Pat Cummins: ಫೈನಲ್‌ನಲ್ಲಿ 6 ವಿಕೆಟ್ ಪಡೆದು ಹಲವು ದಾಖಲೆ ಬರೆದ ಆಸೀಸ್ ನಾಯಕ ಕಮಿನ್ಸ್
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಬಿಗುವಿನ ದಾಳಿ ನಡೆಸಿ ಅಬ್ಬರಿಸಿದ್ದಾರೆ. ಗುರುವಾರ ನಡೆದ ಎರಡನೇ ಪಂದ್ಯದಲ್ಲಿ ಶಿಸ್ತು ಬದ್ಧ ದಾಳಿ ಸಂಘಟಿಸಿದ ಪ್ಯಾಟ್, ದಕ್ಷಿಣ ಆಫ್ರಿಕಾದ ಬ್ಯಾಟರ್‍ಗಳನ್ನು ಕಾಡಿದರು. ಇವರು ಎರಡನೇ ದಿನ ಆರು ವಿಕೆಟ್ ಪಡೆಯುವ ಮೂಲಕ ಆರ್ಭಟಿಸಿದರು. ಈ ಮೂಲಕ ಪ್ಯಾಟ್ ಕಮಿನ್ಸ್ ಒಂದೇ ಇನಿಂಗ್ಸ್‌ನಲ್ಲಿ ಹಲವು ದಾಖಲೆಯನ್ನು ಬರೆದರು.
ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಕಮಿನ್ಸ್ ಬಿಗುವಿನ ದಾಳಿ ನಡೆಸಿದರು. ಇವರು ಮೊದಲ ಇನಿಂಗ್ಸ್‌ನಲ್ಲಿ 18.1 ಓವರ್ ಬೌಲ್ ಮಾಡಿ ಕೇವಲ 28 ರನ್ ನೀಡಿ 6 ವಿಕೆಟ್ ಕಬಳಿಸಿದರು. ಈ ಮೂಲಕ ಪ್ಯಾಟ್ ಕಮಿನ್ಸ್ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್‌ಗಳನ್ನು ಪಡೆದ ಹಿರಿಮೆಯನ್ನು ತನ್ನದಾಗಿಸಿಕೊಂಡರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 300ಕ್ಕೂ ಹೆಚ್ಚು ವಿಕೆಟ್ ಪಡೆದ ಆಸೀಸ್ ತಂಡದ 8ನೇ ಬೌಲರ್ ಎಂಬ ಹಿರಿಮೆಗೆ ಪ್ಯಾಟ್ ಕಮಿನ್ಸ್ ಪಾತ್ರರಾದರು. ಇವರು ಬೆಂಕಿಯಂತಹ ಚೆಂಡುಗಳಿಗೆ ಉತ್ತರಿಸುವಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟರ್‍ಗಳು ವಿಫಲರಾದರು. ಕಮಿನ್ಸ್ ತಮ್ಮ 68ನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿ ಸಾಧನೆ ಮಾಡಿದರು.

ನಾಯಕನಾಗಿ ಪ್ಯಾಟ್ ಕಮಿನ್ಸ್ ಟೆಸ್ಟ್‌ನಲ್ಲಿ 9ನೇ ಬಾರಿಗೆ 5 ವಿಕೆಟ್ ಪಡೆದಿದ್ದಾರೆ. ಈ ಮೂಲಕ ನಾಯಕನಾಗಿ ಅತಿ ಹೆಚ್ಚು ಐದು ವಿಕೆಟ್‌ಗಳನ್ನು ಪಡೆದ ಜಂಟಿ ಎರಡನೇ ಸ್ಥಾನ ಪಡೆದರು. ಇವರು ರಿಚೀ ಬೆನಾಡ್ ಅವರ ಸಾಧನೆಯನ್ನು ಸರಿ ಗಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ವಿಕೆಟ್ ಗೊಂಚಲು ಪಡೆದ ಹೆಗ್ಗಳಿಕೆ ಪಾಕ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಅವರಿಗೆ ಸಲ್ಲುತ್ತದೆ. ಇವರು 12 ಬಾರಿ ಈ ಸಾಧನೆ ಮಾಡಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಭಾರತದ ಬಿಷನ್ ಸಿಂಗ್ ಬೇಡಿಗೂ ಸ್ಥಾನವಿದ್ದು, ಇವರು 8 ಬಾರಿ ನಾಯಕರಾಗಿ 5 ವಿಕೆಟ್ ಪಡೆದಿದ್ದಾರೆ.
ಫೈನಲ್‌ನಲ್ಲಿ 5 ವಿಕೆಟ್ ಸಾಧನೆ
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ 5ಕ್ಕೂ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ ಮೊದಲ ನಾಯಕ ಎಂಬ ಗರಿ ಇವರದ್ದಾಗಿದೆ. ಐಸಿಸಿ ಟೆಸ್ಟ್ ಫೈನಲ್‌ನಲ್ಲಿ ಯಾವ ನಾಯಕರು ಈ ಸಾಧನೆ ಮಾಡಿರಲಿಲ್ಲ. ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ನಾಯಕರಾಗಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ನಾಯಕ ಎಂಬ ಹಿರಿಮೆ ಇಮ್ರಾನ್ ಖಾನ್ (187 ವಿಕೆಟ್) ಅವರದ್ದಾಗಿದೆ. ರಿಚೀ ಬೆನಾಡ್ (138 ವಿಕೆಟ್) ಎರಡನೇ ಸ್ಥಾನದಲ್ಲಿದ್ದಾರೆ.

ಇನ್ನು ಲಾರ್ಡ್ಸ್ ಅಂಗಳದಲ್ಲಿ ಬೆಸ್ಟ್ ಬೌಲಿಂಗ್ ಪ್ರದರ್ಶನ ನೀಡಿದ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇವರು 28 ರನ್ ನೀಡಿ 6 ವಿಕೆಟ್ ಪಡೆದಿದ್ದಾರೆ. ಇದಕ್ಕೂ ಮೊದಲು ಬಾಬ್ ವಿಲ್ಲೆಸ್ 101 ರನ್ ನೀಡಿ 6 ವಿಕೆಟ್ ಪಡೆದು ಅಬ್ಬರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications