ಆರಂಭಿಕ ಎರಡು ಪಂದ್ಯಗಳಲ್ಲಿ ಸೋಲು ಕಂಡು ಭಾರೀ ಹಿನ್ನಡೆಗೆ ಒಳಗಾಗಿದ್ದ ಆಸ್ಟ್ರೇಲಿಯಾ ತಂಡ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಜಯದ ಲಯಕ್ಕೆ ಮರಳಿದೆ. ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 5 ವಿಕೆಟ್‌ಗಳ ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನಿಂದಾಗಿ ಆಸಿಸ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ನಿಟ್ಟುಸಿರುಬಿಟ್ಟಿದ್ದು ಗೆಲುವಿನ ಬಳಿಕ ಹರ್ಷ ವ್ಯಕ್ತಪಡಿಸಿದ್ದಾರೆ .
ಸತತ ಎರಡಯ ಗೆಲುವಿನ ಬಳಿಕ ಶ್ರೀಲಂಕಾ ವಿರುದ್ಧದ ಈ ಪಮದ್ಯದಲ್ಲಿಯೂ ಆಸ್ಟ್ರೇಲಿಯಾ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆದರೆ ಬೌಲಿಂಗ್ ವಿಭಾಗ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ ಕಾರಣ ಪಂದ್ಯಕ್ಕೆ ಮರಳಲು ಸಾಧ್ಯವಾಯಿತು ಎಂದಿದ್ದಾರೆ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್. ಈ ಮೂಲಕ ಈ ಗೆಲುವಿನ ಶ್ರೇಯಸ್ಸನ್ನು ಆಸ್ಟ್ರೇಲಿಯಾ ಬೌಲರ್‌ಗಳಿಗೆ ನೀಡಿದ್ದಾರೆ.

"ಖಂಡಿತಾ ಇವತ್ತು ಸಂತಸವಾಗಿದೆ. ಸತತ ಎರಡು ಗೆಲುವಿನ ನಂತರ ಗೆಲುವಿನ ಲಯಕ್ಕೆ ಮರಳಿದ್ದೇವೆ. ಈಗ ಈ ಪೈಪೋಟಿ ಉತ್ಕೃಷ್ಟಮಟ್ಟಕ್ಕೆ ತಲುಪುತ್ತಿದೆ. ಎಲ್ಲರೂ ಅದನ್ನು ತಲುಪಬೇಕಿದ್ದು ಮೈದಾನದಲ್ಲಿ ಎಲ್ಲರೂ ಬಹಳ ಅದ್ಭುತವಾಗಿ ಪೈಪೋಟಿ ನೀಡುತ್ತಿದ್ದಾರೆ. ನಮ್ಮಿಂದ ಉತ್ತಮ ಆರಂಭ ಬಂದಿರಲಿಲ್ಲ. ಆದರೆ ನಾವು ಉತ್ತಮವಾಗಿ ಬೌಲಿಂಗ್ ನಡೆಸಿದ್ದೆವು. 130ಕ್ಕೆ 1 ವಿಕೆಟ್ ಕಳೆದುಕೊಂಡು ಶ್ರೀಲಂಕಾ ಉತ್ತಮವಾಗಿ ಆಡುತ್ತಿತ್ತು. ಆದರೆ ಅಂತಿಮವಾಗಿ ಅದ್ಭುತವಾದ ಪ್ರದರ್ಶನ ನೀಡುವ ಮೂಲಕ ಪಂದ್ಯಕ್ಕೆ ಮರಳಿದೆವು" ಎಂದಿದ್ದಾರೆ ಪ್ಯಾಟ್ ಕಮ್ಮಿನ್ಸ್.
ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ನೀಡಿದ್ದ 210 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ನಿರೀಕ್ಷಿತ ಆರಂಭ ಪಡೆಯಲು ಸಾಧ್ಯವಾಗಲಿಲ್ಲ. ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ದಿಲ್ಶನ್ ಮಧುಶಂಕ ಅವರ ಒಂದೇ ಓವರ್‌ನಲ್ಲಿ ವಿಕೆಟ್ ಕಳೆದುಕೊಳ್ಳುವ ಮೂಲಕ ಮತ್ತೆ ಸಂಕಷ್ಟಕ್ಕೆ ಸಿಲುಕುವ ಸೂಚನೆ ನೀಡಿತ್ತು. ಆದರೆ ಮಿಚೆಲ್ ಮಾರ್ಶ್ ಹಾಗೂ ಮಾರ್ನಸ್ ಲ್ಯಾಬುಶೇನ್ ಅದಕ್ಕೆ ಅವಕಾಶ ನೀಡಲಿಲ್ಲ. ನಂತರ ಜೋಸ್ ಇಂಗ್ಲಿಸ್ ಕುಡ ಅದ್ಭುತ ಪ್ರದರ್ಶನ ನೀಡಿ ಮಿಂಚಿದರು.
ಮಿಚೆಲ್ ಮಾರ್ಶ್ 52 ರನ್ ಬಾರಿಸಿದರೆ ಲ್ಯಾಬುಶೇನ್ 40 ರನ್‌ಗಳ ಕೊಡುಗೆ ನೀಡಿದರು. ಇನ್ನು ಜೋಸ್ ಇಂಗ್ಲಿಸ್ 58 ರನ್ ಬಾರಿಸಿದ್ದಾರೆ. ಇನ್ನು ಅಂತಿಮ ಹಂತದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ 21 ಎಸೆತಗಳಲ್ಲಿ 31 ರನ್ ಬಾರಿಸಿದರೆ ಮಾರ್ಜಸ್ ಸ್ಟೋಯ್ನಿಸ್ 10 ಎಸೆಗಳಲ್ಲಿ 20 ರನ್ ಭಾರಿಸುವ ಮೂಲಕ ಆಸ್ಟ್ರೇಲಿಯಾ ತಂಡ ಇನ್ನೂ 14.4 ಎಸೆತಗಳು ಬಾಕಿಯಿರುಚಂತೆಯೇ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲಿಗೆ ಬ್ಯಾಟಿಂಗ್ ಮಾಡಿದ್ದು ಅದ್ಭುತ ಆರಂಭವನ್ನು ಪಡೆದುಕೊಂಡಿತು. ಹೀಗಾಗಿ ಈ ಪಂದ್ಯದಲ್ಲಿಯೂ ಆಸ್ಟ್ರೇಲಿಯಾ ತಂಡ ಭಾರೀ ಹಿನ್ನಡೆ ಅನುಭವಿಸುವ ಲಕ್ಷಣಗಳು ಗೋಚರಿಸಿತ್ತು. ಆದರೆ ಮೊದಲ ವಿಕೆಟ್ ಬೇರ್ಪಟ್ಟ ಬಳಿಕ ಆಸ್ಟ್ರೇಲಿಯಾ ಭರ್ಜರಿ ಮೇಲುಗೈ ಸಾಧಿಸಿದ್ದು ಲಂಕಾ ಪಡೆಯನ್ನು 209 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.
ಈ ಪಂದ್ಯದಲ್ಲಿ ಶ್ರೀಲಂಕಾದ ಆರಂಭಿಕ ಜೋಡಿಯಾದ ಪಾತುಮ್ ನಿಸ್ಸಾಂಕ ಹಾಗೂ ಕುಸಲ್ ಪೆರೆರ ಭರ್ಜರಿ 125 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಆಸ್ಟ್ರೇಲಿಯಾದ ಪ್ರಮುಖ ವೇಗಿಗಳ ದಾಳಿಯನ್ನು ಈ ಜೋಡಿ ಸಮರ್ಥವಾಗಿ ದಂಡಿಸುತ್ತಾ ಮುನ್ನುಗ್ಗಿತ್ತು. ಇಬ್ಬರು ಆಟಗಾರರು ಕೂಡ ಅರ್ಧ ಶತಕ ಸಿಡಿಸಿ ಮುನ್ನುಗ್ಗಿದ್ದರು. 22ನೇ ಓವರ್‌ನಲ್ಲಿ ಫಾತುಮ್ ನಿಸಾಂಕ 61 ರನ್‌ಗಳಿಸಿದ್ದಾಗ ಪ್ಯಾಟ್ ಕಮ್ಮಿನ್ಸ್‌ಗೆ ವಿಕೆಟ್ ಒಪ್ಪಿಸುವ ಮೂಲಕ ಈ ಜೋಡಿ ಬೇರ್ಪಟ್ಟಿತು. ಅದಾದ ಬಳಿಕ ಆಸಿಸ್ ಬೌಲರ್‌ಗಳು ಸಂಪೂರ್ಣ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು.