Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೊಟ್ಟ ಮೊದಲ ಹಗಲು ರಾತ್ರಿ 'ಟೆಸ್ಟ್' ಗೆದ್ದ ಆಸ್ಟ್ರೇಲಿಯಾ

ಅಡಿಲೇಡ್, ನ.29: ಮೊಟ್ಟ ಮೊದಲ ಹೊನಲು ಬೆಳಕಿನ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ತಂಡ ರೋಚಕವಾಗಿ ಗೆದ್ದುಕೊಂಡಿದೆ. ನ್ಯೂಜಿಲೆಂಡ್ ವಿರುದ್ಧ 3 ವಿಕೆಟ್‌ಗಳ ಜಯ ಗಳಿಸುವ ಮೂಲಕ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಆಸ್ಟ್ರೇಲಿಯಾ ಗೆದ್ದುಕೊಂಡಿದೆ. ಒಟ್ಟಾರೆ, ಈ ಪಂದ್ಯದ ಯಶಸ್ಸಿನಿಂದ ಹಗಲು ರಾತ್ರಿ ಪಂದ್ಯಕ್ಕೆ ಹೆಚ್ಚಿನ ಬೆಂಬಲ ಸಿಕ್ಕಿದೆ.

ಗುಲಾಬಿ ವರ್ಣದ ಚೆಂಡು, ಫ್ಲಡ್ ಲೈಟ್ ಬಳಸಿ ಅಡಿಲೇಡ್ ಓವಲ್ ನಲ್ಲಿ ಆಡಲಾದ ಈ ಪಂದ್ಯ ಮೂರೇ ದಿನಗಳಲ್ಲೇ ಮುಕ್ತಾಯಾಅದರೂ ರೋಚಕವಾಗಿತ್ತು. 64 ವರ್ಷಗಳ ಹಿಂದೆ ಇದೇ ಕ್ರೀಡಾಂಗಣದಲ್ಲಿ ನಡೆದ ಮೂರು ದಿನಗಳ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ವೆಸ್ಟ್‌ಇಂಡೀಸ್ ವಿರುದ್ಧ 6 ವಿಕೆಟ್‌ಗಳ ಜಯ ಗಳಿಸಿತ್ತು. ಎಂಟು ತಿಂಗಳ ಹಿಂದೆ ನಡೆದ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್ ಫೈನಲ್‌ನಲ್ಲಿ ಸೆಣಸಾಡಿತ್ತು. ಅದೇ ರೀತಿಯ ವಾತಾವರಣ ಈ ಟೆಸ್ಟ್ ಪಂದ್ಯದಲ್ಲೂ ಕಾಣಬಹುದಾಗಿತ್ತು.[ಹಗಲು ರಾತ್ರಿ ಪಂದ್ಯಕ್ಕೂ ನ. 27ಕ್ಕೂ ಏನು ನಂಟು?]

 Australia win maiden day-night Test in tense finish; beat New Zealand by 3 wickets
138 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಹಗಲು-ರಾತ್ರಿ ಟೆಸ್ಟ್ ಪಂದ್ಯ ನಡೆಯುತ್ತಿದೆ. 1970ರಲ್ಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಹಾಗೂ ಕಳೆದ ದಶಕದಲ್ಲಿ ಟ್ವೆಂಟಿ-20 ಮಾದರಿಯ ಪಂದ್ಯವನ್ನು ಪರಿಚಯಿಸಲಾಗಿದ್ದು, ಈ ಎರಡು ಮಾದರಿಯ ಕ್ರಿಕೆಟ್ ಪ್ರೇಕ್ಷಕರನ್ನು ಸೆಳೆಯಲು ಯಶಸ್ವಿಯಾಗಿತ್ತು.[ಐತಿಹಾಸಿಕ ಟೆಸ್ಟ್ ಪಂದ್ಯದ ಭಾಗವಾದ ಇಂಡಿಯನ್]

ನ್ಯೂಜಿಲೆಂಡ್ ತಂಡ ಎರಡನೇ ಇನಿಂಗ್ಸ್‌ನಲ್ಲಿ 62.5 ಓವರ್‌ಗಳಲ್ಲಿ 208 ರನ್‌ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯ ಗೆಲುವಿಗೆ 187 ರನ್‌ಗಳ ಸವಾಲನ್ನು ಪಡೆದಿತ್ತು. ಆದರೆ, 51 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಪ್ರಯಾಸದ ಗೆಲುವು ಕಂಡಿತು.ಆಸ್ಟ್ರೇಲಿಯದ ಜೋಶ್ ಹೇಝಲ್‌ವುಡ್ ಪಂದ್ಯಶ್ರೇಷ್ಠ ಮತ್ತು ಡೇವಿಡ್ ವಾರ್ನರ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

Australia win maiden day-night Test

ಸಂಕ್ಷಿಪ್ತ ಸ್ಕೋರ್ ವಿವರ
ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 202

ಆಸ್ಟ್ರೇಲಿಯ ಮೊದಲ ಇನಿಂಗ್ಸ್ 224

ನ್ಯೂಜಿಲೆಂಡ್ ಎರಡನೆ ಇನಿಂಗ್ಸ್ 62.5 ಓವರ್‌ಗಳಲ್ಲಿ ಆಲೌಟ್ 208 (ಸ್ಯಾಂಟ್ನೆರ್ 45, ಟೇಲರ್ 32, ಹೇಝಲ್‌ವುಡ್ 70ಕ್ಕೆ 6, ಮಿಚೆಲ್ ಮಾರ್ಷ್ 59ಕ್ಕೆ 3).

ಆಸ್ಟ್ರೇಲಿಯ ಎರಡನೆ ಇನಿಂಗ್ಸ್ 51 ಓವರ್‌ಗಳಲ್ಲಿ 7 ವಿಕೆಟ್‌ಗೆ 187( ಶಾನ್ ಮಾರ್ಷ್ 49, ವಾರ್ನರ್ 35; ಬೌಲ್ಟ್ 60ಕ್ಕೆ 5).
ಪಂದ್ಯಶ್ರೇಷ್ಠ: ಹೇಝಲ್‌ವುಡ್.
ಸರಣಿಶ್ರೇಷ್ಠ: ಡೇವಿಡ್ ವಾರ್ನರ್.
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+