ಮೆಗ್ ಲ್ಯಾನಿಂಗ್ ಅಕರ್ಷಕ ಶತಕ, ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾಕ್ಕೆ ಜಯ

ಬ್ರಿಸ್ಬೇನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ಮಹಿಳಾ ತಂಡ ಬ್ರಿಸ್ಬೇನ್‌ನ ಅಲನ್ ಬಾರ್ಡರ್ ಫೀಲ್ಡ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ವನಿತೆಯರ ವಿರುದ್ಧ 4 ವಿಕೆಟ್ ಜಯ ಗಳಿಸಿದೆ. ಆಸ್ಟ್ರೇಲಿಯಾ ನಾಯಕಿ ಮೆಗ್ ಲ್ಯಾನಿಂಗ್ ಆಕರ್ಷಕ ಶತಕದ ನೆರವಿನಿಂದ ಆಸೀಸ್ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡನೇ ಗೆಲುವು ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲೆಂಡ್ ಮಹಿಳಾ ತಂಡ, ನಟಾಲಿಯಾ ಡಾಡ್ 34, ನಾಯಕಿ ಸೋಫಿ ಡಿವೈನ್ 79, ಆಮಿ ಸ್ಯಾಟರ್ತ್‌ವೈಟ್ 69, ಕೇಟಿ ಮರ್ಟಿನ್ 26, ಮ್ಯಾಡಿ ಗ್ರೀನ್ 21 ರನ್ ಕೊಡುಗೆಯೊಂದಿಗೆ 50 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 252 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, ಅಲಿಸಾ ಹೀಲಿ 21, ರಾಚೆಲ್ ಹೇನ್ಸ್ 82 (89 ಎಸೆತ), ಮೆಗ್ ಲ್ಯಾನಿಂಗ್ 101 (96 ಎಸೆತ), ಸೋಫಿ ಮೊಲಿನಕ್ಸ್ 14, ಅನ್ನಾಬೆಲ್ ಸದರ್ಲ್ಯಾಂಡ್ 17 ರನ್ ಸೇರ್ಪಡೆಯೊಂದಿಗೆ 45.1 ಓವರ್‌ಗೆ 6 ವಿಕೆಟ್ ಕಳೆದು 255 ರನ್ ಮಾಡಿತು.
ನ್ಯೂಜಿಲೆಂಡ್ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಮೇಗನ್ ಶುಟ್ 2, ಜೆಸ್ ಜೊನಾಸ್ಸೆನ್ 4, ಸೋಫಿ ಮೊಲಿನಕ್ಸ್ 2 ವಿಕೆಟ್ ಪಡೆದರೆ, ಆಸ್ಟ್ರೇಲಿಯಾ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ನ ಅಮೆಲಿಯಾ ಕೆರ್ 3, ಹೇಲಿ ಜೆನ್ಸನ್ 1 ವಿಕೆಟ್‌ನೊಂದಿಗೆ ಗಮನ ಸೆಳೆದರು. ಮೆಗ್ ಲ್ಯಾನಿಂಗ್ ಪಂದ್ಯಶ್ರೇಷ್ಠೆ ಪ್ರಶಸ್ತಿ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications