Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

AUS vs SA: ಸೆಮಿಫೈನಲ್‌ಗಾಗಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಫೈಟ್‌

ಚಾಂಪಿಯನ್ಸ್ ಟ್ರೋಫಿಯ ಹೀಟ್ ಆರಂಭವಾಗಿದೆ. ಬಲಿಷ್ಠ ತಂಡಗಳ ನಡುವಿನ ಕಾಳಗವನ್ನು ಕಣ್ಣು ತುಂಬಿಕೊಳ್ಳಲು ಜಯ ಸಹ ಕಾಯುತ್ತಿದ್ದಾರೆ. ಮಂಗಳವಾರ ಟೂರ್ನಿಯ "ಬಿ" ಗುಂಪಿನ ಪಂದ್ಯ ರಾವಲ್ಪಿಂಡಿಯಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಕಾದಾಟ ನಡೆಸಲಿವೆ. ಉಭಯ ತಂಡಗಳು ಬಲಿಷ್ಠವಾಗಿವೆ. ಈ ಮದಗಜಗಳ ಕಾದಾಟವನ್ನು ನೋಡಲು ಇಡೀ ವಿಶ್ವ ಕ್ರಿಕೆಟ್‌ ಕಾದು ಕುಳಿತಿದೆ.

ದಕ್ಷಿಣ ಆಫ್ರಿಕಾ 107 ರನ್‌ಗಳ ಭರ್ಜರಿ ಜಯವನ್ನು ಅಫ್ಘಾನಿಸ್ತಾನ ವಿರುದ್ಧ ದಾಖಲಿಸಿದರೆ, ಇಂಗ್ಲೆಂಡ್‌ ವಿರುದ್ಧ ರೆಕಾರ್ಡ್‌ ರನ್‌ ಚೇಸ್‌ ಮಾಡಿರುವ ಆಸ್ಟ್ರೇಲಿಯಾ ಆತ್ಮ ವಿಶ್ವಾಸದಲ್ಲಿದೆ. ಉಭಯ ತಂಡಗಳು ತಲಾ 2 ಅಂಕವನ್ನು ಹೊಂದಿವೆ. ಆದರೆ ದಕ್ಷಿಣ ಆಫ್ರಿಕಾ ರನ್‌ ರೇಟ್ ಅಮೊಘವಾಗಿದ್ದರಿಂದ, ಮೊದಲ ಸ್ಥಾನದಲ್ಲಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಉಭಯ ತಂಡಗಳು ಬಲಾಢ್ಯವಾಗಿದೆ. ಉಭಯ ದೇಶಗಳು ಈಗಾಗಲೇ 110 ಪಂದ್ಯಗಳನ್ನು ಆಡಿದ್ದು, ದಕ್ಷಿಣ ಆಫ್ರಿಕಾ 55 ಪಂದ್ಯ ಗೆದ್ದಿದ್ದು, 51 ಪಂದ್ಯಗಳಲ್ಲಿ ಆಸೀಸ್‌ ಜಯ ಸಾಧಿಸಿದೆ.

Australia vs South Africa Intense Battle for Champions Trophy Semi-Final Spot

ಬಲಿಷ್ಠ ತಂಡ

ಆಸ್ಟ್ರೇಲಿಯಾ ತಂಡ ಐಸಿಸಿ ಈವೇಂಟ್‌ಗಳಲ್ಲಿ ತನ್ನ ಬಲಿಷ್ಠ ತಂಡವನ್ನೇ ಕಳಿಸುತ್ತದೆ. ಈ ಬಾರಿಯೂ ತಂಡ ತನ್ನ ಉತ್ತಮ ತಂಡವನ್ನೇ ಕಳಿಸಿದೆ. ಆರಂಭಿಕರಾದ ಮ್ಯಾಥ್ಯೂ ಶಾರ್ಟ್‌, ಟ್ರಾವಿಸ್‌ ಹೆಡ್‌ ಯಾವ ರೀತಿಯ ಬ್ಯಾಟಿಂಗ್ ಮಾಡಬಲ್ಲರು ಎಂಬುದು ಎಲ್ಲರಿಗೂ ತಿಳಿದಿದೆ. ಮಿಡ್ಲ್ ಆರ್ಡರ್‌ನಲ್ಲಿ ಸ್ಟೀವ್ ಸ್ಮಿತ್, ಮಾರ್ನಸ್‌ ಲಂಬುಶೇನ್‌ ತಂಡಕ್ಕೆ ಆಧಾರ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸೋಲು ಪಂದ್ಯದಲ್ಲಿ ಗೆಲುವಿನ ದೀಪ ಬೆಳಗಿಸಿದ ಜೋಶ್‌ ಇಂಗ್ಲಿಸ್ ಮೇಲೆ ಎಲ್ಲರ ಚಿತ್ತ ನೆಟ್ಟಿರಲಿದೆ.

ಆಲ್‌ರೌಂಡರ್‌ ಗ್ಲೇನ್‌ ಮ್ಯಾಕ್ಸ್‌ವೆಲ್‌ ಯಾವುದೇ ತಂಡದ ವಿರುದ್ಧವಾದರೂ ಅಪಾಯಕಾರಿಯೇ. ಬ್ಯಾಟಿಂಗ್‌ಗೆ ಹೋಲಿಸಿದರೆ ಆಸೀಸ್ ಬೌಲಿಂಗ್ ಕೊಂಚ ವೀಕ್‌ ಇದ್ದಂತೆ ಕಾಣುತ್ತಿದೆ. ನಾಥನ್‌ ಎಲ್ಲಿಸ್‌ ತಮ್ಮ ಬಿಗುವಿನ ದಾಳಿಯಿಂದ ಮೊದಲ ಪಂದ್ಯದಲ್ಲಿ ಗಮನ ಸೆಳೆದಿದ್ದರು. ಆ ಕೆಲವನ್ನು ಮತ್ತೆ ಮಾಡಬೇಕಿದೆ. ಇನ್ನು ಉಳಿದ ಬೌಲರ್‌ಗಳು ಸರಿಯಾದ ಲೈನ್‌ನಲ್ಲಿ ಬೌಲ್‌ ಮಾಡಬೇಕಿದೆ.

Australia vs South Africa Intense Battle for Champions Trophy Semi-Final Spot


ಸಂಭಾವ್ಯ ಆಸೀಸ್ ತಂಡ: ಮ್ಯಾಥ್ಯೂ ಶಾರ್ಟ್, ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್ (ನಾಯಕ), ಮಾರ್ನಸ್ ಲ್ಯಾಬುಸ್ಚಾಗ್ನೆ, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸ್‌ವೆಲ್, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಆಡಮ್ ಜಂಪಾ, ಸ್ಪೆನ್ಸರ್ ಜಾನ್ಸನ್

ಅನುವಿಗಳೇ ಆಧಾರ

ದಕ್ಷಿಣ ಆಫ್ರಿಕಾ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದಾರೆ. ಟಾಪ್‌ ಆರ್ಡರ್‌ ಬ್ಯಾಟರ್‌ಗಳು ಉತ್ತಮ ಲಯದಲ್ಲಿದ್ದು, ಭರವಸೆಯನ್ನು ಮೂಡಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿರುವ ಆರಂಭಿಕ ರಯಾನ್ ರಿಕೆಲ್ಟನ್, ಅರ್ಧಶತಕ ಬಾರಿಸಿರುವ ತೆಂಬು ಬವುಮಾ, ಐಡೆನ್‌ ಮಾರ್ಕ್ರಮ್‌, ರಾಸ್ಸೀ ವ್ಯಾನ್ ಡೆರ್ ಡಸ್ಸೆನ್, ಈ ಆಟಗಾರರ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಇನ್ನು ಕಳೆದ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಿಂದ ದೂರ ಉಳಿದಿದ್ದ ಹ್ಯಾನ್ರಿ ಕ್ಲಾಸೇನ್ ಮತ್ತೆ ತಂಡ ಸೇರಲಿದ್ದಾರೆ. ಅಂದಾಗ ತಂಡದ ಬ್ಯಾಟಿಂಗ್‌ ವಿಭಾಗ ಮತ್ತಷ್ಟು ಬಲಿಷ್ಠವಾಗಲಿದೆ.

ದಕ್ಷಿಣ ಆಫ್ರಿಕಾದ ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ. ವಿಶ್ವ ವಿಖ್ಯಾತ ವೇಗದ ಬೌಲರ್‌ಗಳಾದ ಮಾರ್ಕ್ ಜಾನ್ಸನ್‌, ಲುಂಗಿ ಎಂಗಿಡಿ, ಕಗಿಸೊ ರಬಾಡ, ಕೇಶವ್ ಮಹರಾಜ್‌ ಆಸ್ಟ್ರೇಲಿಯಾ ಬೌಲರ್‌ಗಳನ್ನು ಕಾಡಬಲ್ಲರು.

ಸಂಭಾವ್ಯ ದಕ್ಷಿಣ ಆಫ್ರಿಕಾ ತಂಡ: ತೆಂಬಾ ಬವುಮಾ (ಕ್ಯಾಪ್ಟನ್), ರಿಯಾನ್ ರಿಕೆಲ್ಟನ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್ (ವಿಕೆಟ್‌ ಕೀಪರ್‌), ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೋ ರಬಾಡಾ

Story first published: Tuesday, February 25, 2025, 6:58 [IST]
Other articles published on Feb 25, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+