For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾದಲ್ಲಿನ ಗೆಲುವು ನಮಗೆ ಬೇರೆಯದ್ದೇ ಸ್ವ-ನಂಬಿಕೆ ನೀಡಿದೆ'

Australia win gave us different kind of self-belief, says pacer Ishant Sharma

ಲಂಡನ್: ಆಸ್ಟ್ರೇಲಿಯಾದಲ್ಲಿ ನಡೆದ 2020-21ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ಗೆಲುವು ನಮಗೆ ಬೇರೆಯದ್ದೇ ರೀತಿಯ ಸ್ವ ನಂಬಿಕೆ ನೀಡಿದೆ ಎಂದು ಭಾರತದ ವೇಗಿ ಇಶಾಂತ್ ಶರ್ಮಾ ಹೇಳಿದ್ದಾರೆ. ಮುಂಬರಲಿರುವ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕಾಗಿ ಸಜ್ಜಾಗುತ್ತಿರುವ ಇಶಾಂತ್ ಈ ಹೇಳಿಕೆ ನೀಡಿದ್ದಾರೆ.

ಜೂನ್ 18-22ರ ವರೆಗೆ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿರುವ ಏಜಸ್ ಬೌಲ್‌ ಸ್ಟೇಡಿಯಂನಲ್ಲಿ ಭಾರತ-ಇಂಗ್ಲೆಂಡ್ ಮಧ್ಯೆ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್‌ ಗೆಲ್ಲುತ್ತದೆ ಎಂದು ಬಹುತೇಕ ಕ್ರಿಕೆಟಿಗರು ಹೇಳುತ್ತಿದ್ದಾರೆ. ಅವರಿಗೆಲ್ಲ ತಿರುಗೇಟು ಎಂಬಂತೆ ಇಶಾಂತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಎಂಥಾ ಕಷ್ಟದ ಸಂದರ್ಭದಲ್ಲೂ ನಾವು ಗೆಲುವಿಗೆ ಕಮ್‌ಬ್ಯಾಕ್‌ ಮಾಡ್ತೀವಿ. ಈ ನಂಬಿಕೆ ಭಾರತೀಯ ಕ್ರಿಕೆಟನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದೆ. ನಾನೇ ಭಾಗವಹಿಸಲಿಲ್ಲವೆಂದರೂ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿನ ಗೆಲುವು ನಮಗೆ ಬೇರೆಯದ್ದೇ ರೀತಿಯ ಸ್ವನಂಬಿಕೆ ನೀಡಿದೆ ಎಂದು ಗಗನನ್ನಿಸುತ್ತದೆ,' ಎಂದು ಬಿಸಿಸಿಐ ಟಿವಿ ಜೊತೆ ಮಾತನಾಡಿದ ಇಶಾಂತ್ ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದ ಭಾರತ ಅಲ್ಲಿ 4 ಪಂದ್ಯಗಳ ಟೆಸ್ಟ್‌ ಸರಣಿ ಆಡಿತ್ತು. ಈ ಸರಣಿ ವೇಳೆ ಭಾರತದ ಪ್ರಮುಖ ಆಟಗಾರರು ಗಾಯದಿಂದಾಗಿ ತಂಡದಿಂದ ಹೊರಗಿದ್ದರು. ಅನಾನುಭವಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಭಾರತೀಯ ತಂಡ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಆರಂಭಿಕ ಪಂದ್ಯದಲ್ಲಿ ಹೀನಾಯವಾಗಿ ಸೋತಿತ್ತು. ಆ ಬಳಿಕ ವೀರೋಚಿತ ಪ್ರದರ್ಶನ ನೀಡಿದ್ದ ಯುವ ತಂಡ ಟೆಸ್ಟ್‌ ಸರಣಿಯನ್ನು 2-1ರಿಂದ ಗೆದ್ದು ಇತಿಹಾಸ ನಿರ್ಮಿಸಿತ್ತು.

Story first published: Saturday, June 12, 2021, 15:52 [IST]
Other articles published on Jun 12, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+