ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಅಬ್ಬರದಾಟಕೆ ತಲೆ ಬಾಗಿದ ಶ್ರೀಲಂಕಾ

ಬ್ರಿಸ್ಬೇನ್, ಅಕ್ಟೋಬರ್ 30: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಶ್ರೀಲಂಕಾ ಕ್ರಿಕೆಟ್ ತಂಡ ಬ್ರಿಸ್ಬೇನ್‌ನ ಗಬ್ಬಾದಲ್ಲಿ ಬುಧವಾರ (ಅಕ್ಟೋಬರ್ 30) ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಅತಿಥೇಯ ಆಸ್ಟ್ರೇಲಿಯಾ ವಿರುದ್ಧ 9 ವಿಕೆಟ್ ಹೀನಾಯ ಸೋಲನುಭವಿಸಿದೆ. ಇದರೊಂದಿಗೆ 3 ಪಂದ್ಯಗಳ ಟಿ20ಐ ಸರಣಿ 2-0ಯಿಂದ ಆಸೀಸ್ ವಶವಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ ತಂಡ ಈ ಪಂದ್ಯದಲ್ಲೂ ಬ್ಯಾಟಿಂಗ್ ವೈಫಲ್ಯ ತೋರಿಕೊಂಡಿತು. ದನುಷ್ಕ ಗುಣತಿಲಕ 21, ಕುಸಾಲ್ ಪೆರೆರಾ 27, ಅವಿಷ್ಕ ಫೆರ್ನಾಂಡೋ 17 ಗಮನಾರ್ಹ ರನ್ ನೆರವಿನೊಂದಿಗೆ ಲಂಕಾ 19 ಓವರ್ ಮುಕ್ತಾಯಕ್ಕೆ 10 ವಿಕೆಟ್ ನಷ್ಟದಲ್ಲಿ 117 ರನ್ ಮಾಡಿತ್ತು.
ಗುರಿ ಬೆಂಬತ್ತಿದ್ದ ಆಸೀಸ್‌ಗೆ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಅವರ ಅರ್ಧ ಶತಕದ ನೆರವು ದೊರೆಯಿತು. ವಾರ್ನರ್ 41 ಎಸೆತಕ್ಕೆ 60 ರನ್, ಸ್ಮಿತ್ 36 ಎಸೆತಕ್ಕೆ 53 ರನ್ ಸಿಡಿಸಿದರು. ಆಸೀಸ್ 13 ಓವರ್‌ಗೆ 1 ವಿಕೆಟ್ ಕಳೆದು 118 ರನ್ ಗೆರೆ ದಾಟಿತು.
ಆಸ್ಟ್ರೇಲಿಯಾ vs ಶ್ರೀಲಂಕಾ, 2ನೇ ಟಿ20 ಪಂದ್ಯ, ಸ್ಕೋರ್‌ಕಾರ್ಡ್
ಆಸ್ಟ್ರೇಲಿಯಾ ತಂಡ: ಆ್ಯರನ್ ಫಿಂಚ್ (ಸಿ), ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್ ವೆಲ್, ಆಷ್ಟನ್ ಟರ್ನರ್, ಅಲೆಕ್ಸ್ ಕ್ಯಾರಿ (ವಿಕೆ), ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಕೇನ್ ರಿಚರ್ಡ್ಸನ್, ಆದಮ್ ಜಂಪಾ, ಬಿಲ್ಲಿ ಸ್ಟ್ಯಾನ್ಲೇಕ್.
ಶ್ರೀಲಂಕಾ ತಂಡ: ದನುಷ್ಕಾ ಗುಣತಿಲಕ, ಅವಿಷ್ಕಾ ಫರ್ನಾಂಡೊ, ಕುಸಾಲ್ ಮೆಂಡಿಸ್, ಕುಸಾಲ್ ಪೆರೆರಾ (ವಿಕೆ), ನಿರೋಷನ್ ಡಿಕ್ವೆಲ್ಲಾ, ದಾಸುನ್ ಶಾನಕಾ, ವನಿಂದು ಹಸರಂಗ, ಇಸುರು ಉದಾನ, ಲಕ್ಷನ್ ಸಂದಕನ್, ಲಸಿತ್ ಮಾಲಿಂಗ (ಸಿ), ನುವಾನ್ ಪ್ರದೀಪ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications