ಕೊಹ್ಲಿಗೆ ಬೌಲಿಂಗ್ ಮಾಡದಿರುವುದು ಆಸಿಸ್‌ಗೆ ದೊಡ್ಡ ಹುಮ್ಮಸ್ಸು: ಗವಾಸ್ಕರ್

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ಆರಂಭವಾಗಲಿರುವ ಈ ಟೆಸ್ಟ್ ಪಂದ್ಯಕ್ಕೂ ಮುನ್ನ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಮಾಜಿ ದಿಗ್ಗಜ ಆಟಗಾರರಾದ ಸುನಿಲ್ ಗವಾಸ್ಕರ್ ಹಾಗೂ ಆಲನ್ ಬಾರ್ಡರ್ ಕೂಡ ಈ ಸರಣಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಆಲನ್ ಬಾರ್ಡರ್ ಹಾಗೂ ಸುನಿಲ್ ಗವಾಸ್ಕರ್ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತಿಮ ಮೂರು ಪಂದ್ಯಗಳಿಗೆ ಅಲಭ್ಯತೆಯ ಬಗ್ಗೆ ಅನಿಸಿಕೆ ಹೇಳಿಕೊಂಡಿದ್ದಾರೆ. ಕೊಹ್ಲಿಯ ಅಲಭ್ಯತೆ ಟೀಮ್ ಇಂಡಿಯಾಗೆ ತುಂಬಾ ಕಾಡಲಿದೆ ಎಂಬ ಅಭಿಪ್ರಾಯವನ್ನು ಇಬ್ಬರು ಮಾಜಿ ದಿಗ್ಗಜರು ಕೂಡ ಬಲವಾಗಿ ಒಪ್ಪಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಪಂದ್ಯದ ಬಳಿಕ ತವರಿಗೆ ಮರಳುತ್ತಿರುವುದು ಅಂತಿಮ ಮೂರು ಪಂದ್ಯಗಳಲ್ಲಿ ಆತಿಥೇಯರನ್ನು ಸಹಜವಾಗಿಯೇ ಫೇವರೀಟ್ ತಂಡವನ್ನಾಗಿಸುತ್ತದೆ ಎಂದಿದ್ದಾರೆ. ಮತ್ತೊಂದೆಡೆ ಸುನಿಲ್ ಗವಾಸ್ಕರ್ ವಿರಾಟ್ ಕೊಹ್ಲಿಯಂತಾ ಆಟಗಾರನಿಗೆ ಅಂತಿಮ ಮೂರು ಪಂದ್ಯಗಳಲ್ಲಿ ಬೌಲಿಂಗ್ ಮಾಡಿದಿರುವುದು ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಹುಮ್ಮಸ್ಸು ನೀಡಲಿದೆ ಎಂದಿದ್ದಾರೆ.
ವಿರಾಟ್ ಕೊಹ್ಲಿಯ ಅಲಭ್ಯತೆ ತಂಡದಲ್ಲಿ ದೊಡ್ಡ ಶುಷ್ಕತೆಯನ್ನು ಉಂಟು ಮಾಡಲಿದೆ ಆತ ಇಲ್ಲದಿರುವುದನ್ನು ಆಸಿಸ್ ಬೌಲರ್‌ಗಳು ನಿಜಕ್ಕೂ ಸಂಭ್ರಮಿಸಲಿದ್ದಾರೆ. ಆದರೆ ಅಡಿಲೇಡ್ ಪಂದ್ಯದಲ್ಲಿ ಆತ ಅಂಗಳದ ನಾಲ್ಕು ದಿಕ್ಕುಗಳಿಗೂ ಚೆಂಡನ್ನು ಅಟ್ಟುವ ಸಾಧ್ಯತೆಯಿದೆ. ಈ ಮೂಲಕ ತಂಡಕ್ಕೆ ಅದ್ಭುತ ಆರಂಭವನ್ನು ನೀಡಲು ಬಯಸುತ್ತಾರೆ. ಅಲ್ಲಿಂದ ಮುಂದೆ ಯಾವ ರೀತಿ ಸಾಗಲಿಗೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಆಲನ್ ಬಾರ್ಡರ್ ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಆಲನ್ ಬಾರ್ಡನ್ ಜಸ್ಪ್ರೀತ್ ಬೂಮ್ರಾ ಟೀಮ್ ಇಂಡಿಯಾದ ಪ್ರಮುಖ ಅಸ್ತ್ರವಾಗಲಿದ್ದಾರೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಬಾರ್ಡನ್ ತಾನು ಜಸ್ಪ್ರೀತ್ ಬೂಮ್ರಾ ಅವರ ಅಭಿಮಾನಿ ಎಂದು ತಿಳಿಸಿರುವ ಬಾರ್ಡರ್ ಆತ ಅತ್ಯಂತ ಮಾರಕವಾದ ವೇಗದ ಬೌಲರ್ ಎಂದಿದ್ದಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications