Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್ ಕೊಹ್ಲಿಗಾಗಿ ವಿಶೇಷ ಯೋಜನೆ ನಮ್ಮಲ್ಲಿದೆ ಎಂದ ಆಸಿಸ್ ಕೋಚ್ ಲ್ಯಾಂಗರ್

Australia will have plans for Virat Kohli, says Justin Langer

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಡಿಲೇಡ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ ಅಹರ್ನಿಶಿ ಪಂದ್ಯವಾಗಿದ್ದು ಅಭಿಮಾನಿಗಳ ಕಾತುರ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. ಇದು ಭಾರತದ ಮೊಟ್ಟ ಮೊದಲ ವಿದೇಶಿ ಪಿಂಕ್ ಬಾಲ್ ಪಂದ್ಯವಾಗಿದ್ದು ಒಟ್ಟಾರೆ ಎರಡನೇಯದ್ದಾಗಿದೆ. ಇದಕ್ಕೂ ಮುನ್ನ ಕಳೆದ ವರ್ಷ ಕೊಲ್ಕತ್ತಾದಲ್ಲಿ ಭಾರತ ಮೊದಲ ಬಾರಿಗೆ ಹಗಲು ರಾತ್ರಿ ಪಂದ್ಯದಲ್ಲಿ ಭಾಗಿಯಾಗಿತ್ತು.

ಮೊದಲ ಟೆಸ್ಟ್ ಪಂದ್ಯದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯಿಸಿದ್ದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗಾಗಿ ವಿಶೇಷ ಯೋಜನೆಯನ್ನು ಸಿದ್ದಪಡಿಸಿರುವುದಾಗಿ ಹೇಳಿದ್ದಾರೆ. ಈ ಮೂಲಕ ಕೊಹ್ಲಿಯನ್ನು ಕಟ್ಟಿಹಾಕಲು ಆಸಿಸ್ ಸಿದ್ದ ಎಂಬ ಸಂದೇಶ ರವಾನಿಸಿದ್ದಾರೆ.

ನಾಲ್ಕು ಪಂದ್ಯಗಳ ಈ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಪರವಾಗಿ ವಿರಾಟ್ ಕೊಹ್ಲಿ ಮೊದಲ ಪಂದ್ಯದಲ್ಲಿ ಮಾತ್ರವೇ ಕಣಕ್ಕಿಳಿಯಲಿದ್ದಾರೆ. ಈ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಪಿತೃತ್ವದ ರಜೆಯಲ್ಲಿ ತವರಿಗೆ ಮರಳಲಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಕೊಹ್ಲಿ ಪ್ರದರ್ಶನದ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.

"ಆತ ಶ್ರೇಷ್ಠವಾದ ಆಟಗಾರ ಮಾತ್ರವಲ್ಲದೆ ಶ್ರೇಷ್ಠವಾದ ನಾಯಕನೂ ಹೌದು. ಆತನ ಮೇಲೆ ನನಗೆ ಸಾಕಷ್ಟು ಗೌರವ ಇದೆ. ಆದರೆ ನಾನು ಆತನ ವಿರುದ್ಧ ಉತ್ತಮವಾದ ಯೋಜನೆಯನ್ನು ಹೆಣೆದಿದ್ದೇವೆ. ಯಾಕೆಂದರೆ ಭಾರತ ತಂಡಕ್ಕೆ ಆತ ಎಷ್ಟು ಮುಖ್ಯವಾದ ಆಟಗಾರ ಎಂದು ನಮಗೆ ತಿಳಿದಿದೆ. ಹಾಗಾಗಿ ಆತನಿಗಾಗಿ ಯೋಜನೆಯನ್ನು ನಾವು ಸಿದ್ಧಪಡಿಸಿದ್ದೇವೆ ಎಂದು ಲ್ಯಾಂಗರ್ ಹೇಳಿದ್ದಾರೆ.

"ನಾವು ವಿರಾಟ್ ಕೊಹ್ಲಿಯನ್ನು ಹೇಗೆ ಆಡಬೇಕು ಎಂಬ ಬಗ್ಗೆ ಯೋಚಿಸುತ್ತೇವೆ. ಆತ ಓರ್ವ ಅದ್ಭುತ ಆಟಗಾರ. ಆತನನ್ನು ಕೆರಳಿಸಬೇಕೋ ಬೇಡವೋ ಎಂಬ ಬಗ್ಗೆ ನಾವು ಚರ್ಚಿಸುವುದಿಲ್ಲ. ಅದೊಂದು ಕಳಪೆ ತಂತ್ರ. ನಾವು ಕೌಶಲ್ಯದಿಂದ ಆಡುತ್ತೇವೆ, ಭಾವನೆಗಳಿಂದ ಅಲ್ಲ. ಕನಿಷ್ಠ ಆ ನಿಟ್ಟಿನಲ್ಲಿ ನಾವು ಪ್ರಯತ್ನಿಸುತ್ತೇವೆ" ಎಂದು ಜಸ್ಟಿನ್ ಲ್ಯಾಂಗರ್ ಅಭಿಪ್ರಾಯ ಪಟ್ಟಿದ್ದಾರೆ.

Story first published: Tuesday, December 15, 2020, 13:34 [IST]
Other articles published on Dec 15, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+