ಹೇನ್ಸ್-ಹೀಲಿ ಅರ್ಧ ಶತಕ, ಕಿವೀಸ್ ವಿರುದ್ಧ ಆಸೀಸ್‌ಗೆ ದಾಖಲೆಯ ಜಯ

ಬ್ರಿಸ್ಬೇನ್: ಬ್ರಿಸ್ಬೇನ್‌ನ ಅಲನ್ ಬಾರ್ಡರ್ ಸ್ಟೇಡಿಯಂನಲ್ಲಿ ಬುಧವಾರ (ಅಕ್ಟೋಬರ್ 7) ನಡೆದ ನ್ಯೂಜಿಲೆಂಡ್ ಮಹಿಳೆಯರು ಮತ್ತು ಆಸ್ಟ್ರೇಲಿಯಾ ಮಹಿಳೆಯರ ನಡುವಿನ ಮೂರನೇ ಮತ್ತು ಕೊನೇಯ ಏಕದಿನ ಪಂದ್ಯದಲ್ಲಿ ಆಸೀಸ್ ಮಹಿಳಾ ತಂಡ ಭರ್ಜರಿ 232 ರನ್ ಗಳ ಜಯ ದಾಖಲಿಸಿದೆ.
ರಚೆಲ್ ಹೇನ್ಸ್ ಮತ್ತು ಅಲಿಸಾ ಹೀಲಿ ಆರ್ಕರ್ಷಕ ಅರ್ಧ ಶತಕದೊಂದಿಗೆ ಆತಿಥೇಯ ಆಸ್ಟ್ರೇಲಿಯಾ ಮಹಿಳಾ ತಂಡ ಭರ್ಜರಿ ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ. ನ್ಯೂಜಿಲೆಂಡ್ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಮೇಗನ್ ಶುಟ್ 2, ಜೆಸ್ ಜೊನಾಸ್ಸೆನ್ 2, ಆಶ್ಲೀ ಗಾರ್ಡ್ನರ್ 2, ಸೋಫಿ ಮೊಲಿನಕ್ಸ್ 2 ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ಮಹಿಳಾ ತಂಡ, ನಾಯಕಿ ರಚೆಲ್ ಹೇನ್ಸ್ 96, ಅಲಿಸಾ ಹೀಲಿ 87, ಅನ್ನಾಬೆಲ್ ಸದರ್ಲ್ಯಾಂಡ್ 35, ಆಶ್ಲೀ ಗಾರ್ಡ್ನರ್ 34, ಬೆತ್ ಮೂನಿ 29, ತಹ್ಲಿಯಾ ಮೆಕ್‌ಗ್ರಾತ್ 29 ರನ್ ಕೊಡುಗೆಯೊಂದಿಗೆ 50 ಓವರ್ ಮುಕ್ತಾಯಕ್ಕೆ 5 ವಿಕೆಟ್ ನಷ್ಟದಲ್ಲಿ 325 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಮಹಿಳೆಯರು, ಆಮಿ ಸ್ಯಾಟರ್ತ್‌ವೈಟ್ 41, ಮ್ಯಾಡಿ ಗ್ರೀನ್ 22, ಕೇಟಿ ಪಾರ್ಕಿನ್ಸ್ 6, ಹೀಲಿ ಜೆನ್ಸನ್ 6, ನಟಾಲಿಯಾ ಡಾಡ್ 5 ರನ್ ಸೇರ್ಪಡೆಯೊಂದಿಗೆ 27 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 93 ರನ್ ಬಾರಿಸಿ ಶರಣಾದರು. ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿ 3-0ಯಿಂದ ಆಸ್ಟ್ರೇಲಿಯಾ ವಶವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications