Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಕೆಟ್ ದಿಗ್ಗಜರ ಮೆಚ್ಚುಗೆ ಪಡೆದ ಕ್ಲಾರ್ಕ್ ಹುಡುಗರು

ಮೆಲ್ಬೋರ್ನ್, ಮಾ. 30 : ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಆಸ್ಟ್ರೇಲಿಯಾಕ್ಕೆ ಟ್ವಿಟ್ಟರ್ ನಲ್ಲಿ ಕ್ರಿಕೆಟ್ ದಿಗ್ಗಜರು ಅಭಿನಂದನೆ, ಶುಭಾಶಯ ಸಲ್ಲಿಸಿದ್ದಾರೆ. 45 ದಿನಗಳಿಂದ ನಡೆಯುತ್ತಿದ್ದ ಕ್ರಿಕೆಟ್ ಹಬ್ಬಕ್ಕೆ ತೆರೆಬಿದ್ದಿದ್ದು ತವರಿನಲ್ಲಿಯೇ ಆಸ್ಟ್ರೇಲಿಯಾ ಕಿರೀಟ ಮುಡಿಗೇರಿಸಿಕೊಂಡ ತೃಪ್ತಿ ಪಡೆದಿದೆ.

ನಾಯಕ ಮೈಕಲ್ ಕ್ಲಾರ್ಕ್ ಗೆ ವಿಶ್ವಕಪ್ ಗೆಲುವಿನ ವಿದಾಯ ನೀಡುವಲ್ಲಿ ಆಸೀಸ್ ಆಟಗಾರರು ಸಫಲರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಏಳು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿ 5 ನೇ ಬಾರಿಗೆ ವಿಶ್ವಕಪ್ ಗೆ ಮುತ್ತಿಟ್ಟ ಆಸೀಸ್ ಗೆ ವಿವಿಎಸ್ ಲಕ್ಷ್ಮಣ್, ಗಿಲೆಸ್ಪಿ, ಮೆಗ್ ಗ್ರಾ, ಕಾಲಿಂಗ್ ವುಡ್, ಗೈಲ್ ಸೇರಿದಂತೆ ಹಾಲಿ ಮತ್ತು ಮಾಜಿ ಆಟಗಾರರು ಅಭಿನಂದನೆ ಸಲ್ಲಿಸಿದ್ದಾರೆ.[ಕೊನೆಗೂ ತವರು ನೆಲದಲ್ಲಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ]

ಗ್ಲೆನ್ ಮೆಗ್ ಗ್ರಾ

ಪಂದ್ಯಾವಳಿಯ ಸರಣಿ ಪುರುಷೋತ್ತಮನಾದ ಸ್ಟಾರ್ಕ್ ಅವರೆ ಮೊದಲು ನಿಮಗೆ ಧನ್ಯವಾದ. ನಿಮ್ಮ ಬೌಲಿಂಗ್ ತಂತ್ರಗಾರಿಕೆ ಗೆಲುವಲ್ಲಿ ಮಹತ್ತರರ ಪಾತ್ರ ವಹಿಸಿತು.

ಪೌಲ್ ಕಾಲಿಂಗ್ ವುಡ್

ಉತ್ತಮ ಹೋರಾಟ ನೀಡಿದ ನ್ಯೂಜಿಲೆಂಡ್, ಅತ್ಯುತ್ತಮ ಪಟ್ಟಕ್ಕೆ ಏರಿದ ಆಸ್ಟ್ರೇಲಿಯಾ, ಮತ್ತೊಮ್ಮೆ ವಿಶ್ವಕಪ್ ಶಿಖರವೇರಿದ ನಿಮಗೆ ಅಭಿನಂದನೆ.

ಕ್ರಿಸ್ ಗೇಲ್

ಮೈಕಲ್ ಕ್ಲಾರ್ಕ್ ಮತ್ತು ಆಸೀಸ್ ಆಟಗಾರರಿಗೆ ಅಭಿನಂದನೆ. ನ್ಯೂಜಿಲೆಂಡ್ ಗೂ ತಕ್ಕ ಗೌರವ ಸಿಗಬೇಕು.

ಮೊಹಮ್ಮದ್ ಕೈಫ್

ಮತ್ತೊಮ್ಮೆ ವಾಂಪಿಯನ್ ಪಟ್ಟಕ್ಕೆ ಬಂದು ಕುಳಿತವರಿಗೆ ಶುಭಾಶಯ. 5 ನೇ ವಿಶ್ವಕಪ್ ಮುಕುಟವೇರಿಸಿಕೊಂಡ ಕೀರ್ತಿ ನಿಮ್ಮದಾಗಿದೆ.

ಜಾಸನ್ ಗಿಲೆಸ್ಪಿ

ನಿಮ್ಮ (ಆಸ್ಟ್ರೇಲಿಯಾ) ಪ್ರದರ್ಶನ ಹೊಗಳಲು ಸಾಧ್ಯವೇ ಇಲ್ಲ. ನ್ಯೂಜಿಲೆಂಡ್ ಗೂ ಇದೊಂದು ಸ್ಮರಣೀಯ ಪಂದ್ಯಾವಳಿಯಾಯಿತು.

ವಿವಿಎಸ್ ಲಕ್ಷ್ಮಣ್

ನ್ಯೂಜಿಲೆಂಡ್ ಗೆ ಅದೃಷ್ಟ ಕೈ ಕೊಟ್ಟಿತ್ತು. ಅಗ್ರೇಸ್ಸಿವ್ ಕ್ರಿಕೆಟ್ ಆಡಿದ ನೀವು ಅಭಿನಂದನೆಗೆ ಅರ್ಹರು. ಇದೇ ಬಗೆಯ ಆಟವನ್ನು ಮುಂದುವರಿಸಿಕೊಂಡು ಹೋಗಿ..

ಜಾಕಸ್ ಕಾಲೀಸ್

ಆಸ್ಟ್ರೇಲಿಯಾಕ್ಕೆ ಅಭಿನಂದನೆ. ಹೋರಾಟ ತೋರಿದ ನ್ಯೂಜಿಲೆಂಡ್ ಗೂ ಅಭಿನಂದನೆ. ವಿಶ್ವಕ್ಕೆ ಒಂದು ಅತ್ಯುತ್ತಮ ಕ್ರಿಕೆಟ್ ತೋರಿಸಿಕೊಟ್ಟಿರಿ.

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+