ತಪ್ಪಾಗಿದೆ ಕ್ಷಮಿಸಿಬಿಡಿ: ಆಸ್ಟ್ರೇಲಿಯಾ ಕೋಚ್ ಡೆರೆನ್ ಲೆಹ್ಮನ್

Posted By:

'ತಪ್ಪಾಗಿದೆ, ಕ್ಷಮಿಸಿಬಿಡಿ' ಆಸ್ಟ್ರೇಲಿಯಾ ತಂಡದ ಕೋಚ್ ಡೆರೆನ್ ಲೆಹ್ಮನ್ ಆಸ್ಟ್ರೇಲಿಯಾ ಕ್ರಿಕೆಟಿಗರಲ್ಲಿ ಮನವಿ ಮಾಡಿದ್ದಾರೆ.

ಚೆಂಡು ವಿರೂಪ ಪ್ರಕರಣದ ಬಳಿಕ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮುಖಾ-ಮುಖಿಯಾದ ಲೆಹ್ಮನ್ ತಮ್ಮ ಮತ್ತು ತಂಡದ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಅವರು ದೊಡ್ಡ ತಪ್ಪು ಮಾಡಿದ್ದಾರೆ ಅವರು ಕೆಟ್ಟವರಲ್ಲ, ಅವರೂ ಮನುಷ್ಯರು ನನ್ನಂತೆ, ಎಲ್ಲರಂತೆ ಅವರೂ ತಪ್ಪು ಮಾಡಿದ್ದಾರೆ ಹಾಗೂ ಶಿಕ್ಷೆ ಅನುಭವಿಸುತ್ತಿದ್ದಾರೆ, ಅವರಿನ್ನೂ ಯುವಕರು ಜನ ಅವರಿಗೆ ಇನ್ನೊಂದು ಅವಕಾಶ ಕೊಡುತ್ತಾರೆಂದು ನಂಬಿದ್ದೇನೆ ಎಂದು ಅವರು ಭಾವುಕರಾಗಿ ಹೇಳಿದರು.

ಇನ್ನು ಮುಂದೆ ನಾನೂ ಸೇರಿದಂತೆ ಆಸ್ಟ್ರೇಲಿಯಾ ತಂಡವು ತಮ್ಮ ಆಟದ ಶೈಲಿಯನ್ನು ಬದಲಾಯಿಸಿಕೊಳ್ಳಲಿದೆ ಎಂದ ಅವರು ಆಸ್ಟ್ರೇಲಿಯಾ ತಂಡವು ತನ್ನ ಆಕ್ರಮಣಕಾರಿ ಶೈಲಿಯನ್ನು ತೊರೆಯಲಿದೆ ಎಂಬ ಸೂಚನೆ ನೀಡಿದ್ದಾರೆ.

ಡೆರೆನ್ ಲೆಹ್ಮನ್ ಕೂಡಾ ಭಾಗಿ

ಡೆರೆನ್ ಲೆಹ್ಮನ್ ಕೂಡಾ ಭಾಗಿ

ಚೆಂಡು ವಿರೂಪ ಪ್ರಕರಣದ ತಪ್ಪಿತಸ್ಥರಾದ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್‌ ಬ್ಯಾಂಕ್ರೋಫ್ಟ್‌ ಅವರುಗಳನ್ನು ಕಠಿಣ ಶಿಕ್ಷಗೆ ಗುರಿ ಪಡಿಸಿದೆ. ಡೆರೆನ್ ಲೆಹ್ಮನ್ ಕೂಡಾ ಚೆಂಡು ವಿರೂಪ ಪ್ರಕರಣದ ಆರೋಪಿಗಳಲ್ಲೊಬ್ಬರಾಗಿದ್ದು ಅವರ ಮೇಲೂ ತೂಗು ಕತ್ತಿ ನೇತಾಡುತ್ತಿದೆ.

ವಾಕಿ ಟಾಕಿ ಮೂಲಕ ಸೂಚನೆ

ವಾಕಿ ಟಾಕಿ ಮೂಲಕ ಸೂಚನೆ

ವಿಡಿಯೋ ದೃಶ್ಯಾವಳಿಯ ಪ್ರಕಾರ ಡೆರೆನ್ ಲೆಹ್ಮನ್ ಮೊದಲು ಪೆವಿಲಿಯನ್‌ನಲ್ಲಿ ಕೂತಿದ್ದ 12ನೇ ಆಟಗಾರನಿಗೆ ಸ್ಯಾಂಡ್ ಪೇಪರ್ ಅನ್ನು ತೆಗೆದುಕೊಂಡು ಅಂಗಳಕ್ಕೆ ಹೋಗಲು ವಾಕಿ ಟಾಕಿ ಮೂಲಕ ಹೇಳುತ್ತಾರೆ, ಅವರ ಆಜ್ಞೆಯಂತೆ 12ನೇ ಆಟಗಾರ ಸ್ಯಾಂಡ್ ಪೇಪರ್‌ ಅನ್ನು ಒಳಗೆ ತೆಗೆದುಕೊಂಡು ಹೋಗಿ ಬ್ಯಾಂಕ್ರೋಫ್ಟ್‌ ಕೈಗೆ ನೀಡುತ್ತಾನೆ.

ಲೆಹ್ಮನ್‌ ಮೇಲೂ ಕ್ರಮ ಸಾಧ್ಯತೆ

ಲೆಹ್ಮನ್‌ ಮೇಲೂ ಕ್ರಮ ಸಾಧ್ಯತೆ

ಪ್ರಸ್ತುತ ಲೆಹ್ಮನ್ ಅವರ ಸ್ಥಾನಕ್ಕೆ ಯಾವುದೇ ಕುತ್ತು ಬರೆದೆ ಇದ್ದರೂ ಸಹ ಕ್ರಿಕೆಟ್ ಆಸ್ಟ್ರೇಲಿಯಾವು ಆಂತರಿಕ ತನಿಖೆ ಒಂದನ್ನು ನಡೆಸುತ್ತಿದ್ದು ತನಿಖೆ ವರದಿ ಬಂದ ನಂತರ ಲೆಹ್ಮನ್ ವಿರುದ್ಧ ಕ್ರಮ ಜರುಗಿಸುವ ಸಾಧ್ಯತೆಯೂ ಇದೆ.

ನನ್ನಿಂದಲೇ ಆಟದ ಘನತೆಗೆ ಕುತ್ತು

ನನ್ನಿಂದಲೇ ಆಟದ ಘನತೆಗೆ ಕುತ್ತು

ಇನ್ನು ಘಟನೆಗೆ ಸಂಬಂಧಿಸಿದಂತೆ ಡೇವಿಡ್ ವಾರ್ನರ್ ಮೌನ ಮುರಿದಿದ್ದು, ಚೆಂಡು ವಿರೂಪ ಪ್ರಕರಣದಲ್ಲಿ ನನ್ನ ತಪ್ಪನ್ನು ನಾನು ಒಪ್ಪಿಕೊಳ್ಳುತ್ತೇನೆ, ಯಾವ ಕ್ರೀಡೆಯನ್ನು ನಾನು ಬಾಲ್ಯದಿಂದಲೂ ಪ್ರೀತಿಸುತ್ತಲೆ ಬಂದಿದ್ದೆನೊ ಆ ಕ್ರೀಡೆಗೆ ನನ್ನಿಂದಲೇ ಕಲೆ ಆಗಿದೆ. ತಪ್ಪುಗಳಿಂದ ಕ್ರೀಡೆಯ ಘನತೆಗೆ ಕುಂದುಂಟಾಗಿದೆ. ಈಗ ನಾನು ಸಿಡ್ನಿಗೆ ವಾಪಾಸ್ಸು ಹೋಗುತ್ತಿದ್ದೇನೆ, ಸದ್ಯ ನಾನೊಂದು ದೀರ್ಘವಾದ ಉಸಿರು ತೆಗೆದುಕೊಂಡು ಆಲೋಚನೆಗೆ ಒಳಗಾಗಬೇಕಿದೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಸಚಿನ್ ಟ್ವೀಟ್

ಘಟನೆ ಬಗ್ಗೆ ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಕೂಡಾ ಟ್ವೀಟ್ ಮಾಡಿದ್ದು 'ಗೆಲ್ಲುವು ಅತ್ಯಂತ ಮಹತ್ವದ್ದು ಆದರೆ ಹೇಗೆ ಗೆಲ್ಲುತ್ತೇವೆ ಎನ್ನುವುದು ಎಲ್ಲದಿಕ್ಕಂತಲೂ ಹೆಚ್ಚು ಮಹತ್ವದ್ದು, ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಕ್ರಿಕೆಟ್‌ನ ಘನತೆಯನ್ನು ಎತ್ತಿ ಹಿಡಿಲು ಸರಿಯಾದ ಕ್ರಮ ಕೈಗೊಂಡಿದೆ' ಎಂದು ಟ್ವೀಟ್ ಮಾಡುವ ಮೂಲಕ ತಪ್ಪಿತಸ್ಥರಿಗೆ ವಿಧಿಸಿರುವ ಶಿಕ್ಷೆಯನ್ನು ಬೆಂಬಲಿಸಿದ್ದಾರೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, March 29, 2018, 13:16 [IST]
Other articles published on Mar 29, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ