ಭಾರತದ ಗೆಲುವಿಗೆ ಪ್ರತಿಕ್ರಿಯಿಸಿ ನೆಟ್ಟಿಗನಿಂದ ಕಾಲೆಳೆಸಿಕೊಂಡ ಕೊಹ್ಲಿ!

ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಟೆಸ್ಟ್‌ನಲ್ಲಿ 8 ವಿಕೆಟ್ ಹೀನಾಯ ಸೋಲನುಭವಿಸಿದ್ದ ಟೀಮ್ ಇಂಡಿಯಾ ದ್ವಿತೀಯ ಟೆಸ್ಟ್‌ನಲ್ಲಿ ಮುಯ್ಯಿ ತೀರಿಸಿಕೊಂಡಿದೆ. ದ್ವಿತೀಯ ಟೆಸ್ಟ್ ವೇಳೆ ಅಜಿಂಕ್ಯ ರಹಾನೆ ನಾಯಕತ್ವದಲ್ಲಿದ್ದ ಭಾರತ ತಂಡ, ಆತಿಥೇಯ ಆಸ್ಟ್ರೇಲಿಯಾ ವಿರುದ್ಧ 8 ವಿಕೆಟ್ ಭರ್ಜರಿ ಜಯ ಗಳಿಸಿದೆ. ಈ ಪಂದ್ಯದ ಗೆಲುವಿನೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-1ರ ಸಮಬಲ ಸಾಧಿಸಿದೆ.
ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಮಂಗಳವಾರ (ಡಿಸೆಂಬರ್ 29) ಮುಕ್ತಾಯಗೊಂಡ ಭಾರತ-ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಬಳಿಕ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ನಾಯಕತ್ವದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಶುರುವಾಗಿದೆ.
ದ್ವಿತೀಯ ಟೆಸ್ಟ್‌ನಲ್ಲಿ ಗೆದ್ದ ಭಾರತ ತಂಡಕ್ಕೆ ಅಭಿನಂದಿಸಿದ ನಾಯಕ ವಿರಾಟ್ ಕೊಹ್ಲಿ, ನೆಟ್ಟಿಗನಿಂದ ಕಾಳೆಸಿಕೊಂಡು ಪೇಚಿಗೆ ಸಿಲುಕಿದ ಸಂಗತಿಯೂ ನಡೆದಿದೆ.

ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ಭಾರತಕ್ಕೆ ಸೋಲು
ಆಸ್ಟ್ರೇಲಿಯಾ ವಿರುದ್ಧ ಆರಂಭಿಕ ಟೆಸ್ಟ್ ವೇಳೆ ಭಾರತದ ನಾಯಕತ್ವ ವಿರಾಟ್ ಕೊಹ್ಲಿ ವಹಿಸಿಕೊಂಡಿದ್ದರು. ಆ ಪಂದ್ಯದಲ್ಲಿ ಭಾರತ ತಂಡ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್‌ಗೆ ಆಲ್ ಔಟ್ ಆಗಿ ಕೆಟ್ಟ ದಾಖಲೆ ನಿರ್ಮಿಸಿತ್ತಲ್ಲದೆ 8 ವಿಕೆಟ್‌ನಿಂದ ಪಂದ್ಯ ಸೋತಿತ್ತು. ಆರಂಭಿಕ ಪಂದ್ಯದ ಬಳಿಕ ಪಿತೃತ್ವ ರಜೆ ಪಡೆದುಕೊಂಡ ಕೊಹ್ಲಿ ಸದ್ಯ ಭಾರತದಲ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆಗಿದ್ದಾರೆ. ಜನವರಿಯಲ್ಲಿ ಅನುಷ್ಕಾ ಅವರು ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಿದೆ.

ಗೆಲುವಿಗೆ ಪ್ರತಿಕ್ರಿಯಿಸಿದ ಕೊಹ್ಲಿ
ದ್ವಿತೀಯ ಟೆಸ್ಟ್‌ನಲ್ಲಿ ಭಾರತದ ಗೆಲುವಿಗೆ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ಕೊಂಚ ವಿಚಿತ್ರವಾಗಿದೆ. 'ಎಂಥಾ ಗೆಲುವಿದು. ಖಂಡಿತವಾಗಿಯೂ ಇಡೀ ತಂಡದ ಅದ್ಭುತ ಪ್ರಯತ್ನವಿದು. ಬಹುಶಃ ಭಾರತದ ಆಟಗಾರರಿಗೆ ವಿಶೇಷವಾಗಿ ತಂಡದ ಮುಂದಾಳತ್ವ ವಹಿಸಿ ಅದ್ಭುತ ಗೆಲುವಿನೆಡೆಗೆ ಕೊಂಡೊಯ್ದ ಅಜಿಂಕ್ಯ ರಹಾನೆಗೆ ಇದು ಸಂತಸ ನೀಡಿರಲಿಕ್ಕಿಲ್ಲ. ಇನ್ಮುಂದೆ ತಂಡ ಮೇಲ್ಮುಖವಾಗಿ ಚಲಿಸಲಿದೆ,' ಎಂದು ಬರೆದುಕೊಂಡಿದ್ದರು. ಇಲ್ಲಿ ಕೊಹ್ಲಿ, ಈ ಗೆಲುವು ಆಟಗಾರರಿಗೆ ಖುಷಿ ನೀಡಿರಲಿಕ್ಕಿಲ್ಲ ಎಂದು ಯಾಕೆ ಬರೆದರೋ ಅನ್ನೋದು ಅಚ್ಚರಿ. ಬಹುಶಃ ತಮಾಷೆಗಿರಬಹುದು ಅಂದುಕೊಳ್ಳೋಣ.

ಪಂದ್ಯದ ಸಂಕ್ಷಿಪ್ತ ಸಾರಾಂಶ
* ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 72.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 195 ರನ್ ಬಾರಿಸಿತ್ತು.
* ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 115.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 326 ರನ್ ಗಳಿಸಿ 131 ರನ್ ಮುನ್ನಡೆ ಸಾಧಿಸಿತ್ತು.
* ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 103.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 200 ರನ್ ಬಾರಿಸಿತ್ತು.
* ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತದ ಗೆಲುವಿಗೆ ಕೇವಲ 70 ರನ್ ಬೇಕಿತ್ತು. ರಹಾನೆ ಪಡೆ 15.5 ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 70 ರನ್ ಬಾರಿಸಿತು.

ವಿರಾಟ್ ಕಾಲೆಳೆದ ನೆಟ್ಟಿಗ
ಭಾರತದ ಗೆಲುವಿಗೆ ಪ್ರತಿಕ್ರಿಯಿಸಿರುವ ಕೊಹ್ಲಿಗೆ ನೆಟ್ಟಿಗರೊಬ್ಬರು ಕಾಲೆಳೆದಿದ್ದಾರೆ. 'ಕೊಹ್ಲಿಯಿದ್ದು ಭಾರತ 36 ರನ್‌ಗೆ ಆಲ್ ಔಟ್ ಆಗಿದೆ. ಕೊಹ್ಲಿಯಿಲ್ಲದೆ ಭಾರತ ಸುಲಭವಾಗಿ ಗೆದ್ದಿದೆ. ಕೊಹ್ಲಿ ನೀವು ದಯವಿಟ್ಟು ನಿಮ್ಮ ಮಗುವಿನ ಬಗ್ಗೆ ಕಾಳಜಿವಹಿಸಿ. ಅಜಿಂಕ್ಯ ರಹಾನೆ ಅವರು ಭಾರತ ತಂಡದ ಬಗ್ಗೆ ಕಾಳಜಿವಹಿಸುತ್ತಾರೆ' ಎಂದು ಐ ಆ್ಯಮ್ ವಿಕೆ ಎಂಬವರು ಬರೆದುಕೊಂಡಿದ್ದಾರೆ. ಅಂದ್ಹಾಗೆ ದ್ವಿತೀಯ ಟೆಸ್ಟ್‌ನಲ್ಲಿ ರಹಾನೆ ತಂಡಕ್ಕೆ ಶತಕದ ಕೊಡುಗೆ ನೀಡಿದ್ದರು. 3ನೇ ಟೆಸ್ಟ್ ಪಂದ್ಯ ಜನವರಿ 7ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications