Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರೋಹಿತ್ ಶರ್ಮಾ ವಿರುದ್ಧ ನಮ್ಮ ಯೋಜನೆ ಸಿದ್ಧವಾಗಿದೆ ಎಂದ ಆಸಿಸ್ ಸ್ಪಿನ್ನರ್

Australian bowlers have plans for Rohit Sharma, says Nathan Lyon

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ಗೆ ಟೀಮ್ ಇಂಡಿಯಾ ಸಜ್ಜಾಗಿದೆ. ಮೊದಲ ಎರಡು ಪಂದ್ಯಗಳಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಎರಡು ತಂಡಗಳು ಕೂಡ ಒಂದೊಂದು ಗೆಲುವನ್ನು ಸಾಧಿಸಿದ್ದು ಸರಣಿ ಸಾಕಷ್ಟು ಕುತೂಹಲ ಮೂಡುವಂತೆ ಮಾಡಿದೆ. ಈ ಮಧ್ಯೆ ಟೀಮ್ ಇಂಡಿಯಾಗೆ ಅನುಭವಿ ಆಟಗಾರ ರೋಹಿತ್ ಶರ್ಮಾ ಸೇರಿಕೊಂಡಿರುವುದು ಟೀಮ್ ಇಂಡಿಯಾಗೆ ಬಲ ಬಂದಂತಾಗಿದೆ.

ಟೀಮ್ ಇಂಡಿಯಾ ಪಾಳಯವನ್ನು ಅನುಭವಿ ರೋಹಿತ್ ಶರ್ಮಾ ಸೇರಿಕೊಂಡಿರುವುದು ಆಸ್ಟ್ರೇಲಿಯಾಗೆ ಸಹಜವಾಗಿಯೇ ಚಿಂತಿಸುವಂತೆ ಮಾಡಿದೆ. ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್ ನಥನ್ ಲಿಯಾನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಆಸ್ಟ್ರೇಲಿಯಾ ತಂಡ ರೋಹಿತ್ ಶರ್ಮಾ ವಿರುದ್ಧ ಉತ್ತಮವಾದ ಯೋಜನೆಯನ್ನು ಹೊಂದಿದೆ ಎಂದಿದ್ದಾರೆ.

ರೋಹಿತ್ ಶರ್ಮಾ ಅವರನ್ನು ಮೂರನೇ ಪಂದ್ಯದಲ್ಲಿ ಕಟ್ಟಿಹಾಕಲು ಆಸಿಸ್ ಬೌಲರ್‌ಗಳು ಸಾಕಷ್ಟು ಹೋಮ್‌ವರ್ಕ್‌ಗಳನ್ನು ನಡೆಸುತ್ತಿದ್ದಾರೆ. ಜನವರಿ 7ರಿಂದ ಸಿಡ್ನಿಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಕಾಣಿಸಿಕೊಲ್ಳುವ ಸಾಧ್ಯತೆ ಹೆಚ್ಚಿದೆ.

"ಖಂಡಿತವಾಗಿಯೂ ರೋಹಿತ್ ಶರ್ಮಾ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಹೀಗಾಗಿ ನಮ್ಮ ಬೌಲರ್‌ಗಳಿಗೆ ಮುಂದೆ ದೊಡ್ಡ ಸವಾಲು ಎದುರಾಗಲಿದೆ. ಆದರೆ ನಾವು ಅವರ ವಿಚಾರದಲ್ಲಿ ಹೇಗೆ ಮುಂದುವರಿಯಬೇಕು ಎಂದು ಸಿದ್ಧತೆ ನಡೆಸಿದ್ದೇವೆ. ನಮಗೆ ನಾವು ಸವಾಲು ಹಾಕಿಕೊಳ್ಳುವುದನ್ನು ನಾವು ಇಷ್ಟಪಡುತ್ತೇವೆ" ಎಂದು ನಥನ್ ಲಿಯಾನ್ ಹೇಳಿದ್ದಾರೆ.

"ಆತ(ರೋಹಿತ್ ಶರ್ಮಾ) ಭಾರತೀಯ ವಿಭಾಗಕ್ಕೆ ದೊಡ್ಡ ಬಲವಾಗಲಿದ್ದಾರೆ. ಆತನನ್ನು ಯಾರು ಔಟ್ ಮಾಡುತ್ತಾರೆ ಎಂಬುದು ಈಗ ಕುತೂಹಲ ಮೂಡಿಸಿದೆ. ಆದರೆ ನಾವು ರೋಹಿತ್ ಶರ್ಮಾ ಅವರನ್ನು ಕಟ್ಟಿಹಾಕು ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಆತನನ್ನು ಶೀಘ್ರದಲ್ಲಿ ಔಟ್ ಮಾಡುವ ನಿರೀಕ್ಷೆಯಲ್ಲಿ ನಾವು ಇದ್ದೇವೆ. ಆದರೆ ಕ್ರಿಕೆಟಿಗನಾಗಿ ರೋಹಿತ್ ಶರ್ಮಾ ಎಷ್ಟು ಉತ್ತಮರು ಎಂಬುದನ್ನು ನಾವು ಗೌರವಿಸುತ್ತೇವೆ" ಎಂದು ನಥನ್ ಲಿಯಾನ್ ಹೇಳಿಕೆಯನ್ನು ನೀಡಿದ್ದಾರೆ.

Story first published: Monday, January 4, 2021, 16:54 [IST]
Other articles published on Jan 4, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+