ಟಿ20 ಸರಣಿ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯಕ್ಕೆ ಆಡುವ ಬಳಗ ಘೋಷಿಸಿದ ಶ್ರೀಲಂಕಾ

ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಟಿ20 ಸರಣಿ ಇಂದು(ಜೂನ್ 7) ಆರಂಭವಾಗಲಿದೆ. ಈ ಪಂದ್ಯಕ್ಕೆ ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣ ಆತಿಥ್ಯ ವಹಿಸಿಕೊಳ್ಳಲಿದ್ದು ಈ ಪಂದ್ಯ ಕುತೂಹಲ ಮೂಡಿಸಿದೆ. ಮೂರು ಮಾದರಿಯ ಸರಣಿಯನ್ನೊಳಗೊಂಡ ಟೂರ್ನಿ ಇದಾಗಿದ್ದು ಯಾವ ತಂಡದ ಪ್ರದರ್ಶನ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ. ಟಿ20 ಸರಣಿಯ ಬಳಿಕ ಐದು ಪಂದ್ಯಗಳ ಏಕದಿನ ಸರಣಿ ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಯೋಜನೆಯಾಗಲಿದೆ.
ಮೊದಲ ಟಿ20 ಪಂದ್ಯಕ್ಕೆ ಶ್ರೀಲಂಕಾ ಸಮತೋಲಿತ ತಂಡವನ್ನು ಪ್ರಕಟಿಸಿದೆ. ಪ್ರತಿಭಾನ್ವಿತ ಆಟಗಾರ ಫಾತುಮ್ ನಿಸ್ಸಾಂಕ ಹಾಗೂ ದನಿಷ್ಕಾ ಗುಣತಿಲಕ ಈ ಪಂದ್ಯದಲ್ಲಿ ಆರಂಬಿಕರಾಗಿ ಕಣಕ್ಕಿಳಿಯಲಿದ್ದಾರೆ. ಚರಿತ್ ಅಸಲಂಕಾ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಅನುಭವಿ ಕುಸಾಲ್ ಮೆಂಡಿಸ್ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ.

ಪ್ರತಿಭಾನ್ವಿತ ಆಟಗಾರರ ಪಡೆ
ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಮಿಂಚಿರುವ ಭಾನುಕಾ ರಾಜಪಕ್ಷ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಸಾಮರ್ಥ್ಯ ಪ್ರದರ್ಶಿಸಿದರೆ ನಾಯಕ ದಸುನ್ ಶನಕ ಫಿನಿಷರ್ ಜವಾಬ್ಧಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಮಿಂಚಿತ ಮತ್ತೋರ್ವ ಲಂಕನ್ ಆಟಗಾರ ಸ್ಪಿನ್ನರ್ ವನಿಂದು ಹಸರಂಗ ನೇತೃತ್ವದಲ್ಲಿ ಶ್ರೀಲಂಕಾ ಬೌಲಿಂಗ್ ಪಡೆ ದಾಳಿಗಿಳಿಯಲಿದೆ. ಮಹೀಶ ತೀಕ್ಷಣ ಕೂಡ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಚಾಮಿಕ ಕರುಣ ರತ್ನೆ, ದುಷ್ಮಂತಾ ಚಮೀರಾ ಹಾಗೂ ನುವಾಲ್ ತುಸಾರ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಲಿದ್ದಾರೆ.

ಶ್ರೀಲಂಕಾ ಪ್ರಕಟಿಸಿದ ಆಡುವ ಬಳಗ ಹೀಗಿದೆ
ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ದನುಷ್ಕ ಗುಣತಿಲಕ, ಚರಿತ್ ಅಸಲಂಕ, ಕುಸಲ್ ಮೆಂಡಿಸ್, ಭಾನುಕ ರಾಜಪಕ್ಸೆ, ದಸುನ್ ಶನಕ, ವನಿಂದು ಹಸರಂಗ, ಚಾಮಿಕ ಕರುಣಾರತ್ನ, ದುಷ್ಮಂತ ಚಮೀರ, ಮಹೇಶ್ ತೀಕ್ಷಣ ಮತ್ತು ನುವಾನ್ ತುಸಾರ

ಆಸ್ಟ್ರೇಲಿಯಾ ಆಡುವ ಬಳಗ
ಇನ್ನು ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಒಂದು ದಿನ ಮುನ್ನವೇ ಆಡುವ ಬಳಗವನ್ನು ಘೋಷಣೆ ಮಾಡಿದೆ. ಆರೋನ್ ಫಿಂಚ್ ನಾಯಕತ್ವದ ಈ ತಂಡ ಕೂಡ ಬಲಿಷ್ಠವಾಗಿದ್ದು ಶ್ರೀಲಂಕಾ ದೊಡ್ಡ ಮಟ್ಟದ ಸವಾಲನ್ನು ಎದುರಿಸಬೇಕಿದೆ.
ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿರುವ ಆಡುವ ಬಳಗ ಹೀಗಿದೆ: ಆರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಮಿಚ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಆಷ್ಟನ್ ಅಗರ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್ಸನ್, ಜೋಶ್ ಹ್ಯಾಜಲ್‌ವುಡ್

ಮೂರು ಮಾದರಿಯ ಸರಣಿ
ಮೂರು ಮಾದರಿಯ ಸರಣಿ ಮೊದಲಿಗೆ ಟಿ20 ಸರಣಿ ನಡೆಯಲಿದ್ದು 3 ಪಂದ್ಯಗಳ ಈ ಸರಣಿ ಜೂನ್ 7ರಿಂದ ಜೂನ್ 11ರ ಮಧ್ಯೆ ನಡೆಯಲಿದೆ. ಅದಾದ ಬಳಿಕ ಏಕದಿನ ಸರಣಿ ಆಯೋಜನೆಯಾಗಲಿದ್ದು 5 ಪಂದ್ಯಗಳ ಈ ಸರಣಿ ಜೂನ್ 14ರಿಂದ 24ರ ಮಧ್ಯೆ ನಿಗದಿಯಾಗಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಆಸ್ಟ್ರೇಲಿಯಾದ ಈ ಪ್ರವಾಸ ಅಂತ್ಯವಾಗಲಿದ್ದು ಜೂನ್ 29ರಿಂದ ಜುಲೈ3ರ ವರೆಗೆ ಮೊದಲ ಟೆಸ್ಟ್ ಹಾಗೂ ಜುಲೈ 8-12ರವರೆಗೆ ಎರಡನೇ ಟೆಸ್ಟ್ ನಡೆಯಲಿದೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications