ಆಸ್ಟ್ರೇಲಿಯಾ vs ನ್ಯೂಜಿಲೆಂಡ್: 3ನೇ ಏಕದಿನ, ಟಾಸ್ ರಿಪೋರ್ಟ್, ಪ್ಲೇಯಿಂಗ್ XI ಹಾಗೂ Live ಸ್ಕೋರ್

ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಮುಖಾಮುಖಿಯಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಅಂತಮ ಪಂದ್ಯ ಪಂದ್ಯ ಕೈರ್ನ್ಸ್‌ನಲ್ಲಿ ಆರಂಭವಾಗಿದ್ದು ಟಾಸ್ ಗೆದ್ದಿರುವ ಪ್ರವಾಸಿ ನ್ಯೂಜಿಲೆಂಡ್ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಆರೋನ್ ಫಿಂಚ್ ನೇತೃತ್ವದ ಆಸಿಸ್ ಪಡೆ ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದೆ.
ಈ ಸರಣಿಯ ಮೊದಲ ಎರಡು ಪಂದ್ಯದಲ್ಲಿಯೂ ಆಸ್ಟ್ರೇಲಿಯಾ ತಂಡ ಅಮೋಘ ಗೆಲುವು ಸಾಧಿಸಿದ್ದು ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಆರಂಭಿಕ ಆಘಾತದಿಂದಾಗಿ ಸೋಲಿನ ಸುಳಿಗೆ ಸಿಲುಕಿದ್ದರೂ ಅಲೆಕ್ಸ್ ಕ್ಯಾರಿ ಹಾಗೂ ಕ್ಯಾಮರೂನ್ ಗ್ರೀನ್ ಪ್ರದರ್ಶನದಿಂದಾಗಿ ರೋಚಕ ಗೆಲುವು ಸಾಧಿಸಿತ್ತು. ನಂತರ ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗ ಹಿನ್ನಡೆ ಅನುಭವಿಸಿದರೂ ಸ್ಪಿನ್ನರ್ ಆಡಂ ಜಂಪಾ ಅವರ ಅದ್ಭುತ ಪ್ರದರ್ಶನದ ಕಾರಣದಿಂದಾಗಿ ಕಿವೀಸ್ ಪಡೆ ಅಲ್ಪ ಮೊತ್ತಕ್ಕೆ ಕುಸಿಯಿತು. ಈ ಮೂಲಕ ಆಸ್ಟ್ರೇಲಿಯಾ ಸತತ ಎರಡನೇ ಗೆಲುವು ಸಾಧಿಸಿ ಸರಣಿ ವಶಕ್ಕೆ ಪಡೆದುಕೊಂಡಿದೆ.
Live ಸ್ಕೋರ್‌ಕಾರ್ಡ್ ಹೀಗಿದೆ

ವೈಟ್‌ವಾಶ್ ಮೇಲೆ ಆಸಿಸ್ ಪಡೆ ಕಣ್ಣು
ಮೊದಲ ಎರಡು ಪಂದ್ಯದಲ್ಲಿಯೂ ಗೆಲುವು ಸಾಧಿಸಿರುವ ಆತಿಥೇಯ ಆಸ್ಟ್ರೇಲಿಯಾ ತಂಡ ಈ ಏಕದಿನ ಸರಣಿಯಲ್ಲಿ ಮತ್ತೊಂದು ಭರ್ಜರಿ ಪ್ರದರ್ಶನ ನೀಡುವ ಮೂಲಕ ಸರಣಿಯನ್ನು ವೈಟ್‌ವಾಶ್ ಮೂಲಕ ವಶಕ್ಕೆ ಪಡೆಯುವ ಉತ್ಸಾಹದಲ್ಲಿದೆ. ಮತ್ತೊಂದೆಡೆ ಕಿವಿಸ್ ಪಡೆ ವೈಟ್‌ವಾಶ್ ಅವಮಾನದಿಂದ ತಪ್ಪಿಸಿಕೊಳ್ಳಲು ಈ ಪಂದ್ಯದಲ್ಲಿ ಸರ್ವ ಪ್ರಯತ್ನ ನಡೆಸಲಿದ್ದು ಪ್ರದರ್ಶನ ಯಾವ ರೀತಿ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

ಆರೋನ್ ಫಿಂಚ್‌ಗೆ ಅಂತಿಮ ಏಕದಿನ ಪಂದ್ಯ
ಇನ್ನು ಆಸ್ಟ್ರೇಲಿಯಾದ ವೈಟ್‌ಬಾಲ್ ತಂಡದ ನಾಯಕ ಆರೋನ್ ಫಿಂಚ್ ಶನಿವಾರ ಏಕದಿನ ಮಾದರಿಗೆ ನಿವೃತ್ತಿ ಘೋಷಣೆ ಮಾಡಿದ್ದರು. ಹೀಗಾಗಿ ಇಂದು ನಡೆಯುತ್ತಿರುವ ಪಂದ್ಯ ಫಿಂಚ್ ಪಾಲಿಗೆ ಅಂತಿಮ ಏಕದಿನ ಪಂದ್ಯವಾಗಿರಲಿದೆ. ಆದರೆ ಚುಟುಕು ಮಾದರಿಯಲ್ಲಿ ಮುಂದುವರಿಯುವುದಾಗಿ ಫಿಚ್ ಹೇಳಿಕೊಂಡಿದ್ದಾರೆ. ಹೀಗಾಗಿ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಆರೋನ್ ಫಿಂಚ್ ನೇತೃತ್ವದಲಲ್ಇಯೇ ಆಸಿಸ್ ಪಡೆ ಕಣಕ್ಕಿಳಿಯಲಿದೆ.

ಆಸ್ಟ್ರೇಲಿಯಾ ಆಡುವ ಬಳಗ
ಆರೋನ್ ಫಿಂಚ್ (ನಾಯಕ), ಜೋಶ್ ಇಂಗ್ಲಿಸ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಶೈನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ಸೀನ್ ಅಬಾಟ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್
ಬೆಂಚ್: ಡೇವಿಡ್ ವಾರ್ನರ್, ಮಾರ್ಕಸ್ ಸ್ಟೋನಿಸ್, ಆಷ್ಟನ್ ಅಗರ್

ನ್ಯೂಜಿಲೆಂಡ್ ಆಡುವ ಬಳಗ
ಡೆವೊನ್ ಕಾನ್ವೇ, ಫಿನ್ ಅಲೆನ್, ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್
ಬೆಂಚ್: ಮಾರ್ಟಿನ್ ಗಪ್ಟಿಲ್, ಮೈಕೆಲ್ ಬ್ರೇಸ್ವೆಲ್, ಮ್ಯಾಟ್ ಹೆನ್ರಿ, ಬೆನ್ ಸಿಯರ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications