
ಸಿಡ್ನಿ: ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು 2-1ರಿಂದ ಗೆದ್ದುಕೊಂಡಿದೆ. ಮಂಗಳವಾರ (ಡಿಸೆಂಬರ್ 8) ನಡೆದ ಭಾರತ-ಆಸ್ಟ್ರೇಲಿಯಾ ಮೂರನೇ ಟಿ20ಐ ಪಂದ್ಯದಲ್ಲಿ ಆಸ್ಟ್ರೇಲಿಯಾ 12 ರನ್‌ಗಳ ರೋಚಕ ಜಯ ಗಳಿಸುವುದರೊಂದಿಗೆ ಸರಣಿ ಮುಕ್ತಾಯಗೊಂಡಿದೆ.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ 2-1ರ ಜಯ ಗಳಿಸಿತ್ತು. ಈಗ ಟಿ20ಐ ಸರಣಿ ಭಾರತದ ವಶವಾಗಿದೆ. ಮೂರನೇ ಪಂದ್ಯದ ಮುಕ್ತಾಯದ ಬಳಿಕ ಭಾರತದ ನಾಯಕ ವಿರಾಟ್ ಕೊಹ್ಲಿ ಅವರು ವಿಶೇಷ ನಡೆಗಾಗಿ ಗಮನ ಸೆಳೆದಿದ್ದಾರೆ.
ಪ್ರಶಸ್ತಿ ವಿತರಣಾ ಸಮಾರಂಭದ ವೇಳೆ ಗ್ರೂಫ್ ಫೋಟೋ ತೆಗೆಯುವಾಗ ಸರಣಿ ವಿಜಯದ ಟ್ರೋಫಿ ಭಾರತದ ವೇಗಿ ಟಿ ನಟರಾಜನ್ ಕೈಯಲ್ಲಿತ್ತು. ಈ ಚಿತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಟಿ20ಐ ಸರಣಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ ನಟರಾಜನ್ ಕೈಗೆ ಟ್ರೋಫಿ ಕೊಟ್ಟಿದ್ದಕ್ಕಾಗಿ ನೆಟ್ಟಿಗರು ಕೊಹ್ಲಿಯನ್ನು ಶ್ಲಾಘಿಸಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದ ವೇಳೆ ನೆಟ್ ಬೌಲರ್ ಆಗಿ ತಂಡದ ಜೊತೆಗೆ ಬಂದಿದ್ದ ವೇಗಿ, ಯಾರ್ಕರ್ ಸ್ಪೆಷಾಲಿಸ್ಟ್ ಟಿ ನಟರಾಜನ್, ಏಕದಿನ ಸರಣಿಯ ಕೊನೇ ಪಂದ್ಯದಲ್ಲಿ ಪಾದಾರ್ಪಣೆ ಮಾಡಿ 2 ವಿಕೆಟ್ ತೆಗೆದಿದ್ದರು. ಟಿ20ಐ ಸರಣಿಯಲ್ಲೂ 3+2+1 ವಿಕೆಟ್ ಪಡೆದಿದ್ದರು. ಹೀಗಾಗಿ ನಟರಾಜನ್ ಕೈಲಿ ಕೊಹ್ಲಿ ಟ್ರೋಫಿ ನೀಡಿದ್ದಾರೆ.