Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದ ಆಸ್ಟ್ರೇಲಿಯಾ ಮಹಿಳಾ ತಂಡ

Australia Womens Cricket Team Sets New World Record In One Day Internationals

ಆಸ್ಟ್ರೇಲಿಯಾದ ಮಹಿಳಾ ತಂಡ ವಿಶ್ವ ಕ್ರಿಕೆಟ್‌ನಲ್ಲಿ ಅತಿ ದೊಡ್ಡ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದೆ, ಏಕದಿನ ಮಾದರಿಯಲ್ಲಿ ಸತತವಾಗಿ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡ ಎಂಬ ಹೆಗ್ಗಳಿಕೆಗೆ ಆಸ್ಟ್ರೇಲಿಯಾದ ವನಿತಾ ಪಡೆ ಪಾತ್ರವಾಗಿದೆ. ಈ ಮೂಲಕ ರಿಕಿ ಪಾಂಟಿಂಗ್ ನಾಯಕತ್ವದ ದಾಖಲೆ ಮುರಿದಿದೆ.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ ಭರ್ಜರಿ ಗೆಲುವನ್ನು ಸಾಧಿಸಿದೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಆಸಿಸ್ ಮಹಿಳೆಯರ ತಂಡ ಸತತ 22ನೇ ಗೆಲುವು ಕಂಡಂತಾಗಿದೆ. 2017ರ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ ಕೊನೆಯ ಬಾರಿಗೆ ಏಕದಿನ ಪಂದ್ಯದಲ್ಲಿ ಸೋಲು ಕಂಡಿದೆ.

ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿರುವ ರಿಕಿ ಪಾಂಟಿಂಗ್ ನೇತೃತ್ವದ ಬಲಿಷ್ಠ ಆಸ್ಟ್ರೇಲಿಯಾ ತಂಡ ಸತತವಾಗಿ 21 ಪಂದ್ಯಗಳನ್ನು ಗೆದ್ದುಕೊಂಡು ದಾಖಲೆ ಬರೆದಿತ್ತು. ಸುದೀರ್ಘ 18 ವರ್ಷಗಳ ಬಳಿಕ ಈ ದಾಖಲೆಯನ್ನು ಆಸ್ಟ್ರೇಲಿಯಾದ್ದೇ ಆದ ಮಹಿಳಾ ತಂಡ ಮುರಿದು ಸಾಧನೆ ಮಾಡಿದೆ.

ಆಸ್ಟ್ರೇಲಿಯಾದ ಈ ದಾಖಲೆಯ ವಿಜಯ ಯಾತ್ರೆ ಭಾರತದ ವಿರುದ್ಧದ 2018ರ ಸರಣಿಯಿಂದಲೇ ಆರಂಭವಾಗಿದೆ. 2018ರ ಮಾರ್ಚ್‌ನಲ್ಲಿ ನಡೆದ ಏಕದಿನ ಸರಣಿಯನ್ನು ಆಸ್ಟ್ರೇಲಿಯಾ 3-0 ಅಂತರದಿಂದ ಗೆಲುವು ಸಾಧಿಸಿತ್ತು. ಬಳಿಕ ಪಾಕಿಸ್ತಾನದ ವಿರುದ್ಧದ ಸರಣಿಯೂ 3-0 ಅಂತರದಿಂದ ಆಸಿಸ್ ಪಾಲಾಗಿತ್ತು. ನಂತರ ನ್ಯೂಜಿಲೆಂಡ್ ವಿರುದ್ಧ(3-0), ಇಂಗ್ಲೆಂಡ್ ವಿರುದ್ಧ(3-0), ವೆಸ್ಟ್ ಇಂಡೀಸ್ ವಿರುದ್ಧ (3-0) ಶ್ರೀಲಂಕಾ ವಿರುದ್ಧ(3-0) ನ್ಯೂಜಿಲೆಂಡ್ ವಿರುದ್ಧ (3-0) ಮತ್ತು ಈಗ ಮತ್ತೆ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ 1-0 ಅಂತರದಿಂದ ಗೆಲುವು ಸಾಧಿಸಿ ಮುನ್ನಡೆ ಕಾಯ್ದುಕೊಂಡಿದೆ.

ಭಾನುವಾರ ಮೌಂಟ್ ಮಾಂಗುನ್ಯಿನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಆಸ್ಟ್ರೇಲಿಯಾಗೆ 213 ರನ್‌ಗಳ ಗುರಿಯನ್ನು ನೀಡಿತ್ತು. ನ್ಯೂಜಿಲೆಂಡ್ ನೀಡಿದ ಈ ಗುರಿಯನ್ನು ಆಸಿಸ್ ವನಿತಾ ಬಳಗ 38.3 ಓವರ್‌ಗಳಲ್ಲಿ ತಲುಪಿ ಜಯ ಸಾಧಿಸಿತು.

Story first published: Sunday, April 4, 2021, 20:33 [IST]
Other articles published on Apr 4, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+