ಆಸ್ಟ್ರೇಲಿಯಾ vs ಶ್ರೀಲಂಕಾ ಟಿ20 ಸರಣಿ, 5ನೇ ಪಂದ್ಯ: Live ಸ್ಕೋರ್, ಪ್ಲೇಯಿಂಗ್ XI

ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಶ್ರೀಲಂಕಾ ಟಿ20 ಸರಣಿಯ ಅಂತಿಮ ಪಂದ್ಯವನ್ನು ಇಂದು ಆಡುತ್ತಿದೆ. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ನಾಲ್ಕು ಪಂದ್ಯಗಳಲ್ಲಿ ಕೂಡ ಸೋಲು ಅನುಭವಿಸಿರುವ ಶ್ರೀಲಂಕಾ ತಂಡ ಅಂತಿಮ ಪಂದ್ಯದಲ್ಲಿ ಗೆದ್ದು ವೈಟ್‌ವಾಶ್ ಅವಮಾನದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದೆ. ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಇನ್ನು ಮೊದಲ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಈ ಪಂದ್ಯವನ್ನಾಡಲು ಕಣಕ್ಕಿಳಿದಿದೆ. ಇತ್ತ ಪ್ರವಾಸಿ ಶ್ರೀಲಂಕಾ ಅಂತಿಮ ಪಂದ್ಯದಲ್ಲಿ ಮೂರು ಬದಕಲಾವನೆ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಕಮಿಲ್ ಮಿಶರ ಮತ್ತು ಜನಿತ್ ಲಿಯನಗೆ ಲಂಕಾ ತಂಡದ ಪರವಾಗಿ ಪದಾರ್ಪಣಾ ಪಂದ್ಯವನ್ನಾಡುತ್ತಿದ್ದು ಪ್ರವೀಣ್ ಜಯವಿಕ್ರಮ ಕೂಡ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಪಂದ್ಯದಲ್ಲಿ ಆಡಿದ್ದ ಗುಣತಿಲಕ, ಚಾಂಡಿಮಲ್ ಹಾಗೂ ವಂಡರ್ಸೆ ಈ ಪಂದ್ಯದಲ್ಲಿ ಆಡುವ ಬಳಗದಿಂದ ಹೊರಗುಳಿದಿದ್ದಾರೆ.
Live ಸ್ಕೋರ್‌ಕಾರ್ಡ್ ಹೀಗಿದೆ:
ಆಸ್ಟ್ರೇಲಿಯಾ ಆಡುವವ ಬಳಗ: ಆರನ್ ಫಿಂಚ್ (ನಾಯಕ), ಬೆನ್ ಮೆಕ್‌ಡರ್ಮಾಟ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಡೇನಿಯಲ್ ಸ್ಯಾಮ್ಸ್, ಆಷ್ಟನ್ ಅಗರ್, ಝೈ ರಿಚರ್ಡ್‌ಸನ್, ಕೇನ್ ರಿಚರ್ಡ್‌ಸನ್, ಆಡಮ್ ಝಂಪಾ
ಬೆಂಚ್: ಮೋಸೆಸ್ ಹೆನ್ರಿಕ್ಸ್, ಜೋಶ್ ಹ್ಯಾಜಲ್ವುಡ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್, ಟ್ರಾವಿಸ್ ಹೆಡ್
ಶ್ರೀಲಂಕಾ ಆಡುವ ಬಳಗ: ಕಮಿಲ್ ಮಿಶ್ರಾ, ಪಾತುಮ್ ನಿಸ್ಸಾಂಕ, ಚರಿತ್ ಅಸಲಂಕ, ಕುಸಲ್ ಮೆಂಡಿಸ್, ಜನಿತ್ ಲಿಯಾನಗೆ (ವಿಕೆಟ್ ಕೀಪರ್), ದಸುನ್ ಶನಕ (ನಾಯಕ), ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಪ್ರವೀಣ್ ಜಯವಿಕ್ರಮ, ಮಹೇಶ್ ತೀಕ್ಷಣ, ಲಹಿರು ಕುಮಾರ
ಬೆಂಚ್: ಬಿನೂರ ಫೆರ್ನಾಂಡೊ, ನುವಾನ್ ತುಷಾರ, ಶಿರಾನ್ ಫೆರ್ನಾಂಡೊ, ಅವಿಷ್ಕಾ ಫೆರ್ನಾಂಡೊ, ರಮೇಶ್ ಮೆಂಡಿಸ್, ದನುಷ್ಕಾ ಗುಣತಿಲಕ, ದಿನೇಶ್ ಚಾಂಡಿಮಲ್, ಜೆಫ್ರಿ ವಾಂಡರ್ಸೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications