Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

31ನೇ ವಯಸ್ಸಿಗೆ ನಿವೃತ್ತಿ ಘೋಷಣೆ ಮಾಡಿದ ಆಸ್ಟ್ರೇಲಿಯಾದ ನಾಯಕಿ ಮೆಗ್ ಲ್ಯಾನ್ನಿಂಗ್

ಆಸ್ಟ್ರೇಲಿಯಾ ಕ್ರಿಕೆಟ್ ನಾಯಕಿ ಮೆಗ್ ಲ್ಯಾನಿಂಗ್ ಅವರು 31 ನೇ ವಯಸ್ಸಿನಲ್ಲಿ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಅಚ್ಚರಿಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಲ್ಯಾನಿಂಗ್ 2010 ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಈವರೆಗೆ ಒಟ್ಟು ಆರು ಟೆಸ್ಟ್, 103 ಏಕದಿನ ಪಂದ್ಯ ಹಾಗೂ 132 ಟಿ20 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದಾರೆ. ಒಟ್ಟಾರೆಯಾಗಿ ಲ್ಯಾನ್ನಿಂಗ್ ಆಸ್ಟ್ರೇಲಿಯಾ ಪರವಾಗಿ 241 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ.

13 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದ ಬಳಿಕ ನಿವೃತ್ತಿಯನ್ನು ಪಡೆಯಲು ಇದು ಅತ್ಯಂತ ಸೂಕ್ತವಾದ ಸಂದರ್ಭ ಎಂದು ಮೆಗ್ ಲ್ಯಾನ್ನಿಂಗ್ ಹೇಳಿಕೊಂಡಿದ್ದಾರೆ. ಇದೀಗ ಲ್ಯಾನ್ನಿಂಗ್ ಅವರ ನಿವೃತ್ತಿಯಿಂದಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಈಗ ನೂತನ ನಾಯಕಿಯನ್ನು ಕಂಡುಕೊಳ್ಳಬೇಕಿದೆ.

Australian captain Meg Lanning announced retirement for all formats of international cricket

ಮುಂದಿನ ತಿಂಗಳು ಆಸ್ಟ್ರೇಲಿಯಾ ಭಾರತಕ್ಕೆ ಆಗಮಿಸಲಿದ್ದು ಬಹು ಮಾದರಿಯ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಬೇಕಿದೆ. ಈ ಸರಣಿ ನೂತನ ನಾಯಕಿಗೆ ಕಠಿಣ ಸವಾಲಾಗಿರಲಿದೆ. ಪ್ರಸ್ತುತ ಉಪನಾಯಕಿಯಾಗಿರುವ ಅಲಿಸಾ ಹೀಲಿ ಮಹಿಳಾ ಬಿಗ್‌ಬ್ಯಾಶ್ ಸಂದರ್ಭದಲ್ಲಿ ತಮ್ಮ ನಾಯಿಯಿಂದ ಕಡಿತಕ್ಕೆ ಒಳಗಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತದ ಪ್ರವಾಸದ ವೇಳೆಗೆ ಅವರು ಲಭ್ತವಾಗುವ ಬಗ್ಗೆ ಖಚಿತತೆಯಿಲ್ಲ. ಹೀಗಾಗಿ ಆಸಿಸ್ ತಂಡವನ್ನು ಮುನ್ನಡೆಸುವವರು ಯಾರು ಎನ್ನುವುದು ಪ್ರಶ್ನೆಯಾಗಿದೆ.

"ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾಗುವ ನಿರ್ಧಾರ ನಿಜಕ್ಕೂ ಬಹಳ ಕಠಿಣವಾದದ್ದು. ಆದರೆ ಈಗ ನನಗೆ ಇದು ಸರಿಯಾದ ಸಮಯ ಎಂದು ಭಾಸವಾಗಿದೆ. ನಾನು 13 ವರ್ಷಗಳ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಬಹಳ ಅದ್ಭುತವಾಗಿ ಆನಂದಿಸಿದ್ದೇನೆ. ಆದರೆ ಈಗ ನನಗೆ ಹೊಸತನಕ್ಕೆ ತೆರದುಕೊಳ್ಳಲು ಸರಿಯಾದ ಸಮಯ ಎಂದು ಅನಿಸಿದೆ" ಎಂದಿದ್ದಾರೆ ಮೆಗ್ ಲ್ಯಾನ್ನಿಂಗ್.

ನಿವೃತ್ತಿಯ ನಿರ್ಧಾರವನ್ನು ಪ್ರಕಟಸಿದ ನಂತರ ಅವರು ತಮ್ಮ ಸಹ ಆಟಗಾರರು ಮತ್ತು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು. ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಲ್ಯಾನಿಂಗ್ ಕೊನೆಯ ಬಾರಿಗೆ ತನ್ನ ದೇಶವನ್ನು ಪ್ರತಿನಿಧಿಸಿದ್ದರು. ಬಳಿಕ ಆರೋಗ್ಯದ ಕಾರಣಗಳಿಂದ ಅನಿರ್ದಿಷ್ಟಾವಧಿಯ ವಿಶ್ರಾಂತಿಗೆ ಮೊರೆ ಹೋಗಿದ್ದರು.

ಲ್ಯಾನಿಂಗ್ ಮೂಲತಃ ಸಿಂಗಾಪುರದವರಾಗಿದ್ದು ಡಿಸೆಂಬರ್ 30, 2010ರಂದು ನ್ಯೂಜಿಲೆಂಡ್ ವಿರುದ್ಧದ ಟಿ20ಐ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆಸ್ಟ್ರೇಲಿಯಾ ಪರವಾಗಿ ಪದಾರ್ಪಣೆ ಮಾಡಿದ್ದಾರೆ. ತನ್ನ ಅಸಾಧಾರಣ ಕೌಶಲ್ಯಗಳು ಮತ್ತು ನಾಯಕತ್ವದ ಗುಣಗಳನ್ನು ಸಣ್ಣ ವಯಸ್ಸಿನಲ್ಲಿಯೇ ವ್ಯಕ್ತಪಡಿಸಿದ್ದ ಅವರಿಗೆ 21 ನೇ ವಯಸ್ಸಿನಲ್ಲಿ ತಂಡವನ್ನು ಮುನ್ನಡೆಸುವ ಅವಕಾಶ ದೊರೆತಿತ್ತು. 2014ರಲ್ಲಿ ನಾಯಕಿಯಾಗಿದ್ದ ಜೋಡಿ ಫೀಲ್ಡ್ಸ್ ಗಾಯದಿಂದ ಅಲಭ್ಯವಾಗಿದ್ದ ಸಂದರ್ಭದಲ್ಲಿ ಲ್ಯಾನ್ನಿಂಗ್‌ಗೆ ತಂಡವನ್ನು ಮುನ್ನಡೆಸುವ ಅವಕಾಶ ದೊರೆತಾದ ತಂಡವನ್ನು ಮುನ್ನಡೆಸಿದ ಅತ್ಯಂತ ಕಿರಿಯ ಮಹಿಳೆ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದ್ದರು.

Story first published: Thursday, November 9, 2023, 8:57 [IST]
Other articles published on Nov 9, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+