For Quick Alerts
ALLOW NOTIFICATIONS  
For Daily Alerts
 

ಮತ್ತೆ ಕಾಡುತ್ತಿದೆ ಕೊವಿಡ್; ಶ್ರೀಲಂಕಾದ ಯುವ ಆಟಗಾರನಿಗೆ ತಗುಲಿದ ಸೋಂಕು

Australia vs Sri Lanka: SL pacer Nuwan Thushara tests positive for Covid 19

ಕಳೆದೆರಡು ವರ್ಷಗಳಲ್ಲಿ ಹಲವಾರು ಕ್ರಿಕೆಟ್ ಟೂರ್ನಿಗಳಿಗೆ ಅಡ್ಡಿಯನ್ನುಂಟುಮಾಡಿದ್ದ ಕೊರೊನಾ ಸೋಂಕು ಈ ವರ್ಷವೂ ಸಹ ತನ್ನ ಅಡ್ಡಿ ಪಡಿಸುವ ಕಾರ್ಯವನ್ನು ಮುಂದುವರೆಸಿದಂತಿದೆ. ಹೌದು, 2020 ಮತ್ತು 2021ನೇ ಸಾಲುಗಳಲ್ಲಿ ನಡೆಯಬೇಕಿದ್ದ ಹಲವಾರು ಮಹತ್ತರದ ಟೂರ್ನಿಗಳು ಈ ಕೊರೊನಾ ವೈರಸ್ ಕಾರಣದಿಂದಾಗಿ ಯೋಜನೆಯನ್ನು ಹಾಕಿದ್ದ ದಿನಾಂಕಗಳಂದು ನಡೆಯಲಿಲ್ಲ. ಈ ಕೊರೋನಾವೈರಸ್ ಕಾರಣದಿಂದಾಗಿ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಕೂಡ ತಡವಾಗಿ ನಡೆಯಿತು ಹಾಗೂ ಭಾರತದಲ್ಲಿ ಆರಂಭವಾಗಿ ಕೊರೋನಾ ವೈರಸ್ ಹೊಡೆತಕ್ಕೆ ಸಿಲುಕಿದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೂಡ ಮಧ್ಯಂತರದಲ್ಲಿಯೇ ತಾತ್ಕಾಲಿಕವಾಗಿ ನಿಲ್ಲಿಸಿ ನಂತರ ಯುಎಇಯಲ್ಲಿ ಆ ಟೂರ್ನಿಯನ್ನು ಮುಂದುವರಿಸಲಾಯಿತು.

ಇನ್ನು ಕಳೆದ ವರ್ಷದ ರೀತಿಯೇ ಈ ವರ್ಷವೂ ಸಹ ವಿಶ್ವದ ವಿವಿಧ ಪ್ರದೇಶಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಎಷ್ಟೇ ಕಠಿಣವಾದ ಬಯೋ ಬಬಲ್ ವ್ಯವಸ್ಥೆಯನ್ನು ನಿರ್ಮಿಸಿದರೂ ಕೂಡ ಟೂರ್ನಿಗಳ ಬಯೋ ಬಬಲ್ ಒಳಗಡೆ ಕೊರೋನಾವೈರಸ್ ಪ್ರವೇಶಿಸುತ್ತಿದೆ. ಹೀಗಾಗಿ ಇತ್ತೀಚೆಗಷ್ಟೇ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಸರಣಿ, ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿ ಹಾಗೂ ಇನ್ನೂ ಮುಂತಾದ ಹಲವಾರು ಸರಣಿ ಹಾಗೂ ಟೂರ್ನಿಗಳನ್ನು ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆಸಲಾಯಿತು. ಹೀಗೆ ಕೊರೋನಾವೈರಸ್ ಸೊಂಕಿನಿಂದ ಪಾರಾಗಲು ಕ್ರಿಕೆಟ್ ಆಯೋಜಕರು ಪ್ರತಿನಿತ್ಯವೂ ಶ್ರಮಿಸುತ್ತಿದ್ದರೂ ಸಹ ಕೊರೋನಾವೈರಸ್ ಸರಣಿ ಹಾಗೂ ಟೂರ್ನಿಗಳಲ್ಲಿ ಭಾಗವಹಿಸುತ್ತಿರುವ ಆಟಗಾರರನ್ನು ಪ್ರವೇಶಿಸುವಲ್ಲಿ ಯಶಸ್ವಿಯಾಗಿವೆ.

ಇನ್ನು 5 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನಾಡಲು ಶ್ರೀಲಂಕಾ ಕ್ರಿಕೆಟ್ ತಂಡ ಫೆಬ್ರವರಿ 3ರಂದು ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಳ್ಳುತ್ತಿದ್ದು ಈಗಾಗಲೇ ಸರಣಿಯಲ್ಲಿ ಭಾಗವಹಿಸಲಿರುವ ಹೆಸರುಗಳನ್ನು ಕೂಡ ಘೋಷಿಸಲಾಗಿದೆ. ಹೀಗೆ ಆಯ್ಕೆಯಾದವರ ಪೈಕಿ ಇದುವರೆಗೂ ಯಾವುದೇ ಅಂತರರಾಷ್ಟ್ರೀಯ ಪಂದ್ಯದಲ್ಲಿಯೂ ಕೂಡ ಆಡುವ ಅವಕಾಶವನ್ನು ಪಡೆಯದಿರುವ ನುವಾನ್ ತುಷಾರಾ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಹೌದು, ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಳ್ಳುತ್ತಿರುವ ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದ ನುವಾನ್ ತುಷಾರ ಸದ್ಯ ತಂಡದಿಂದ ದೂರ ಉಳಿದಿದ್ದು ಎರಡನೇ ಟೆಸ್ಟ್ ಫಲಿತಾಂಶ ಬರುವವರೆಗೂ ಕೂಡ ಕಾಯಬೇಕಿದೆ. ಅಷ್ಟೇ ಅಲ್ಲದೆ ಫಲಿತಾಂಶ ಬಂದ ನಂತರ ನೆಗೆಟಿವ್ ಬಂದರೂ ಕೂಡ ತಜ್ಞರು ನೀಡುವಂತಹ ಸಲಹೆಯನ್ನು ನುವಾನ್ ತುಷಾರ ಪಾಲಿಸಬೇಕಾಗಿದ್ದು, ಆಸ್ಟ್ರೇಲಿಯಾ ಪ್ರವಾಸಕ್ಕೆ ನುವಾನ್ ತುಷಾರ ಗೈರಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಪಿಎಸ್ಎಲ್: ಶಾಹಿದ್ ಅಫ್ರಿದಿಗೂ ಕೊರೊನಾ

ಒಂದೆಡೆ ಕರಾಚಿಯ ನ್ಯಾಶನಲ್ ಕ್ರೀಡಾಂಗಣದಲ್ಲಿ ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯನ್ನು ವಿಜೃಂಬಣೆಯಿಂದ ಆರಂಭಿಸಿದ್ದರೆ, ಈ ಸಂಭ್ರಮಕ್ಕೂ ಮುನ್ನ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಗೆ ಹಿನ್ನಡೆಯಾಗುವಂತಹ ಘಟನೆಗಳು ನಡೆದಿವೆ. ಹೌದು, ಟೂರ್ನಿ ಆರಂಭಕ್ಕೂ ಮುನ್ನ ಪಾಕಿಸ್ತಾನದ ಖ್ಯಾತ ಆಟಗಾರ ಶಾಹಿದ್ ಅಫ್ರಿದಿ ಕೊರೋನಾವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಇದಕ್ಕೂ ಮುನ್ನ ಟೂರ್ನಿಯ ಕೆಲ ಆಟಗಾರರು ಮತ್ತು ಸಿಬ್ಬಂದಿ ವರ್ಗದವರು ಸೇರಿದಂತೆ ಒಟ್ಟು 8 ಜನರಲ್ಲಿ ಕೊರೋನಾವೈರಸ್ ಕಾಣಿಸಿಕೊಂಡು ಆತಂಕವನ್ನು ಮೂಡಿಸಿತ್ತು.

ಇನ್ನು ಕೊರೋನಾವೈರಸ್ ಸೋಂಕಿಗೆ ಒಳಗಾಗಿರುವ ಶಾಹಿದ್ ಅಫ್ರಿದಿ ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯಲ್ಲಿ ಕ್ವೆಟ್ಟಾ ಗ್ಲೇಡಿಯೇಟರ್ಸ್ ತಂಡದ ಪರ ಕಣಕ್ಕಿಳಿಯಬೇಕಿತ್ತು. ಗುರುವಾರ ಬೆಳಿಗ್ಗೆ ಬೆನ್ನು ನೋವು ಕಾಣಿಸಿಕೊಂಡ ಕಾರಣ ಶಾಹಿದ್ ಅಫ್ರಿದಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದು, ಈ ಸಂದರ್ಭದಲ್ಲಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನು ಪಾಕಿಸ್ತಾನ್ ಸೂಪರ್ ಲೀಗ್ ನಿಯಮದ ಪ್ರಕಾರ ಯಾವುದೇ ಆಟಗಾರ ಕೊರೋನಾವೈರಸ್ ಸೋಂಕಿಗೆ ಒಳಗಾದರೆ 7 ದಿನಗಳ ಐಸೋಲೇಷನ್ ನಿಯಮವನ್ನು ಅನುಸರಿಸಬೇಕಾಗಿದ್ದು, ಶಾಹಿದ್ ಅಫ್ರಿದಿ ಕೂಡಾ ಇದೀಗ ಐಸೋಲೇಷನ್ ಅನುಸರಿಸುತ್ತಿದ್ದಾರೆ.

Story first published: Monday, January 31, 2022, 20:11 [IST]
Other articles published on Jan 31, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+