತ್ ಇರುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಅವರಿಗೆ ಹಿಂದೆಯೂ ಹಲವಾರು ಬಾರಿ ಬೆನ್ನುನೋವು ಕಾಣಸಿಕೊಂಡಿತ್ತು. ನೆಟ್‌ನಲ್ಲಿ ಬ್ಯಾಟಿಂಗ್ ಮಾಡುವಷ್ಟು ನೀವು ಬ್ಯಾಟಿಂಗ್ ಮಾಡಿದರೆ ಆ ನೋವು ಬರುತ್ತದೆ,' ಎಂದು ಹೇಳಿದ್ದಾರೆ.