
ಕ್ವೀನ್ಸ್‌ಲ್ಯಾಂಡ್: ಕ್ವೀನ್ಸ್‌ಲ್ಯಾಂಡ್‌ನ ಕ್ಯಾರಾರಾ ಸ್ಟೇಡಿಯಂನಲ್ಲಿ ಶನಿವಾರ (ಅಕ್ಟೋಬರ್ 9) ನಡೆದ ಆಸ್ಟ್ರೇಲಿಯಾ ಮಹಿಳೆಯರು ಮತ್ತು ಭಾರತದ ಮಹಿಳೆಯರ ನಡುವಿನ ದ್ವಿತೀಯ ಟಿ20ಐ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 4 ವಿಕೆಟ್ ಸುಲಭ ಜಯ ಗಳಿಸಿದೆ. ಬ್ಯಾಟರ್‌ಗಳ ನೀರಸ ಬ್ಯಾಟಿಂಗ್‌ನಿಂದಾಗಿ ಭಾರತ ಸೋಲಿನ ಬೆಲೆ ತೆತ್ತಿದೆ. ಇದರೊಂದಿಗೆ ಮೂರು ಪಂದ್ಯಗಳ ಈ ಟಿ20 ಸರಣಿಯನ್ನು ಆಸೀಸ್ ವಶಪಡಿಸಿಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತೀಯ ವನಿತಾ ತಂಡ, ಸ್ಮೃತಿ ಮಂಧಾನ 1, ಶಫಾಲಿ ವರ್ಮಾ 3, ಜೆಮಿಮಾ ರೋಡ್ರಿಗಸ್ 7, ಹರ್ಮನ್‌ಪ್ರೀತ್ ಕೌರ್ 28, ಯಶ್ತಿಕಾ ಭಾಟಿಯಾ 8, ರಿಚಾ ಘೋಷ್ 2, ದೀಪ್ತೀ ಶರ್ಮಾ 16, ಪೂಜಾ ವಸ್ತ್ರಕಾರ್ 37, ಶಿಖಾ ಪಾಂಡೆ 1, ರೇಣುಕಾ ಸಿಂಗ್ 1 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್ ಕಳೆದು 118 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಮಹಿಳೆಯರು, ಅಲಿಸಾ ಹೀಲಿ 4, ಬೆತ್ ಮೂನಿ 34, ಮೆಗ್ ಲ್ಯಾನಿಂಗ್ 15, ಆಶ್ಲೇ ಗಾರ್ಡ್ನರ್ 1, ಎಲ್ಲೀಸ್ ಪೆರ್ರಿ 2, ತಹ್ಲಿಯಾ ಮೆಕ್‌ಗ್ರಾತ್ 42, ನಿಕೊಲಾ ಕ್ಯಾರಿ 7, ಜಾರ್ಜಿಯಾ ವೇರ್ಹ್ಯಾಮ್ 10 ರನ್‌ನೊಂದಿಗೆ 19.1 ಓವರ್‌ಗೆ 6 ವಿಕೆಟ್ ಕಳೆದು 119 ರನ್ ಗಳಿಸಿದರು.
ಭಾರತದ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಟೇಲಾ ವ್ಲೆಮಿಂಕ್ 2, ಸೋಫಿ ಮೊಲಿನಕ್ಸ್ 2, ಆಶ್ಲೇ ಗಾರ್ಡ್ನರ್ 1, ಜಾರ್ಜಿಯಾ ವೇರ್ಹ್ಯಾಮ್ 1, ನಿಕೋಲ ಕ್ಯಾರಿ 1 ವಿಕೆಟ್ ಪಡೆದರೆ, ಆಸ್ಟ್ರೇಲಿಯಾ ಇನ್ನಿಂಗ್ಸ್‌ನಲ್ಲಿ ಭಾರತದ ರಾಜೇಶ್ವರಿ ಗಾಯಕ್ವಾಡ್ 3, ಶಿಖಾ ಪಾಂಡೆ 1, ಹರ್ಮನ್‌ಪ್ರೀತ್ ಕೌರ್ 1, ದೀಪ್ತಿ ಶರ್ಮಾ 1 ವಿಕೆಟ್ ನಿಂದ ಗಮನ ಸೆಳೆದರು.