ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

34 ವರ್ಷಗಳ ಬಳಿಕ ಏಕದಿನ Rankನಲ್ಲಿ ಆಸ್ಟ್ರೇಲಿಯಾ ತೀರಾ ಕುಸಿತ

ಏಕದಿನ rankingನಲ್ಲಿ ಆಸ್ಟ್ರೇಲಿಯಾ ತೀರಾ ಕುಸಿತ | Oneindia Kannada
Australian cricket team slumps to lowest ODI ranking in 34 years

ಸಿಡ್ನಿ, ಜೂ. 19: ಐದುಬಾರಿ ವಿಶ್ವಕಪ್ ಗೆದ್ದ ತಂಡವೆಂಬ ಹೆಗ್ಗಳಿಕೆ ಪಾತ್ರವಾಗಿರುವ ಆಸ್ಟ್ರೇಲಿಯಾ 34 ವರ್ಷಗಳ ಬಳಿಕ ಮತ್ತೆ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ತೀರಾ ಕೆಳಗಿಳಿದು ನಕಾರಾತ್ಮಕವಾಗಿ ಗುರುತಿಸಿಕೊಂಡಿದೆ.

ಚೆಂಡು ವಿರೂಪ: ಚಂಡಿಮಾಲ್ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?ಚೆಂಡು ವಿರೂಪ: ಚಂಡಿಮಾಲ್ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡು ಪಂದ್ಯಗಳನ್ನು ಸೋತು ಆಸ್ಟ್ರೇಲಿಯಾ 0-2ರ ಹಿನ್ನೆಡೆಯಲ್ಲಿರುವುದು ರ್ಯಾಂಕ್ ಕುಸಿತಕ್ಕೆ ಕಾರಣವಾಗಿದೆ. ಇಂಗ್ಲೆಂಡ್ ವಿರುದ್ಧ ಮಂಗಳವಾರ ಮೂರನೇ ಪಂದ್ಯ ನಡೆಯಲಿದ್ದು, ಅದರಲ್ಲಿ ಪ್ರತಿಷ್ಠೆಗಾದರೂ ಆಸೀಸ್ ಗೆಲ್ಲಲೇಬೇಕಾಗಿದೆ.

ಇಂಗ್ಲೆಂಡ್ ವಿರುದ್ಧ ಎದುರಾದ ಎರಡು ಸೋಲುಗಳು ಆಸ್ಟ್ರೇಲಿಯಾದ 102 ರೇಟಿಂಗ್ ಪಾಯಿಂಟ್ಸ್ ನ್ನು ಕಸಿದುಕೊಂಡಿದೆ. ಹೀಗಾಗಿ ಕ್ರಿಕೆಟ್ ಬಲಾಡ್ಯ ತಂಡವಾಗಿದ್ದ ಆಸ್ಟ್ರೇಲಿಯಾ ಪಾಕಿಸ್ತಾನಕ್ಕಿಂತಲೂ ಕೆಳಸ್ಥಾನದಲ್ಲಿದೆ. ಅಂದರೆ ಏಕದಿನ ವಿಶ್ವರ್ಯಾಂಕಿಂಗ್ ನಲ್ಲಿ ಸದ್ಯ 6ನೇ ಸ್ಥಾನದಲ್ಲಿ ಆಸ್ಟ್ರೇಲಿಯಾವಿದೆ.

ಈ ಹಿಂದೆ ಜನವರಿ 1984ರಂದು ಆಸ್ಟ್ರೇಲಿಯಾ 6ನೇ ಸ್ಥಾನಕ್ಕೆ ಕುಸಿದಿತ್ತು. ಈಗಿರುವ ಆಸ್ಟ್ರೇಲಿಯಾ ತಂಡದ ಸದಸ್ಯರಲ್ಲಿ ಅನುಭವಿ ಆಟಗಾರ ಶಾನ್ ಮಾರ್ಷ್ ಅವರು ಆಸ್ಟ್ರೇಲಿಯಾ ಮೊದಲ ಬಾರಿ ಕುಸಿತ ಕಂಡಿದ್ದ ಸರಿ ಸುಮಾರು 34 ವರ್ಷಗಳ ಹಿಂದೆ ಜನಿಸಿದ್ದರು.

Story first published: Tuesday, June 19, 2018, 12:47 [IST]
Other articles published on Jun 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X