IND W vs AUS W: ಆಸ್ಟ್ರೇಲಿಯಾ ವನಿತೆಯರಿಗೆ ಭರ್ಜರಿ ಜಯ
ಪರ್ತ್: ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವೆ ನಡೆದ ಏಕೈಕ ಡೇ ಆಂಡ್ ನೈಟ್ ಟೆಸ್ಟ್ ಪಂದ್ಯ ಮುಕ್ತಾಯವಾಗಿದೆ. ಈ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ ಆತಿಥೇಯ ಆಸೀಸ್ ತಂಡ 10 ವಿಕೆಟ್‌ಗಳಿಂದ ಟೀಮ್ ಇಂಡಿಯಾವನ್ನು ಮಣಿಸಿದೆ.
ಟೀಮ್ ಇಂಡಿಯಾ ವನಿತೆಯರು ಮೂರನೇ ದಿನದಾಟದಲ್ಲಿ 6 ವಿಕೆಟ್‌ಗೆ 105 ರನ್‌ಗಳಿಂದ ಎರಡನೇ ಇನಿಂಗ್ಸ್ ಮುಂದುವರೆಸಿದರು. ಟೀಮ್ ಇಂಡಿಯಾ ಪರ ಕೆಳ ಕ್ರಮಾಂಕದಲ್ಲಿ ಸ್ನೇಹಾ ರಾಣ 30 ರನ್ ಬಾರಿಸಿದರು. ಅಂತಿಮವಾಗಿ ಭಾರತ ಎರಡನೇ ಇನಿಂಗ್ಸ್‌ನಲ್ಲಿ 149 ರನ್‌ಗಿಗಳಿಗೆ ಆಲೌಟ್ ಆಯಿತು.

ಎರಡನೇ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡದ ಪರ ಲೂಸಿ ಹ್ಯಾಮಿಂಲ್ಟನ್ 3, ಅಲಾನಾ ಕಿಂಗ್, ಅನ್ನಾಬೆಲ್ ಸದರ್ಲ್ಯಾಂಡ್ ಹಾಗೂ ಆಶ್ಲೀ ಗಾರ್ಡ್ನರ್ ತಲಾ ಎರಡು ವಿಕೆಟ್ ಕಬಳಿಸಿದರು.
ಅಲ್ಪ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡದ ಆರಂಭಿಕರಾದ ಜಾರ್ಜಿಯಾ ವೋಲ್ ಹಾಗೂ ಫೋಬೆ ಲಿಚ್‌ಫೀಲ್ಡ್ ಭರ್ಜರಿ ಪ್ರದರ್ಶನ ನೀಡಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು. ಈ ಜೋಡಿ ವಿಕೆಟ್ ನಷ್ಟವಿಲ್ಲದೆ 28 ರನ್ ಸಿಡಿಸಿ ಅಬ್ಬರಿಸಿತು. ಆಸ್ಟ್ರೇಲಿಯಾದ ಭರವಸೆಯ ಆಲ್‌ರೌಂಡರ್ ಅನ್ನಾಬೆಲ್ ಸದರ್ಲ್ಯಾಂಡ್ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದರೆ, ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್ ಪಡೆದರು. ಅಲ್ಲದೆ ಮೊದಲ ಇನಿಂಗ್ಸ್‌ನಲ್ಲಿ ಇವರು ಅಬ್ಬರದ ಶತಕ ಬಾರಿಸಿ ಮಿಂಚಿದ್ದರು.
ಪಂದ್ಯದ ಚಿತ್ರಣ
ಮೊದಲು ಇನಿಂಗ್ಸ್‌ನಲ್ಲಿ ಭಾರತ ತಂಡದ ಪರ ಜೆಮಿಮಾ ರೊಡ್ರಿಗಸ್ ಅವರನ್ನು ಹೊರತು ಪಡಿಸಿದರೆ, ಬೇರೆಯಾವ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡಲಿಲ್ಲ. ಪರಿಣಾಮ ಮೊದಲ ಇನಿಂಗ್ಸ್‌ನಲ್ಲಿ ಭಾರತ 198 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡದ ಪರ ಅನ್ನಾಬೆಲ್ ಸದರ್ಲ್ಯಾಂಡ್ 17 ಬೌಂಡರಿ ನೆರವಿನಿಂದ 129 ರನ್ ಬಾರಿಸಿದರೆ, ಎಲ್ಲಿಸಾ ಪೆರ್ರಿ 76 ರನ್ ಬಾರಿಸಿದರು. ಭಾರತದ ಪರ ಮೊದಲ ಇನಿಂಗ್ಸ್‌ನಲ್ಲಿ ಸಯಾಲಿ ಸತ್ಘರೆ 4 ವಿಕೆಟ್ ಪಡೆದರು. ಇನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ 149 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಎರಡನೇ ಇನಿಂಗ್ಸ್‌ನಲ್ಲಿ ಪ್ರತಿಕಾ ರವಾಲ್ 8 ಬೌಂಡರಿ ನೆರವಿನಿಂದ 63 ರನ್ ಸಿಡಿಸಿದರು. ಆಸೀಸ್ ವಿಕೆಟ್ ನಷ್ಟವಿಲ್ಲದೆ 28 ರನ್ ಬಾರಿಸಿ ಜಯ ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications